ಬಾರತ್ ಬಂದ್ ಹೋರಾಟಕ್ಕೆ ಬೆಂಬಲಿಸುವಂತೆ ಆಗ್ರಹ

0
12

ಶಹಾಬಾದ: ರೈತ-ಕೃಷಿ ಕಾರ್ಮಿಕ ಸಂಘಟನೆ ಹಾಗೂ ಎಸ್‌ಯುಸಿಐ (ಕಮ್ಯೂನಿಷ್ಟ್) ಪಕ್ಷದ ಸಮಿತಿಯಿಂದ ಶನಿವಾರ ತಾಲೂಕಿನ ಭಂಕೂರ ಕ್ರಾಸನಲ್ಲಿ ರೈತ ವಿರೋಧಿ ಮೂರು ಕರಾಳ ಕಾಯ್ದೆಗಳನ್ನು ಹಿಮ್ಮೆಟಿಸಲು ಸಂಯುಕ್ತ ಕಿಸಾನ್ ಮೋರ್ಚ್ ಕರೆ ನೀಡಿದ ಸೆಪ್ಟಂಬರ್ ೨೭ ರಂದು ಭಾರತ ಬಂದ್ ಹೋರಾಟದ ಪ್ರಚಾರ ಕೈಗೊಳ್ಳಲು ಸಾರ್ವಜನಿಕ ಸಭೆ ಮಾಡಲಾಯಿತು.

ಎಐಡಿವೈಓ ಯುವಜನ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಜಗನ್ನಾಥ ಎಸ್.ಎಚ್ ಮಾತನಾಡಿ, ಮೂರು ಕರಾಳ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲು ಮುಂದಾಗಿರುವ ಕೇಂದ್ರದ ಬಿಜೆಪಿ ಸರ್ಕಾರವು ದೇಶದ ರೈತರು ಹಾಗೂ ಜನಸಾಮಾನ್ಯರನ್ನು ಬೀದಿಪಾಲು ಮಾಡಲು ಸಂಪೂರ್ಣ ಸಿದ್ದತೆ ಮಾಡಿಕೊಂಡಿದೆ. ಉಳುವ ನೇಗಿಲ ಯೋಗಿಗಳನ್ನು ಕೃಷಿ ಭೂಮಿಯಿಂದ ಉಕ್ಕಲೆಬ್ಬಿಸಿ ಅಂಬಾನಿ, ಆದಾನಿ ರಂತಹ ಕಾರ್ಪೋರೇಟ್ ಕಂಪನಿಗಳಿಗೆ ಗುಲಾಮರನ್ನಾಗಿಸಲು ಪ್ರಧಾನಿ ನರೇಂದ್ರ ಮೋದಿಯವರು ಹೊಸದಾದ ಕುಣಿಕೆಯನ್ನು ಹೆಣಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ಆರ್.ಕೆ.ಎಸ್ ರೈತ ಸಂಘಟನೆಯ ತಾಲೂಕ ಕಾರ್ಯದರ್ಶಿ ರಾಜೇಂದ್ರ ಅತನೂರ ಮಾತನಾಡಿ, ಕಳೆದ ೧೧ ತಿಂಗಳಿಂದ ರೈತರು ದೆಹಲಿಯಲ್ಲಿ ಹೋರಾಟ ನಡೆಸುತ್ತಿದ್ದರೂ ಕಿವುಡ ಮೋದಿ ಸರ್ಕಾರಕ್ಕೆ ಅನ್ನದಾತರ ಅಳಲು ಕೇಳುತ್ತಿಲ್ಲ. ಕೇಂದ್ರದಲ್ಲಿ ಏಳು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರದಿಂದ್ದಾಗಿ ದೇಶದ ಬಡಜನರ ಬದುಕು ಬೆಲೆ ಏರಿಕೆಯ ಬಿಸಿಯಲ್ಲಿ ಕುದಿಯುತ್ತಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ವಿದ್ಯುತ್ ದರ ಹಾಗೂ ಇತರ ಅಗತ್ಯ ವಸ್ತುಗಳ ದರ ಗಗನಕ್ಕೇರಿ ಜನಸಾಮಾನ್ಯರ ಜೀವನ ಕಂಗೆಟ್ಟಿದೆ. ಬಡವರ ಬದುಕು ಅಸಹನೀಯವಾಗಿದೆ.

ರೈತರು, ಮಹಿಳೆಯರು, ವಿದ್ಯಾರ್ಥಿಗಳು, ಯುವಜನರು, ಕಾರ್ಮಿಕರು ತೀವ್ರವಾದ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ಹೇಳುತ್ತ ಈ ಎಲ್ಲಾ ಸಮಸ್ಯೆಗಳ ವಿರುದ್ಧ ಒಂದು ಪ್ರಬಲವಾದ ಜನಾಂದೋಲನ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ದುರಾಡಳಿತ ಹಾಗೂ ರೈತವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಭಾರತ ಬಂದ್ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಕರೆ ನೀಡಿದರು.

ಆರ್,ಕೆ.ಎಸ್ ಹಾಗೂ ಎಸ್.ಯು.ಸಿ.ಐ ಮುಖಂಡ ಗಣಪತರಾವ.ಕೆ.ಮಾನೆ,ರಾಘವೇಂದ್ರ ಎಮ್.ಜಿ. ಸಿದ್ದು ಚೌಧರಿ, ಗುಂಡಮ್ಮ ಮಡಿವಾಳ, ತುಳಜರಾಮ.ಎನ್.ಕೆ, ರಮೇಶ ದೇವಕರ, ನೀಲಕಂಠ. ಎಮ್ ಹುಲಿ, ತಿಮ್ಮಣ್ಣ ಮಾನೆ, ಪ್ರವೀಣ ಬಣವಿಕರ್, ಶಿಲ್ಪಾ ಹುಲಿ, ರಾಧಿಕಾ ಚೌಧರಿ, ಸುಕನ್ಯಾ. ರಘು ಪವಾರ, ಶ್ರೀನಿವಾಸ, ಸೇರಿದಂತೆ ರೈತರು,ವಿದ್ಯಾರ್ಥಿಗಳು,ಯುವಜನರು,ಮಹಿಳೆಯರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here