ಶಹಾಬಾದ:ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಲೋಕ್ ಅದಾಲತ್ ಸಹಕಾರಿಯಾಗಿದ್ದು, ಅದರ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬೇಕೆಂದು ನಗರದ ನ್ಯಾಯಾಲಯದ ನ್ಯಾಯಾಧೀಶರಾದ ಮಲ್ಲೇಶಿ ಪರಶುರಾಮ ಮೋಹಿತೆ ತಿಳಿಸಿದರು.
ಅವರು ಭಂಕೂರ ಗ್ರಾಮದಲ್ಲಿ ಕಾನೂನು ಸೇವಾ ಸಮಿತಿ ಚಿತ್ತಾಪೂರ ಮತ್ತು ನ್ಯಾಯಾವಾಧಿಗಳ ಸಂಘದ ವತಿಯಿಂದ ಆಯೋಜಿಸಲಾದ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಕ್ಷಿದಾರರು ವಕೀಲರ ಮೂಲಕ ಅಥವಾ ಖುದ್ದಾಗಿ ಬಂದು ರಾಜಿ ಮಾಡಿಕೊಳ್ಳಲು ಅವಕಾಶವಿದೆ.ರಾಜಿ ಸಂಧಾನದ ಮೂಲಕ ಪ್ರಕರಣಗಳ ಇತ್ಯರ್ಥದಿಂದ ಸಮಯ, ಹಣ ಉಳಿಸಬಹುದಾಗಿದೆ.ಉಭಯ ಪಕ್ಷಗಾರರ ನಡುವಿನ ಬಾಂಧವ್ಯವನ್ನು ವೃದ್ಧಿಸುತ್ತದೆ.ಹೀಗಾಗಿಲೋಕ್ ಅದಾಲತ್‍ನ ಸದುಪಯೋಗಪಡಿಸಿಕೊಳ್ಳಬೇಕು.ಈ ಬಗ್ಗೆ ಇತರರಿಗೆ ತಿಳಿಸಬೇಕೆಂದು ಹೇಳಿದರು.
ಹಿರಿಯ ನ್ಯಾಯವಾದಿ ಶ್ರೀಧರ ಪಾಟೀಲ ಮಾತನಾಡಿ, ಈ ದೇಶದ ಕಾನೂನುಗಳನ್ನು ನಾವು ಪರಿಪಾಲನೆ ಮಾಡಲೇಬೇಕು. ಇಲ್ಲದಿದ್ದರೆ ನಮ್ಮ ಹಕ್ಕುಗಳಿಂದ ವಂಚಿತರಾಗಬೇಕಾಗುತ್ತದೆ. ಕಾನೂನು ನಮ್ಮ ವಿರುದ್ಧವಾಗಿ ಅಲ್ಲ ನಮ್ಮ ರಕ್ಷಣೆಗಾಗಿಯೇ ಇವೆ. ತಪ್ಪಿತಸ್ಥರಿಗೆ ಶಿಕ್ಷೆಕೂಡ ಕಾನೂನಿನಿಂದ ಸಾಧ್ಯವಾಗುತ್ತದೆ. ಇದರ ಮುಂದೆ ಎಲ್ಲರೂ ಸಮಾನರು. ಸಾರ್ವಜನಿಕರಿಗೆ ಅರಿವು ಮೂಡಿಸುವ ಹಾಗೂ ನೊಂದವರಿಗೆ ಕಾನೂನು ಆಸರೆ ಇದೆ ಎಂಬ ಉದ್ದೇಶದಿಂದ ಈ ಕಾನೂನು ಅರಿವು ನೆರವು ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ ಎಂದರು. ನ್ಯಾಂiÀiವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಶಿಂಧೆ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಗ್ರಾಪಂ ಅಧ್ಯಕ್ಷೆ ರಾಜಶ್ರೀ ರಜನಿಕಾಂತ ಕಂಬಾನೂರ, ಗ್ರಾಪಂ ಸದಸ್ಯ ಈರಣ್ಣ ಕಾರ್ಗಿಲ್, ಸರಕಾರಿ ಸಹಾಯಕ ಅಭಿಯೋಜಕರಾದ ಸುನೀತಾ ಮರತೂರ ಸೇರಿದಂತೆ ವಕೀಲರು ಹಾಜರಿದ್ದರು. ರಘುವೀರಸಿಂಗ ಠಾಕೂರ ನಿರೂಪಿಸಿದರು, ಡಿ.ಸಿ.ಕುಲಕುಂದಿಕರ್ ಸ್ವಾಗತಿಸಿದರು, ರಮೇಶ ರಾಠೋಡ ವಂದಿಸಿದರು.