ದೂರದರ್ಶನ ಕೇಂದ್ರ ಮುಚ್ಚಿದರೆ ಉಗ್ರ ಹೋರಾಟ: ಕೇಂದ್ರಕ್ಕೆ ಎಚ್ಚರಿಕೆ

0
34

ಕಲಬುರಗಿ: ರಾಜ್ಯದ ಮೊದಲ ದೂರದರ್ಶನ ಕೇಂದ್ರ ಎಂದೇ ಹೆಸರಾದ ಕಲಬುರಗಿ ದೂರದರ್ಶನ ಕೇಂದ್ರ ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಿದರೆ ಕೇಂದ್ರ ಸರ್ಕಾರದ ವಿರುದ್ಧ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಹಿರಿಯ ಸಾಹಿತಿ ಎ.ಕೆ.ರಾಮೇಶ್ವರ ಹೋರಾಟಗಾರರಾದ ಲಿಂಗರಾಜ ಸಿರಗಾಪೂರ,ಎ.ಎಸ್.ಭದ್ರಶೆಟ್ಟಿ,ಕಸಾಪ ತಾಲೂಕು ಅಧ್ಯಕ್ಷ ಸಿ.ಎಸ್.ಮಾಲಿಪಾಟೀಲ ಜಂಟಿಯಾಗಿ ಎಚ್ಚರಿಕೆ ನೀಡಿದ್ದಾರೆ.

ದೂರದರ್ಶನ ಕೇಂದ್ರಕ್ಕೆ ಇಂದು ಭೇಟಿ ನೀಡಿದ ನಂತರ ಪ್ರತಿಭಟಿಸಿ ಮಾತನಾಡಿದ ಅವರು 1977ರಲ್ಲಿ ಸ್ಥಾಪನೆಯಾಗಿ ಕರ್ನಾಟಕದ ಮೊದಲ ದೂರದರ್ಶನ ಪ್ರಸಾರ ಕೇಂದ್ರ ಇದಾಗಿದ್ದು ಸುಮಾರು 6 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ.ಸುಸಜ್ಜಿತ ಸ್ಟುಡಿಯೋ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರೋಪಕರಣಗಳು ಹೊಂದಿರುವ ಈ ದೂರದರ್ಶನವನ್ನು ಕೇಂದ್ರ ಸರ್ಕಾರ ಮುಚ್ಚಲು ಹೊರಟಿದೆ.

Contact Your\'s Advertisement; 9902492681

ಸಾಂಸ್ಕ್ರತಿಕ, ಸಾಹಿತ್ಯ ಕಾರ್ಯಗಳು ಹಾಗೂ ರೈತರಿಗೆ ನೆರವಾಗುವ ಉದ್ದೇಶದಿಂದ ದೂರದರ್ಶನ ಕೇಂದ್ರ ನಿರ್ಮಾಣ ಮಾಡಲಾಗಿದೆ. ಮೊದಲು ದೂರದರ್ಶನ ಕೇಂದ್ರದಲ್ಲಿ 130 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದರು.ಈಗ ಕೇವಲ 27 ಜನ ಸಿಬ್ಬಂದಿಗಳಿದ್ದಾರೆ.ಡಿಜಿಟಲೀಕರಣ ಮಾಡುವ ನೆಪದಲ್ಲಿ ದೂರದರ್ಶನ ಕೇಂದ್ರ ಹಂತ ಹಂತವಾಗಿ ಬಂದ್ ಮಾಡುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.

ಸಂಸದ ಉಮೇಶ ಜಾಧವ ಅವರು ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.ಆದರೆ ಅಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಅಕ್ಟೋಬರ್ 30 ರ ಒಳಗೆ ಕೆಲಸದಿಂದ ತೆರಳುವಂತೆ ಗಡುವು ನೀಡಲಾಗಿದೆ.ಸಂಸದರ ಹೇಳಿಕೆ ಅಕ್ಷರಶಃ ಗೊಂದಲದಿಂದ ಕೂಡಿದ್ದು ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.

ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುತ್ತಿಲ್ಲ. ಕಲಬುರಗಿಯಲ್ಲೇ ಕುಳಿತು ಪತ್ರಿಕೆಯಲ್ಲಿ ಹೇಳಿಕೆ ನೀಡುತ್ತಿದ್ದಾರೆ.ಇದು ಖಂಡನೀಯ.ಒಂದು ವೇಳೆ ದೂರದರ್ಶನ ಕೇಂದ್ರ ಬಂದ್ ಆದರೆ ಇದಕ್ಕೆ ಸಂಸದರ ವೈಫಲ್ಯವೇ ಕಾರಣವಾಗುತ್ತದೆ.

ದೂರದರ್ಶನ ಕೇಂದ್ರ ಉಳಿಸಲು ಉಗ್ರ ಹೋರಾಟ ಹಂತ ಹಂತವಾಗಿ ರೂಪಿಸಲು ಸಧ್ಯದಲ್ಲೆ ಸಾಹಿತಿಗಳ,ಕಲಾವಿದರ, ಬುದ್ಧಿ ಜೀವಿಗಳ,ರೈತರ ಹಾಗೂ ಎಲ್ಲಾ ಪಕ್ಷದ ಮುಖಂಡರುಗಳು ಸಭೆ ಕರೆದು ಚರ್ಚೆ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here