ದೇವತ್ಕಲ್ ಗ್ರಾಮದಲ್ಲಿ ನಕಲಿ ವೈದ್ಯರ ಕ್ಲಿನಿಕ್ ಮೇಲೆ ಟಿಹೆಚ್‌ಒ ದಾಳಿ

0
30

ಸುರಪುರ: ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ಪದವಿ ಪಡೆಯದೆ ಕ್ಲಿನಿಕ್ ನಡೆಸುತ್ತಿದ್ದ ನಕಲಿ ವೈದ್ಯರ ಕ್ಲಿನಿಕ್ ಮೇಲೆ ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ.ನಾಯಕ ಮತ್ತವರ ತಂಡ ದಾಳಿ ನಡೆಸಿದೆ.

ಬುಧವಾರ ಮದ್ಹ್ಯಾನ ನಡೆದ ದಾಳಿಯ ವೇಳೆ ನಕಲಿ ವೈದ್ಯರಾದ ಸದ್ದಾಂ ಮತ್ತು ಶಿವಾನಂದ ಪಾಟೀಲ್ ಎನ್ನುವವರು ಪದವಿ ಪಡೆಯದೆ ಆಸ್ಪತ್ರೆ ನಡೆಸುತ್ತಿದ್ದ ವೇಳೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

Contact Your\'s Advertisement; 9902492681

ಈ ಕುರಿತು ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ.ನಾಯಕ ವಿವರಣೆ ನೀಡಿ,ದೇವತ್ಕಲ್ ಗ್ರಾಮದಲ್ಲಿ ಪದವಿ ಪಡೆಯದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ನಕಲಿ ವೈದ್ಯರಾದ ಸದ್ದಾಂ ಮತ್ತು ಶಿವಾನಂದ ಹಿರೇಮಠ ಎನ್ನುವವರು ಹಲೋಪಥಿಕ್ ಔಷಧಿಯನ್ನು ನೀಡುತ್ತಿದ್ದರು,ಈ ಸಂದರ್ಭದಲ್ಲಿ ಕ್ಲಿನಿಕಲ್ಲಿ ತಪಾಸಣೆ ನಡೆಸಿದಾಗ ಔಷಧಿ ಇರುವುದು ಕಂಡುಬಂದಿದೆ.ನಕಲಿ ವೈದ್ಯರಾಗಿದ್ದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಇಬ್ಬರ ಮೇಲೆ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.

ದಾಳಿ ವೇಳೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ: ನಾಗರಾಜ ಪಾಟೀಲ್,ಟಿಹೆಚ್‌ಒ ಕಚೇರಿ ಸಿಬ್ಬಂದಿ ವಿಶ್ವನಾಥ ನಾಯಕ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here