ಸರ್ದಾರ್ ವಲ್ಲಭಬಾಯ್ ಪಟೇಲ್ ವೃತ್ತದಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನ

0
15

ಸುಪರು: ನಗರದ ಸರ್ದಾರ್ ವಲ್ಲಭಬಾಯ್ ಪಟೇಲ್ ವೃತ್ತದಲ್ಲಿ ತಾಲೂಕು ಆಡಳಿತದಿಂದ ಕಲ್ಯಾಣ ಕರ್ನಾಟಕ ವಿಮೋಚನಾ ದಿನವನ್ನು ಆಚರಿಸಲಾಯಿತು.

ಶುಕ್ರವಾರ ಬೆಳಿಗ್ಗೆ ನಡೆದ ಕಾರ್ಯಕ್ರಮದ ಆರಂಭದಲ್ಲಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಹಾಗು ನಗರಸಭೆ ಅಧ್ಯಕ್ಷೆ ಸುಜಾತಾ ವೇಣುಗೋಪಾಲ ಜೇವರ್ಗಿ ಅವರು ಸರ್ದಾರ್ ವಲ್ಲಭಬಾಯ್ ಪಟೇಲ್ ಮೂರ್ತಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು.ನಂತರ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಧ್ವಜಾರೋಹಣ ನೆರವೇರಿಸಿದರು ಹಾಗು ಪೊಲೀಸರಿಂದ ಪಿಎಸ್‌ಯ ಕೃಷ್ಣಾ ಸುಬೇದಾರ ನೇತೃತ್ವದಲ್ಲಿ ಧ್ವಜಾ ವಂದನೆ ನಡೆಯಿತು.

Contact Your\'s Advertisement; 9902492681

ನಂತರ ನಡೆದ ಉಪನ್ಯಾಸ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷೆ ಸುಜಾತಾ ವೇಣುಗೋಪಾಲ ಜೇವರ್ಗಿಯವರು ಜ್ಯೋತಿ ಬೆಳಸಗಿಸುವ ಮೂಲಕ ಚಾಲನೆ ನೀಡಿದರು.ನಂತರ ಉಪನ್ಯಾಸಕರಾದ ವೇಣುಗೋಪಾಲ ಜೇವರ್ಗಿಯವರು ಮಾತನಾಡಿ,ಭಾರತಕ್ಕೆ ಅಗಸ್ಟ್ ೧೫ ರಂದು ಸ್ವಾತಂತ್ರ್ಯ ಬಂದರೆ ನಮ್ಮ ಅಂದಿನ ಹೈದರಾಬಾದ್ ಕರ್ನಾಟಕಕ್ಕೆ ೧೯೪೮ರ ಸಪ್ಟೆಂಬರ್ ೧೭ ರಂದು ಸ್ವಾತಂತ್ರ್ಯಗೊಂಡಿತು.ಆದ್ದರಿಂದ ಈ ದಿನವನ್ನು ನಾವು ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ದಿನವೆಂದರೆ ತಪ್ಪಾಗದು ಎಂದರು.ಅಲ್ಲದೆ ಭಾರತದ ಒಕ್ಕೂಟ ವ್ಯವಸ್ಥೆಗೆ ನಮ್ಮ ಭಾಗವನ್ನು ಸೇರ್ಪಡೆಗೊಳಿಸಲು ಶ್ರಮಿಸಿದ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರನ್ನು ಎಲ್ಲರು ಸ್ಮರಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ವೇದಿಕೆ ಮೇಲಿನ ಎಲ್ಲರು ಕೃಷಿ ಇಲಾಖೆಯಿಂದ ಹೊರತರಲಾದ ಕೇಂದ್ರ ಸರಕಾರದ ಆತ್ಮನಿರ್ಭರ ಯೋಜನೆಯ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.ವೇದಿಕೆ ಮೇಲೆ ಅಧ್ಯಕ್ಷರಾಗಿದ್ದ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಮಾತನಾಡಿದರು.ಎಪಿಎಮ್‌ಸಿ ಅಧ್ಯಕ್ಷ ದುರ್ಗಪ್ಪ ಗೋಗಿಕೇರಿ,ತಾಲೂಕು ಪಂಚಾಯತಿ ಇಒ ಅಂಬ್ರೇಶ ಮೂಡಲದಿನ್ನಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ವಿವಿಧ ಸಂಘಟನೆಗಳ ಮುಖಂಡರು ಹಾಗು ಅನೇಕ ಜನ ಸಾರ್ವಜನಿಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here