ಲಕ್ಷ್ಮೀಪುರ ಮರಡಿ ಮಲ್ಲಿಕಾರ್ಜುನ ಜಾತ್ರೆ ರದ್ದು: ಭಕ್ತರು ಆಗಮಿಸಿ ದೇವರ ದರ್ಶನ

0
18

ಸುರಪುರ: ತಾಲೂಕಿನ ಹೆಸರಾಂತ ದೇವಸ್ಥಾನಗಳಲ್ಲಿ ಒಂದಾದ ಲಕ್ಷ್ಮೀಪುರ ಬಿಜಾಸಪುರದ ಮರಡಿ ಮಲ್ಲಿಕಾರ್ಜುನ ದೇವಸ್ಥಾನದ ಜಾತ್ರಾ ಮಹೋತ್ಸವವನ್ನು ಕೋವಿಡ್ ಕಾರಣದಿಂದ ತಾಲೂಕು ಆಡಳಿತ ರದ್ದುಗೊಳಿಸಿ ಆದೇಶ ಹೊರಡಿಸಿತ್ತು.ಪ್ರತಿ ವರ್ಷದ ಶ್ರಾವಣ ಮಾಸದ ಐದನೆ ಸೋಮವಾರ ನಡೆಯುವ ಜಾತ್ರೆಯನ್ನು ಈ ವರ್ಷದ ಜಾತ್ರೆ ರದ್ದುಗೊಳಿಸಿದ್ದರು,ಸೋಮವಾರ ಬೆಳಿಗ್ಗೆಯಿಂದಲೂ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.

ಜಾತ್ರಾ ಮಹೋತ್ಸವದ ಅಂಗವಾಗಿ ಮರಡಿ ಮಲ್ಲಿಕಾರ್ಜುನ ದೇವಸ್ಥಾನವನ್ನು ಅಲಂಕರಿಸಲಾಗಿತ್ತು.ಅಲ್ಲದೆ ರಥವನ್ನು ಅಲಂಕರಿಸಿ ಪೂಜಾ ಕಾರ್ಯಕ್ರಮ ನಡೆಯಿತು.ಅನೇಕ ಜನ ಭಕ್ತರು ಬೆಳಿಗ್ಗೆಯಿಂದಲೂ ಆಗಮಿಸಿ ದೇವರಿಗೆ ಹೂ ಹಣ್ಣು ನೈವೇದ್ಯ ಅರ್ಪಿಸಿ ನಂತರ ಪ್ರಸಾದವನ್ನು ಸ್ವೀಕರಿಸಿದ್ದು ಕಂಡುಬಂತು.

Contact Your\'s Advertisement; 9902492681

ಈ ಕುರಿತು ಮರಡಿನ ಮಲ್ಲಿಕಾರ್ಜುನ ಜಾತ್ರೆಯ ಅಂಗವಾಗಿ ಶ್ರೀಗಿರಿ ಮಠದ ಪೂಜ್ಯರಾದ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಬೆಳಿಗ್ಗೆ ಶ್ರೀಮಠದಲ್ಲಿ ಇಷ್ಟಲಿಂಗ ಪೂಜಾ ಕಾರ್ಯಕ್ರಮ ನಂತರ ಗೋಪೂಜೆಯನ್ನು ನೆರವೇರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು,ಈಬಾರಿ ರಾಜ್ಯದಲ್ಲಿ ಕೊರೊನಾ ನಿಯಮಗಳು ಜಾರಿಯಲ್ಲಿರುವ ಕಾರಣದಿಂದ ಸಾಂಪ್ರದಾಯಿಕವಾದ ಆಚರಣೆಗಳನ್ನು ಅತ್ಯಂತ ಸರಳವಾಗಿ ಆಚರಿಸಲಾಗುತ್ತಿದೆ.ಭಕ್ತರು ಕೇವಲ ದೇವರ ದರ್ಶನ ಮಾತ್ರ ಪಡೆಯಬಹುದಾಗಿದೆ.ರಥೋತ್ಸವ ಮತ್ತಿತರೆ ಯಾವುದೇ ಕಾರ್ಯಕ್ರಮಗಳು ಇರುವುದಿಲ್ಲವೆಂದು ತಿಳಿಸಿದರು.

ಜಾತ್ರಾ ಮಹೋತ್ಸವದ ಅಂಗವಾಗಿ ಕೆಲವು ವ್ಯಾಪಾರಿಗಳು ದೇವಸ್ಥಾನದ ಮಾರ್ಗದಲ್ಲಿ ಮಿಠಾಯಿ ಮತ್ತು ಮಕ್ಕಳ ಆಟಿಕೆಯ ಅಂಗಡಿಗಳನ್ನು ಹಾಕಲು ಮುಂದಾಗಿದ್ದರು.ಈ ವಿಷಯ ತಿಳಿದ ಸುರಪುರ ಪೊಲೀಸರು ಕೂಡಲೇ ಸ್ಥಳಕ್ಕೆ ತೆರಳಿ ಯಾವುದೇ ಅಂಗಡಿ ಮುಂಗಟ್ಟುಗಳನ್ನು ಹಾಕದಂತೆ ನಿರ್ಭಂಧವಿಧಿಸಿ ತೆರವುಗೊಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here