ಕಲಬುರಗಿ: ಬರುವ 17ನೇ ಸೆಪ್ಟೆಂಬರ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಗೆ ಕಲಬುರಗಿಗೆ ಬರುವಂತೆ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಗೆ ಕಲ್ಯಾಣ ಕರ್ನಾಟಕ ಉತ್ಸವ ಸಮಿತಿ ಮತ್ತು ಕಲ್ಯಾಣ ಕರ್ನಾಟಕ ಜನಪರ ಸಂಫರ್ಷ ಸಮಿತಿ ಯ ಮುಖಂಡರ ನಿಯೋಗ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ನಿವಾಸದಲ್ಲಿ ಬೇಟಿ ನೀಡಿ ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಪತ್ರ ಸ್ವೀಕರಿಸಿ ಮುಖ್ಯಮಂತ್ರಿಗಳು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಗೆ ಕಲಬುರಗಿಗೆ ಬರುವದಾಗಿ ತಿಳಿಸಿದ್ದು, ಅದರಂತೆ ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಸಮಿತಿ ಸಲ್ಲಿಸಿದ 11 ಬೇಡಿಕೆಗಳ ಬಗ್ಗೆ ಸಾಕಾರಾತ್ಮಕವಾಗಿ ಸ್ಪಂದಿಸುವ ಬಲವಾದ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉತ್ಸವ ಸಮಿತಿಯ ಮುಖಂಡರಾದ ಶಾಸಕರಾದ ಶಶೀಲ ನಮೋಶಿ,ಬಿ.ಜಿ ಪಾಟೀಲ, ಈಕರಸಾಸಂ ಅಧ್ಯಕ್ಷರಾದ ರಾಜಕುಮಾರ ಪಾಟೀಲ ತೇಲ್ಕೂರ, ಶಾಸಕ ಶಿವರಾಜ ಪಾಟೀಲ, ಹೋರಾಟಗಾರ ಲಕ್ಷ್ಮಣ ದಸ್ತಿ ಸಮಿತಿಯ ಕಲ್ಯಾಣ ಕರ್ನಾಟಕದ ಆಯಾ ಜಿಲ್ಲೆಯ ಮುಖಂಡರುಗಳಾದ ಸಿದ್ದಾರೆಡ್ಡಿ ಬಲ್ಕಲ ಮನೀಷ ಜಾಜು, ಜ್ಞಾನಿಮಿತ್ರ ಸಾಮವೆಲ್,ಶಿವಲಿಂಗಪ್ಪ ಭಂಡಕ,ಅಸ್ಲಮ್ ಚೌಂಗೆ, ಅನಂತ ರೆಡ್ಡಿ, ಬಕ್ಕಪ್ಪ ನಾಗೂರ, ಸಂಧ್ಯಾರಾಜ, ರೂಹನ ಕುಮಾರ, ಡಾ.ರಾಜೇಂದ್ರ ಪ್ರಸಾದ,ವಿಜಯಕುಮಾರ, ಬೀಮರಾಯ ಕಂದಳ್ಳಿ, ಮುರಳಿ, ಉಪಸ್ಥಿತರಿದ್ದರು.