ನದಿಯ ಪ್ರವಾಹದಿಂದ ಸ್ಥಗಿತಗೊಂಡಿದ್ದ ಅಕ್ರಮ ಮರಳುಗಾರಿಕೆ ಮತ್ತೆ ಪ್ರಾರಂಭ

0
80

ಶಹಾಬಾದ:ತಾಲೂಕಿನ ಕಾಗಿಣಾ ನದಿಯಲ್ಲಿ ಉಂಟಾದ ಪ್ರವಾಹದಿಂದ ಸ್ಥಗಿತಗೊಂಡಿದ್ದ ಅಕ್ರಮ ಮರಳುಗಾರಿಕೆ ಮತ್ತೆ ಈಗ ರೆಕ್ಕೆ ಪುಕ್ಕ ಬಿಚ್ಚಿಕೊಂಡಿದೆ.

ಇತ್ತಿಚ್ಚಿಗೆ ನಿರಂತರ ಮಳೆಯಾದ ಪರಿಣಾಮ ನದಿಯಲ್ಲಿ ಪ್ರವಾಹ ಉಂಟಾಗಿದ್ದರಿಂದ ಮರಳು ಸಾಗಾಣಿಕೆ ನಿಂತು ಹೋಗಿತ್ತು. ಸದ್ಯ ನದಿಯಲ್ಲಿ ನೀರಿನ ಪ್ರಮಾಣ ಸಂಪರ್ಣ ತಗ್ಗಿದ್ದರಿಂದ ಮತ್ತೆ ತಾಲೂಕಿನ ಗ್ರಾಮಗಳಲ್ಲಿ ರಾತ್ರಿ ಟ್ರ್ಯಾಕ್ಟರ್, ಟಿಪ್ಪರ್‍ಗಳ ಸದ್ದು ಎಂದಿನಂತೆ ಮಾಡತೊಡಗಿವೆ.

Contact Your\'s Advertisement; 9902492681

ನಗರದ ಕಾಗಿಣಾ ನದಿ ಪಾತ್ರದಲ್ಲಿ ಅಕ್ರಮ ಮರಳು ಸಾಗಾಣಿಕೆ ಹಾಗೂ ನಗರದ ವಿವಿದೆಡೆ ಮರಳು ಸಂಗ್ರಹ ಮಾಡುವವರ ಮೇಲೆ ಸ್ಥಳೀಯ ವಿವಿಧ ಇಲಾಖೆಯ ಅಧಿಕಾರಿಗಳು ಕ್ರಮಕೈಗೊಳ್ಳದಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ದಿನನಿತ್ಯ ಮರಳು ದಂಧೆಕೋರರು ನದಿಯಲ್ಲಿನ ಮರಳನ್ನು ರಾಜಾರೋಷವಾಗಿ ಸಾಗಿಸುತ್ತಿದ್ದರೂ, ಪೋಲಿಸ್ ಇಲಾಖೆಯಾಗಲಿ, ಇನ್ನಾವುದೇ ಇಲಾಖೆಯಾಗಲಿ ತಡೆಗಟ್ಟುವಲ್ಲಿ ವಿಫಲವಾಗಿದೆ. ಆಗೋಮ್ಮೆ ಇಗೊಮ್ಮೆ ಅಧಿಕಾರಿಗಳು ನಾಮಕೇ ಭಾಸ್ತೆ ದಾಳಿ ನಡೆಸುತ್ತಿದ್ದಾರೆ.

ಅಲ್ಲದೇ ಟ್ರ್ಯಾಕ್ಟರ್‍ಗಳನ್ನು ಮತ್ತೆ ಬಿಟ್ಟು ಕಳಿಸುತ್ತಿದ್ದಾರೆ. ನದಿ ಪಾತ್ರದ ರಸ್ತೆಗಳಲ್ಲಿ, ಹೊಲಗಳಲ್ಲಿ ಸಂಗ್ರಹಣೆ ಮಾಡಿದ ಅಪಾರ ಪ್ರಮಾಣದ ಮರಳಿನ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆಧುನಿಕ ಯಂತ್ರಗಳನ್ನು ಬಳಸಿ ನದಿಯಲ್ಲಿನ ಮರಳನ್ನು ದಡದವರೆಗೆ ಎಳೆಯುವು ಮೂಲಕ ಕಾಗಿಣಾ ಒಡಲನ್ನು ಬರಿದು ಮಾಡುತ್ತಿದ್ದಾರೆ. ಟ್ರ್ಯಾಕ್ಟರ್, ಟಿಪ್ಪರ್, ಲಾರಿಗಳ ಮೂಲಕ ಮರಳನ್ನು ಸಾಗಿಸುತ್ತಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಅಪಾರ ಹಾನಿಯಾಗುತ್ತಿದ್ದರೂ ಕಂಡು ಕಾಣದಂತೆ ಅಧಿಕಾರಿಗಳು ಮಾತ್ರ ಜಾಣ ಕುರುಡು ಪ್ರದರ್ಶನ ನೀಡುತ್ತಿದ್ದಾರೆ. ಮಳೆಗಾಲ ಆರಂಭವಾಗಿರುವುದರಿಂದ ನದಿಯಲ್ಲಿನ ಮರಳನ್ನು ಸಂಗ್ರಹಿಸಲಾಗುತ್ತಿದೆ. ಅಲ್ಲದೇ ನದಿ ಪಾತ್ರದ ಹಳ್ಳಿಗಳಲ್ಲೂ ಮತ್ತು ಹೊಲಗಳಲ್ಲಿಯೂ ಅಪಾರ ಪ್ರಮಾಣದಲ್ಲಿ ಸಂಗ್ರಹಿಸಲಾಗಿದೆ ಎನ್ನುತ್ತಾರೆ ಸಾರ್ವಜನಿಕರು.

ಆದರೆ ಈ ಸ್ಥಳಗಳಲ್ಲಿ ಸಂಗ್ರಹಣೆ ಮಾಡಿರುವ ಎಲ್ಲ ಮಾಹಿತಿಗಳಿದ್ದರೂ ಅಧಿಕಾರಿಗಳು ಮಾತ್ರ ಈ ಬಗ್ಗೆ ಕ್ರಮಕೈಗೊಳ್ಳದೇ ಹಿಂದೇಟು ಹಾಕುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ.ಪ್ರವಾಹದಿಂದ ನದಿಯಲ್ಲಿ ಚಿನ್ನದಂತ ಮರಳು ಸಂಗ್ರಹವಾಗಿದನ್ನು ಕಂಡು ಮರಳುಗಳ್ಳರು ಮರಳಿಗೆ ಮರಳಾಗಿದ್ದಾರೆ.ಇನ್ನೊಂದು ವಿಪರ್ಯಾಸವೆಂದರೆ ಟ್ರ್ಯಾಕ್ಟರ್‍ಗಳು ಅಕ್ರಮ ಮರಳನ್ನು ಹೊತ್ತು ನಗರದ ಡಿವಾಯ್‍ಎಸ್‍ಪಿ ಕಚೇರಿ, ಪೊಲೀಸ್ ಠಾಣೆಯ ಮುಂಭಾಗದಿಂದ ಹೋಗುತ್ತಿದ್ದರೂ ಕ್ಯಾರೇ ಎನ್ನುತ್ತಿಲ್ಲ.

ಅಕ್ರಮ ಮರಳು ದಂಧೆಯಿಂದ ನೈಸರ್ಗಿಕ ಸಂಪತ್ತು ಬರಿದಾಗುತ್ತಿದೆ. ಇದರಿಂದ ಅಂತರ್ಜಲ ಬತ್ತಿ ಹೋಗುವ ಅಪಾಯವಿದೆ. ಅಕ್ರಮ ಮರಳು ದಂಧೆ ನಡೆಯುತ್ತಿದ್ದರೂ ಯಾವ ಇಲಾಖೆಯೂ ಕಡಿವಾಣ ಹಾಕುವಲ್ಲಿ ಮುಂದಾಗದಿರುವುದಕ್ಕೆ ಜಿಲ್ಲಾಧಿಕಾರಿಗಳೇ ಈ ಮರಳು ದಂಧೆಕೋರರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಪ್ರe್ಞÁವಂತ ನಾಗರಿಕರು ಆಗ್ರಹಿಸಿದ್ದಾರೆ.

ಮಳೆಗಾಲದಲ್ಲಿ ಮರಳಿಗೆ ಎಲ್ಲಿಲ್ಲದ್ದ ಬೇಡಿಕೆ. ಆದ್ದರಿಂದ ಮರಳು ದಂಧೆಕೋರರು ಕೃತಕ ಅಭಾವ ಸೃಷ್ಠಿಸಿ ಹೆಚ್ಚಿನ ಬೆಲೆ ಮಾರಲು ನಗರದ ವಿವಿದೆಡೆ ಮರಳು ಸಂಗ್ರಹಣೆ ಮಾಡಿದ್ದಾರೆ.ಆದರೆ ಪೊಲೀಸ್ ಇಲಾಖೆ ಯಾವುದಕ್ಕೂ ಕ್ರಮಕೈಗೊಳ್ಳುತ್ತಿಲ್ಲ. ರಸ್ತೆಗೆ ನಿಂತು ಸಾರ್ವಜನಿಕರಿಗೆ ದಂಡ ಹಾಕುವ ಪೊಲೀಸರು, ಮರಳು ಲೂಟಿಕೋರರ ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲ- ರಮೇಶ.ಆರ್ ನಾಗರಿಕ.

ಈಗಾಗಲೇ ಒಂದು ಕೇಸ್ ದಾಖಲಿಸಲಾಗಿದೆ. ಬೀಟ್ ಪೊಲೀಸ್ ನೇಮಕ ಮಾಡಲಾಗಿದ್ದು, ಒಂದು ವೇಳೆ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೇ ಅವರ ವಿರುದ್ಧ ಕ್ರಮಕೈಗೊಳ್ಳುತ್ತೆವೆ- ಸಂತೋಷ ಹಳ್ಳೂರ್ ಪಿಐ ನಗರ ಪೊಲೀಸ್ ಠಾಣೆ ಶಹಾಬಾದ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here