ಜೇವರ್ಗಿ: ಕ್ಷೀರಭಾಗ್ಯ ಸೇರಿದಂತೆ ಅಂಗನವಾಡಿ ಮಕ್ಕಳಿಗೆ ತಲುಪಬೇಕಾಗಿದ್ದ ಹಾಲಿನ ಪುಡಿ ಹಾಗೂ ಇತರ ಸರಕಾರ ಸರಬರಾಜು ಮಾಡಿದ ಹಾಲಿನ ಪುಡಿಯ ಪ್ಯಾಕೆಟ್ಗಳು ಅಕ್ರಮವಾಗಿ ಮಾರಾಟ ಮಾಡಲು ಸಾಗಿಸುತ್ತಿದ ಗುಡ್ಸ್ ವಾಹನವನ್ನು ಜೇವರ್ಗಿ ತಾಲ್ಲೂಕಿನ ನೆಲೋಗಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆಕ್ರಮ ದಸ್ತಾನುಗಳು ವಾಹನದಲ್ಲಿ ಸಾಗಿಸುತ್ತಿರುವ ಬಗ್ಗೆ ಇಲ್ಲಿನ ಮಾಹಿತಿ ಹಕ್ಕು ಕಾರ್ಯಕರ್ತರ ಮಾಹಿತಿ ಆಧರುಸಿ ಸೊನ್ನ ಕ್ರಾಸ್ ಬಳಿ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಂಗನಗೌಡ ಪಾಟೀಲ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.
ಕಾರ್ಯಾಚರಣೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಬೆಲೆ ಹೊಂದಿರುವ ಹಾಲಿನ ಪೌಡರ್ ಪ್ಯಾಕೆಟ್ ಗಳನ್ನು ಹೊತ್ತು ಹೊರಟಿದ್ದ ಲಾರಿಯನ್ನು ಪರೀಕ್ಷಿಸಿದಾಗ ಪ್ರಕರಣ ಬೆಳಿಗ್ಗೆ ಬಂದಿದೆ.
ಈ ಕುರಿತಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ದೂರು ಸಲ್ಲಿಸಿದ್ದು, ತನಿಖೆ ಮುಂದುವರೆದಿದೆ.ಅಕ್ರಮ ಜಾಲದಲ್ಲಿ ಸರಕಾರಿ ಅಧಿಕಾರಿಗಳ ಕೈವಾಡವಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.