ಮಂಡ್ಯ: ಜಿಲ್ಲೆಯ ಹಾಲು ಒಕ್ಕೂಟ ಮಂಡಳಿಗೆ ಸೆಪ್ಟೆಂಬರ್ 8ಕ್ಕೆ ಚುನಾವಣೆ ನಿಗದಿ ಪಡಿಸಿ ಜಿಲ್ಲಾಧಿಕಾರಿ ಆದೇಶ ಹೋರಡಿಸಿದ್ದಾರೆ.
ರಾಜ್ಯದ ಎಲ್ಲಾ ಸಹಕಾರಿ ಹಾಲು ಒಕ್ಕೂಟಕ್ಕೆ ಚುನಾವಣೆ ನಡೆದ್ರೂ ಮಂಡ್ಯ ಹಾಲು ಒಕ್ಕೂಟಕ್ಕೆ ಚುನಾವಣೆ ನಡಿದಿರಲಿಲ್ಲ. ಕಳೆದ ತಿಂಗಳಷ್ಟೇ ಆಡಳಿತ ಮಂಡಳಿ ಭ್ರಷ್ಟಚಾರದಲ್ಲಿ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯನ್ನು ಜಿಲ್ಲಾಧಿಕಾರಿ ಸೂಪರ್ ಸೀಡ್ ಮಾಡಲಾಗಿತ್ತು. ಆಡಳಿತ ಮಂಡಳಿ ವಿರುದ್ಧ ಸಿಬಿಐ ತನಿಖೆ ನಡೆಯಬೇಕು ಹಾಲು ಉತ್ಪಾದಕರ ಹೋರಾಟ ಸಮಿತಿ ಸದಸ್ಯರು ಆಗ್ರಹಿಸಿದರು.
ಡಿಸಿ ವಿರುದ್ಧ ಆಡಳಿತ ಮಂಡಳಿ ಸದಸ್ಯರು ಹಾಗೂ ಮಾಜಿ ಸಚಿವ ಚಲುವರಾಯಸ್ವಾಮಿ ಆಕ್ರೋಶ ಹೊರಹಾಕಿದ್ರು, ಇದೀಗ ಹಾಲು ಒಕ್ಕೂಟಕ್ಕೆ ಚುನಾವಣೆ ನಿಗದಿ ಮಾಡಿ ಕರಡು ಮತದಾರರ ಪಟ್ಟಿ ಸಿದ್ದಪಡಿಸುವಂತೆ ಸೂಚಿಸಿರೋ ಜಿಲ್ಲಾಧಿಕಾರಿ, ಸೆಪ್ಟೆಂಬರ್ ನಡೆಯೋ ಚುನಾವಣೆಗೆ ಸಕಲ ಸಿದ್ದತೆ ಆರಂಭ ನಡೆದಿದೆ.