ಶಹಾಬಾದ: ರೈತರು ಆರ್ಥಿಕವಾಗಿ ಅಭಿವೃದ್ಧಿಯಾಗುವಲ್ಲಿ ರೈತ ಉತ್ಪಾದಕ ಕಂಪನಿ (ಎಫ್.ಪಿ.ಓ) ಗಳು ಸಹಕಾರಿಯಾಗಲಿವೆ ಎಂದು ಮೈರಾಡ ಸಂಸ್ಥೆಯ ಅಧಿಕಾರಿ ಎಸ್.ಡಿ. ಕಲ್ಯಾಣಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಸೋಮವಾರ ತಾಲೂಕಿನ ಭಂಕೂರ ಗ್ರಾಮದ ಬಸವ ಸಮಿತಿ ಶಾಲಾ ಆವರಣದಲ್ಲಿ ಆಯೋಜಿಸಲಾದ ಭಂಕೂರ ಹಿರೋಡೇಶ್ವರ ರೈತ ಉತ್ಪಾದಕರ ಕಂಪನಿ ನಿಯಮಿತದ ೩ ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ದೇಶದಲ್ಲಿ ರೈತ ಉತ್ಪಾದಕರ ಕಂಪನಿಗಳ ಯುಗ ಪ್ರಾರಂಭವಾಗಿದೆ, ರೈತರು ಹೆಚ್ಚು ಹೆಚ್ಚು ರೈತ ಉತ್ಪಾದಕರ ಕಂಪನಿಗಳಲ್ಲಿ ಷೇರುದಾರರಾಗುವ ಮೂಲಕ ತಮ್ಮದೆ ಕಂಪನಿ ಪ್ರಾರಂಭಿಸಿ ಸ್ವಾವಲಂಬಿಗಳಾಗಬೇಕು ಎಂದು ತಿಳಿಸಿದರು.
ರೈತ ಉತ್ಪಾದಕರ ಕಂಪನಿಗಳಲ್ಲಿ ರೈತರು ಹೆಚ್ಚು ಹೆಚ್ಚು ವ್ಯವಹಾರ ಮಾಡಿ ಕಂಪನಿಯ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಬೇಕು, ಇದರಿಂದ ರೈತರಿಗೆ ಕಡಿಮೆ ದರದಲ್ಲಿ ಸಾಮಾನುಗಳು ಸಿಗುವದಲ್ಲದೆ, ಖರೀದಿದಾರರು ರೈತರ ಮನೆ ಬಾಗಿಲಿಗೆ ಅವರು ಬೆಳೆದ ಬೆಳೆ ಖರಿದಿಸಲು ಬರುತ್ತಾರೆ, ಇದರಿಂದ ರೈತರಿಗೆ ಆರ್ಥಿಕವಾಗಿ ಸಹಕಾರಿಯಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಬಸವ ಸಮಿತಿ ಅಧ್ಯಕ್ಷ ಅಮೃತ್ ಮಾನಕರ್ ಮಾತನಾಡಿ, ಹಿರೋಡೇಶ್ವರ ರೈತ ಉತ್ಪಾದಕರ ಕಂಪನಿ ಕಳೆದ ೩ ವರ್ಷಗಳಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದೆ. ಇದರಿಂದ ಜನರಿಗೆ ತುಂಬಾ ಸಹಕಾರಿಯಾಗಿದ್ದು, ಕಂಪನಿ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಮಲ್ಲಿಕಾರ್ಜುನ ಇಟಗಿ ಮಾತನಾಡಿದರು. ಕಂಪನಿಯ ಅಧ್ಯಕ್ಷ ವೆಂಕಾರೆಡ್ಡಿ ಪಾಟೀಲ್ ಯರಗಲ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ, ಕಂಪನಿಯ ನಿರ್ದೇಶಕರಾದ ನಾಗಣ್ಣ ಮಡಿವಾಳ, ಶ್ರೀದೇವಿ ಮರತೂರ, ಸುನೀಲ್ ಗುಡೂರ್, ರಾಜಶೇಖರ್ ಮಾಸ್ತರ್, ಶಿವರಾಜ್ ನಿಂಗಣ್ಣೋರ್, ಮಲ್ಲಿಕಾರ್ಜುನ್ ಸ್ವಾಮೀ, ಬಸವರಾಜ ರಾಮಗೊಂಡ, ಹೀರಾಚಂದ್ ಗುಗರಿ, ಮಾಲಾಶ್ರೀ ಕಟ್ಟಿ, ವಿಶ್ವನಾಥ್, ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗುರು.ಪಿ.ಹೆಚ್, ನಾಗೇಂದ್ರ ಕಂಠಿ, ಕ್ಷೇಮಲಿಂಗ್ ನರೋಣ, ಮಹಾದೇವಿ ಹೂಗಾರ, ಚಂದ್ರಕಲಾ ತಿಪ್ಪಣ್ಣೋರ್, ಮೇನಿಕಾ, ಪ್ರೇಮಾ, ಸುಧಾರಾಣಿ ಸೇರಿದಂತೆ ನೂರಾರು ರೈತರು, ಮಹಿಳೆಯರು ಹಾಜರಿದ್ದರು.