ಸುರಪುರ ಸದರ ಬಜಾರ್ ಗಜಾನನ ಸಮಿತಿ ರಕ್ತದಾನ ಶಿಬಿರ

0
11

ಸುರಪುರ: ಯಾದಗಿರಿ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಕೈಗೊಂಡಿರುವ ರಕ್ತ ತಪಾಸಣೆಯಲ್ಲಿ ಶೇ೫೦ ರಷ್ಟು ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆ ಇರುವುದು ಕಂಡು ಬಂದಿದ್ದು ಹೀಗಾಗಿ ರಕ್ತಹೀನತೆಯಿಂದ ಬಳಲುತ್ತಿರುವ ಮಹಿಳೆಯರು,ಗರ್ಭೀಣಿ ಮಹಿಳೆಯರು ಹಾಗೂ ಅಪಘಾತ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಬಿದ್ದಾಗ ರಕ್ತದಾನ ಶಿಬಿರಗಳನ್ನು ಏರ್ಪಡಿಸುವ ಮೂಲಕ ರಕ್ತವನ್ನು ಸಂಗ್ರಹಿಸಿ ಸಕಾಲಕ್ಕೆ ರಕ್ತ ಸೌಲಭ್ಯ ಒದಗಿಸುವ ಮೂಲಕ ಯಾದಗಿರಿ ಜಿಲ್ಲೆಯನ್ನು ಅನಿಮೀಯಾ ಮುಕ್ತ ಜಿಲ್ಲೆಯನ್ನಾಗಿಸಲು ಆರೋಗ್ಯ ಇಲಾಖೆಯ ಜೊತೆಗೆ ಸಂಘ-ಸಂಸ್ಥೆಗಳ ಪಾತ್ರ ತುಂಬಾ ಮುಖ್ಯ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ ಹೇಳಿದರು.

ಸ್ಥಳೀಯ ಸದರ್ ಬಜಾರ್ ಗಜಾನನ ಸಮಿತಿ ವತಿಯಿಂದ ನಗರದ ಆರಾಧನಾ ಭವನದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿ ಜಿಲ್ಲೆಯ ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೈಗೆತ್ತಿಕೊಂಡಿರುವ ರಕ್ತ ಪರೀಕ್ಷೆಗಳಲ್ಲಿ ೧೪ ರಿಂದ ೪೫ ವರ್ಷ ವಯಸ್ಸಿನ ಹೆಣ್ಣು ಮಕ್ಕಳಲ್ಲಿ ರಕ್ತ ಹೀನತೆ ಇರುವುದು ಪತ್ತೆಯಾಗಿದ್ದು ಇದ್ಕೆ ಪ್ರಮುಖವಾಗಿ ಪೋಷಕಾಂಶಯುಕ್ತ ಆಹಾರಸೇವನೆ ಕೊರತೆ ಹಾಗೂ ಗುಳಿಗೆ ಔಷಧಗಳನ್ನು ಸರಿಯಾಗಿ ತೆಗೆದುಕೊಳ್ಳದೇ ಇರುವದು ಕಾರಣ ಎಂದು ಹೇಳಿದ ಅವರು ರಕ್ತದಾನ ಶಿಬಿರಗಳ ಮೂಲಕ ಸಂಗ್ರಹಿಸುವ g೩೫೦ಮಿ.ಲೀ. ರಕ್ತವು ಗರ್ಭಿಣಿ ತಾಯಿಂದಿರಿಗೆ ತುರ್ತು ಸಂದರ್ಭದಲ್ಲಿ ಮತ್ತ ಅಪಘಾತಗಳು ಸಂಭವಿಸಿದ ವೇಳೆಯಲ್ಲಿ ಜೀವ ಉಳಿಸಲು ತುಂಬಾ ಅನುಕೂಲವಾಗುತ್ತದೆ ಎಂದು ಹೇಳಿದರು.

Contact Your\'s Advertisement; 9902492681

ಯಾದಗಿರಿಯ ವೈದ್ಯರಾದ ಡಾ.ಸುರಗಿಮಠ ಅವರು ಮಾತನಾಡಿ ಪ್ರತಿ ೩-೪ ತಿಂಗಳಿಗೊಮ್ಮೆ ರಕ್ತವನ್ನು ಕೊಡುವದರಿಂದ ೧೬ ಲಾಭಗಳಿದ್ದು ಹೃದಯಾಘಾತ,ಪಾರ್ಶ್ವವಾಯು,ಲಿವರ್‌ದಿಂದಾಗುವ ಅಪಾಯಗಳು ಕಡಿಮೆಯಾಗುತ್ತವೆ,ಹೊಸ ರಕ್ತ ಜೀವಕೋಶಗಳು ಉತ್ಪಾದನೆಯಾಗುವದರಿಂದ ಆರೋಗ್ಯ ಚೆನ್ನಾಗಿರುತ್ತದೆ ತೂಕವನ್ನು ನಿಯಂತ್ರಿಸುತ್ತದೆ,ರಕ್ತದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುವುದು ಸೇರಿದಂತೆ ಅನೇಕ ಲಾಭಗಳಿವೆ ಎಂದು ತಿಳಿಸಿದರು,ಒಂದು ರಕ್ತದಾನ ಮೂರು ಜೀವ ಉಳಿಸುತ್ತದೆ ಎಂದು ಅವರು ಹೇಳಿದರು.

ನಂತರ ನಡೆದ ರಕ್ತದಾನದಲ್ಲಿ ಸುಮಾರು ಇಪ್ಪತ್ತಕ್ಕೂ ಜನ ರಕ್ತದಾನ ಮಾಡಿದರು.ಈ ಸಂದರ್ಭದಲ್ಲಿ
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ನಾಗರಾಜ ಪಾಟೀಲ ಮಾತನಾಡಿದರು,ಸಮಿತಿ ಅಧ್ಯಕ್ಷ ರಮೇಶಚಂದ ಅಂಚಲಿಯಾ ಅಧ್ಯಕ್ಷತೆ ವಹಿಸಿದ್ದರು,ಸಮಾಜದ ಮುಖಂಡರಾದ ಗೋವರ್ಧನ್ ವ್ಯಾಸ,ಶ್ರವಣಕುಮಾರ ಜೋಷಿ,ಗ್ಯಾನಚಂದ ಜೈನ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ವೆಂಕಟೇಶ ಪಾಟೀಲ ನಿರೂಪಿಸಿದರು ಸುನೀಲಕುಮಾರ ವ್ಯಾಸ ವಂದಿಸಿದರು ಸಮಿತಿಯ ಸದಸ್ಯರಾದ ಶ್ಯಾಮಸುಂದರ ವ್ಯಾಸ,ಇಂದರಕುಮಾರ ಅಂಚಲಿಯಾ,ಮಹೇಂದ್ರ ವ್ಯಾಸ,,ಆದರ್ಶ ವ್ಯಾಸ,ಬ್ರಿಜ್‌ಗೋಪಾಲ ರಾಠಿ,ಡಾ.ಎಮ್.ಎಮ್.ಬೋಡೆ,ಆಶಿಸ್ ಸಿಂಗ್ವಿ,ಕೃಷ್ಣರಾವ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here