ಆಳಂದ: ನೆಪಾಳದಲ್ಲಿ ಈಚೆಗೆ ಸೌತ್ ಏಸಿಯನ್ ಫೆಡರೇಷನ್ ಆಫ್ ಆಲ್ ಸ್ಪೋಟ್ಸ್ ಸಂಸ್ಥೆ ಆಯೋಜಿಸಿದ್ದ ಓಪನ್ ಇಂಟರ್ ನ್ಯಾಷನಲ್ ಗೇಮ್ಸ್ ೨೦೨೧ನೇ ಸಾಲಿನ ೮೬ ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗೆದ್ದು ಚಿನ್ನದ ಪದಕ ಪಡೆದ ತಾಲೂಕಿನ ನಿರಗುಡಿಯ ನಿವಾಸಿ ಅಮರ ಮಸರೆ ಅವರು ಪಟ್ಟಣದಲ್ಲಿ ಬುಧವಾರ ಆಗಮಿಸಿದ್ದಾಗ ಗ್ರಾಮದ ಮುಖಂಡರು ಆತ್ಮೀಯವಾಗಿ ಸ್ವಾಗತಿಸಿಕೊಂಡು ಸನ್ಮಾನಿಸಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿದ ಅಮರ ಮಸರೆ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಕುಸ್ತಿ ಸ್ಪರ್ಧೆಯಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸುವ ಆಸೆಯೊಂದಿಗೆ ಮುಂದಿನ ಸಿದ್ಧತೆಯಲ್ಲಿ ತೊಡಗಿದ್ದೇನೆ. ಗ್ರಾಮದ ಮುಖಂಡರು ನನ್ನ ಪ್ರತಿಭೆಗೆ ಸನ್ಮಾನಿಸಿದ್ದು ಮರೆಯಲಾರೆ ಎಂದು ಅವರು, ನನ್ನಂತೆ ಉತ್ತಮ ಕುಸ್ತಿಪಟುಗಳನ್ನಾಗಿಸಲು ಹೊಸಬರಿಗೆ ಪ್ರೇರಪಿಸಲಾಗುವುದು ಎಂದು ಹೇಳಿದರು.
ಹಿರಿಯ ಶಂಕರರಾವ್ ದೇಶಮುಖ ಅವರು ವಿಜೇತ ಅಮರ ಮಸರೆ ಅವರಿಗೆ ಶಾಲು ಹೋದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಿದ್ಧರಣ್ಣರಾವ್ ದೇಶಮುಖ, ಶಾಂತಪ್ಪ ಪಾಟೀಲ ತೀರ್ಥ, ಆನಂದ ದೇಶಮುಖ, ಯುವರಾಜ ಹತ್ತರಕಿ, ಸಂಜಯ ದೇಶಮುಖ, ರಾಜು ಮತ್ತಿತರು ಇದ್ದರು.