ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯನ್ನು ಎರಡು ತಿಂಗಳ ಒಳಗಡೆ ಮಾಡಬೇಕೆಂದು ಕರ್ನಾಟಕ ಉಚ್ಚ ನ್ಯಾಯಾಲಯದ ಧಾರವಾಡ ಪೀಠ ಸರ್ಕಾರಕ್ಕೆ ಹಾಗೂ ಚುನಾವಣಾಧಿಕಾರಿಗೆ ಆದೇಶಿಸಿದೆ.
ಹೀಗಾಗಿ ಅಕ್ಟೋಬರ್ ಕೊನೆಯ ವಾರ ಇಲ್ಲವಾದರೆ ನವಂಬರ್ ಮೊದಲನೇ ವಾರದಲ್ಲಿ ಸಾಹಿತ್ಯ ಪರಿಷತ್ತಿನ ಚುನಾವಣೆ ನಡೆಯಬಹುದು ಎಂಬುದು ಖಚಿತವಾಗಿದೆ.