ಕಲಬುರಗಿ: ಕಮಾಲಾಪುರ ಗ್ರಾಮದಲ್ಲಿರುವ ಬಹುಜನ ಸಮಾಜ ಪಕ್ಷದ ತಾಲ್ಲೂಕು ಕಚೇರಿಯಲ್ಲಿ ಬಹುಜನ ಸಮಾಜ ಪಕ್ಷದ ಸಂಸ್ಥಾಪಕರಾದ ಮಾನ್ಯವರ್ ದಾದಾಸಾಹೇಬ್ ಕಾನ್ಶಿರಾಮ್ ಜೀ ಅವರ ೧೫ನೇ ಮಹಾಪರಿನಿಬ್ಬಾಣ ದಿನವನ್ನು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ರಾಜ್ಯ ಕಾರ್ಯದರ್ಶಿ ಹಾಗೂ ಪಕ್ಷದ ಜಿಲ್ಲಾ ಉಸ್ತುವಾರಿ ಎಲ್ ಆರ್ ಬೋಸ್ಲೆ, ರಾಜ್ಯ ಕಾರ್ಯದರ್ಶಿ ಪಕ್ಷದ ಜಿಲ್ಲಾ ಉಸ್ತುವಾರಿ ಸೂರ್ಯಕಾಂತ ನಿಂಬಾಳಕರ್, ಜಿಲ್ಲಾ ಸಂಯೋಜಕರು ಕಲಬುರಗಿ ಗ್ರಾಮೀಣ ಉಸ್ತುವಾರಿ ಜೈಭೀಮ ಡಿ ಶಿಂಧೆ, ತಾಲ್ಲೂಕು ಸಂಯೋಜಕ ರವಿ ಕೋರಿ, ತಾಲ್ಲೂಕು ಅಧ್ಯಕ್ಷ ಅಂಬಾರಾಯ ದಸ್ತಾಪುರ್, ಗ್ರಾಮ ಪಂಚಾಯತಿ ಸದಸ್ಯ ಅರುಣ ಅಂಕಲಗಿ, ಉಪಾಧ್ಯಕ್ಷ ರಮೇಶ ಕಿಣ್ಣಿ, ಪ್ರಧಾನ ಕಾರ್ಯದರ್ಶಿ ರವಿ ಪಟ್ಟೆದಾರ, ಡಾ.ಅನಿಲ ಟೆಂಗಳ್ಳಿ ಹಾಗೂ ಪದಾಧಿಕಾರಿಗಳು ಕಾರ್ಯಕರ್ತರರು ಇದ್ದರು.