ಕಲಬುರಗಿ: ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಕಚೇರಿಯಲ್ಲಿ ಇಂದು ಅಲ್ಪಸಂಖ್ಯಾತ ಮೋರ್ಚಾದ ಸದಸ್ಯರಿಂದ ದೀನದಯಾಳ್ ಉಪಾಧ್ಯಾಯ ಅವರ 105ನೇ ಜನ್ಮದಿನ ಆಚರಿಸಿದರು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಸದ್ದಾಮ್ ಹುಸೇನ್ ವಜೀರಗಾಂವ, ಮೈನಾರಿಟಿ ಮೋರ್ಚಾದ ಜಿಲ್ಲಾ ಸಿಟಿ ಅಧ್ಯಕ್ಷರಾದ ಅಬ್ದುಲ್ ರಬ್, ಮೈನಾರಿಟಿ ಮೋರ್ಚಾದ ಸಿಟಿ ಜನರಲ್ ಸೆಕ್ರೆಟರಿ ಆದಂತ ನಝಮೋದೀನ ಮಾಲಿಪಾಟೀಲ್, ಮುಸ್ತಫಾ, ಸಾಮಾಜಿಕ ಜಾಲತಾಣದ ಸಂಚಾಲಕರಾದ ಆನಂದ್ ಚೌಹಾಣ್, ಜಿಲ್ಲಾ ಮಾಧ್ಯಮ ಪ್ರಮುಖರಾದವರು ಸೇರಿದಂತೆ ಇತರರು ಹಾಜರಿದ್ದರು