ಶಹಾಬಾದ:ಸೆಪ್ಟೆಂಬರ್ ೨೭ ರಂದು ಕರೆ ನೀಡಿರುವ ಭಾರತ್ ಬಂದ್‌ಗೆ ಬೆಂಬಲಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಶನಿವಾರ ಸಂಯುಕ್ತ ಹೋರಾಟ ಕರ್ನಾಟಕ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕ, ರೈತ, ದಲಿತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ.ಅಲ್ಲದೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವುದರ ಮೂಲಕ ಜನರನ್ನು ಸಂಕಷ್ಟದಲ್ಲಿ ನೂಕಿದ್ದಾರೆ. ಆನರು ಜೀವನ ನಡೆಸುವುದು ಕಷ್ಟಕರವಾಗಿದೆ. ಸುಳ್ಳು ಹೇಳುವ ಮೂಲಕ ಅಧಿಕಾರಕ್ಕೆ ಬಂದ ಸರಕಾರ ನಂತರ ಯಾವುದೇ ಜನಪರವಾದ ಆಡಳಿತ ನೀಡಿಲ್ಲ.ಜನವಿರೋಧಿ ನೀತಿಯನ್ನು ಅನುಸರಿಸುವುದಲ್ಲದೇ, ಬಂಡವಾಳಶಾಹಿಗಳ ಪರವಾಗಿ ನಿಂತು ದೇಶವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿದ್ದಾರೆ.ಅಗ್ತಯ ವಸ್ತುಗಳ ಬೆಲೆ ಕಡಿಮೆ ಮಾಡಬೇಕು.
ಮೂರು ಕೃಷಿ ಕಾಯ್ದೆಗಳನ್ನು ಹಾಗೂ ವಿದ್ಯುತ್ ಮಸೂದೆ ರದ್ದು ಮಾಡಬೇಕು.ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು. ರೈತರ ಹೋರಾಟ ರಾಜಕೀಯ ಪ್ರೇರಿತವಾಗಿದೆ ಎಂದ ಮುಖ್ಯಮಂತ್ರಿ ಬೊಮ್ಮಾಯಿ ಕೂಡಲೇ ರೈತರಿಗೆ ಕ್ಷಮೆಯಾಚಿಸಬೇಕು. ಅತಿವೃಷ್ಟಿಯಿಂದ ಹಾಳಾದ ಬೆಳೆಗಳಿಗೆ ಪ್ರತಿ ಎಕರೆಗೆ ೨೫ ಸಾವಿರ ಪರಿಹಾರ ಘೋಷಣೆ ನೀಡಬೇಕು.ರಾಜ್ಯದಲ್ಲಿ ಎಸ್.ಸಿ,ಎಸ್‌ಟಿ, ಓಬಿಸಿ ವಿದ್ಯಾರ್ಥಿಗಳ ಪದವಿ ಮತ್ತುಸ್ನಾತಕೋತ್ತರ ಪೆಮೆಂಟ್ ಸೀಟ್ ಪಡೆದವರಿಗೆ ವಿದ್ಯಾರ್ಥಿ ವೇತನ ಸ್ಥಗಿತಗೊಳಿಸಿರುವುದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.ಅಲ್ಲದೇ:ಸೆಪ್ಟೆಂಬರ್ ೨೭ ರಂದು ಕರೆ ನೀಡಿರುವ ಭಾರತ್ ಬಂದ್‌ಗೆ ಬೆಂಬಲಿಸಿ ಹೋರಾಟದಲ್ಲಿ ಸಕ್ರೀಯವಾಗಿ ಭಾಗವಹಿಸಲಾಗುವುದು ಎಂದರು.
ದಸಂಸ ಸಂಘಟನಾ ಸಂಚಾಲಕ ಮಲ್ಲಣ್ಣ ಮಸ್ಕಿ, ದಲಿತ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಪೂಜಪ್ಪ ಮೇತ್ರೆ, ಕರ್ನಾಟ ಪ್ರಾಂತ ರೈತ ಸಂಘದ ಸಂಚಾಲಕ ರಾಯಪ್ಪ ಹುರಮುಂಜಿ, ಕರ್ನಾಟ ಪ್ರಾಂತ ರೈತ ಸಂಘದ ಚಿತ್ತಾಪೂರ ತಾಲೂಕಾಧ್ಯಕ್ಷ ಸಾಯಿಬಣ್ಣ ಗುಡುಬಾ, ಕಾರ್ಯದರ್ಶಿ ಶಕುಂತಲಾ ಪವಾರ, ವಿಜಯಕುಮಾರ ಕಂಠಿಕರ್ ಸೇರಿದಂತೆ ಅನೇಕರು ಇದ್ದರು.