ಕಲಬುರಗಿ: ಕರ್ನಾಟಕ ವಿಧಾನಸಭೆಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ಈ ಪ್ರಶಸ್ತಿಗೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರ ಆಯ್ಕೆ ನಿಜಕ್ಕೂ ಅತ್ಯಂತ ಸೂಕ್ತವಾಗಿದೆ. ಇಂತಹ ಪ್ರಶಸ್ತಿಗೆ ಪಾತ್ರರಾದಂತ ಯಡಿಯೂರಪ್ಪನವರಿಗೆ ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಅಭಿನಂದನೆ ತಿಳಿಸಿದ್ದಾರೆ.
ರೈತ ನಾಯಕ, ಅಭಿವೃದ್ಧಿ ಪರವಾದ ಆಡಳಿತಗಾರ ಎಂದು ಹೆಸರು ಪಡೆದ ಯಡಿಯೂರಪ್ಪನವರು ಈ ಪ್ರಶಸ್ತಿಗೆ ಭಾಜನರಾಗಿದ್ದು ಅತ್ಯಂತ ಸಮರ್ಥನೀಯ. ಕರ್ನಾಟಕ ವಿಧಾನಸಭೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪ್ರಶಸ್ತಿ ನೀಡುವ ಪರಂಪರೆಯನ್ನು ಪ್ರಾರಂಭಿಸಿದ ವಿಧಾನ ಸಭಾಧ್ಯಕ್ಷರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೂ ನನ್ನ ಅನಂತ ಧನ್ಯವಾದಗಳು ಅರ್ಪಿಸಿದ್ದಾರೆ.
ಈ ರೀತಿಯ ಪ್ರಶಸ್ತಿ ಪುರಸ್ಕಾರಗಳಿಂದ ಜನಪ್ರತಿನಿಧಿಗಳಲ್ಲಿ ಕರ್ತವ್ಯ ನಿರ್ವಹಣೆ ಬಗ್ಗೆ ಕಾಳಜಿ ಮತ್ತು ಆಸಕ್ತಿಗಳು ಸಹಜವಾಗಿ ಇಮ್ಮಡಿಗೊಳ್ಳುತ್ತದೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.
ಇಂದು ಕರ್ನಾಟಕ ಶಾಸನಸಭೆಗಳ ಇತಿಹಾಸದಲ್ಲೇ ಮತ್ತೊಂದು ದಾಖಲೆ. ಸನ್ಮಾನ್ಯ ಲೋಕ ಸಭಾಧ್ಯಕ್ಷರಾದ ಓಂ ಬಿರ್ಲಾ ಅವರನ್ನು ನಮ್ಮ ಜಂಟಿ ಶಾಸನ ಸಭೆಗಳಿಗೆ ಆಮಂತ್ರಿಸಿ ಅವರಿಂದ ಪ್ರಜಾಪ್ರಭುತ್ವದ ಕುರಿತು ಉಪನ್ಯಾಸ ಏರ್ಪಡಿಸಿದ್ದು ಕೂಡ ನಿಜಕ್ಕೂ ಅರ್ಥಪೂರ್ಣ. ಈ ಬಗ್ಗೆ ವಿಧಾನಸಭಾಧ್ಯಕ್ಷರಿಗೆ ಮತ್ತು ವಿಧಾನಪರಿ?ತ್ತಿನ ಸಭಾಪತಿಗಳಿಗೆ ನಾನು ನನ್ನ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.