ಸಂಸದ ಉಮೇಶ್ ಜಾಧವ್ ರಾಜೀನಾಮೆಗೆ ಆಗ್ರಹ

0
81

ಕಲಬುರಗಿ: ಆಗಸ್ಟ್ 18ರಲ್ಲಿ ನಡೆದ ಪ್ರಸಾರ ಭಾರತಿ ಆಡಳಿತ ಮಂಡಳಿಯ 103 ನೇ ಸಭೆಯಲ್ಲಿ ಕಲಬುರಗಿ ದೂರದರ್ಶನ ಕೇಂದ್ರ ಮುಚ್ಚುವ ನಿರ್ಧಾರ ಕೈಗೊಳ್ಳಲಾಗಿದೆ. ಅಕ್ಟೋಬರ್ 31ರ ಒಳಗಾಗಿ ಮುಚ್ಚುವ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ವರದಿ ನೀಡಲು ಡಿಡಿಕೆ ಮುಖ್ಯಸ್ಥರಿಗೆ ನಿರ್ದೇಶನ ನೀಡಿದೆ.

ಈ ಕುರಿತು ಇಲ್ಲಿನ ಗ್ರಾಮೀಣ ಯುವ ಕಾಂಗ್ರೆಸ್ ಸಂಯೋಜಕ ಶಿವಾನಂದ ಆರ್ ಕಿಳ್ಳಿ ಪತ್ರಿಕಾ ಹೇಳಿಕೆ ನೀಡಿ, ಡಿಡಿಕೆ ಮುಚ್ಚಲು ಅವಕಾಶ ಕೊಡುವುದಿಲ್ಲ. ಸಂಸದ ಡಾ. ಉಮೇಶ್ ಜಾಧವ್ ದೂರದರ್ಶನ ಯಾವುದೇ ಕಾರಣಕ್ಕೂ ಮುಚ್ಚಲು ಸಾಧ್ಯವಿಲ್ಲ ಎಂದು ನೀಡಿರುವ ಭರವಸೆ ಹುಸಿಯಾಗಿದೆ ಎಂದರು.

Contact Your\'s Advertisement; 9902492681

ಟೆಕ್ಸ್ ಟೈಲ್ಸ್ ಪಾರ್ಕ್, ಶೂರ್ ಪಾರ್ಕ್, ಏಮ್ಸ್, ರೈಲ್ವೆ ವಿಭಾಗೀಯ ಕಚೇರಿ ಸೇರಿದಂತೆ ಕಲಬುರಗಿಗೆ ಮಂಜೂರಾಗಿರುವ ಒಂದೊಂದೇ ಯೋಜನೆಗಳು ವಾಪಸ್ ಹೋಗುತ್ತಿದ್ದು ಅದರ ಪಾಲಿಗೆ ಈಗ ದೂರದರ್ಶನವು ಸೇರಿದೆ, ಮಲ್ಲಿಕಾರ್ಜುನ ಖರ್ಗೆ ಅವಧಿಯಲ್ಲಿ ಅನೇಕ ಯೋಜನೆಗಳು ಕಲಬುರಗಿ ತಂದು ಅಭಿವೃದ್ಧಿಗೆ ದಾರಿ ಹಾಕಿದರು.

ಆದರೆ ಲೋಕಸಭಾ ಸದಸ್ಯರಾಗಿ ಡಾ. ಉಮೇಶ್ ಜಾಧವ್ ಅವರ ಅವಧಿಯಲ್ಲಿ ಒಂದೊಂದೇ ಯೋಜನೆ ವಾಪಸ್ ಆಗುತ್ತಿರುವುದು ವಿಪರ್ಯಾಸ. ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ESIC, GIMS, ಕೇಂದ್ರೀಯ ವಿಶ್ವವಿದ್ಯಾಲಯದ ಅನೇಕ ಯೋಜನೆಗಳು ವಾಪಸ್ ಹೋಗುವುದರಲ್ಲಿ ಅನುಮಾನವೇ ಇಲ್ಲ ಅದಕ್ಕಾಗಿ ನೈತಿಕ ಹೊಣೆ ಹೊತ್ತು ಸ್ವಯಂ ಪ್ರೇರಿತರಾಗಿ ಸಂಸದರು ರಾಜೀನಾಮೆ ನೀಡಬೇಕು ಎಂದು ಶಿವಾನಂದ ಆರ್ ಕಿಳ್ಳಿ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here