ವೇದ ವಿಜ್ಞಾನದ ಹೊಸ ಸಂಸೋಧನೆ ?

0
148

ವಿಠ್ಠಲ ವಿಠ್ಠಲ ಎಂಬ ದೇವರ ಹೆಸರನ್ನು ಪಠಿಸಿದರೆ ಹೃದಯಾಘಾತದಿಂದ ಪಾರಾಗಬಹುದು ಎಂಬುದನ್ನು ಪುಣೆಯ ವೇದ ವಿಜ್ಞಾನದ ವಿ(ಅ)ಜ್ಞಾನಿಗಳು ತಿಳಿಸಿದ್ದಾರೆ.

ಈ ಮಾತುಗಳನ್ನು ಬಸವಾದಿ ಶರಣರ ವಿಚಾರಗಳ ಹಾಗೂ ಸಾಮಾನ್ಯ ಜ್ಞಾನದ ಹಿನ್ನೆಲೆಯಲ್ಲಿ ಒರೆಗೆ ಹಚ್ಚಿ ನೋಡೋಣ. ಯಾವುದೆ ಶಬ್ಧವನ್ನು ಪುನರಪಿ ಅನ್ನುವುದರಿಂದ ಆ ಶಬ್ಧ ಬಾಯಿಪಾಠವಾಗ ಬಹುದು. ಆದರೆ ಹೃದಯಾಘಾತವಾಗುವುದು ಅದು ಹೇಗೆ ತಡೆಯುತ್ತದೆ ?

Contact Your\'s Advertisement; 9902492681

ಹೃದಯ ಸ್ಥಂಬನವಾಗುವ ಸೂಚನೆ ಕಂಡು ಬಂದಾಕ್ಷಣ ಪ್ರಾಥಮಿಕವಾಗಿ ರೋಗಿಯ ಎಡಭಾಗದ ಎದೆಯ ಮೇಲೆ ಎರಡೂ ಕೈಇಟ್ಟು ಅದುಮಬೇಕು. ಅಥವಾ ಆತನ ಬಾಯಿಯಲ್ಲಿ ಬಾಯಿ ಇಟ್ಟು ಉಸಿರು ತುಂಬಬೇಕು ಎಂದು ತಜ್ಞ ವೈದ್ಯರು ಹೇಳುತ್ತಾರೆ. ಆದರೆ ಈ ವರೆಗೂ ಯಾರೊಬ್ಬರೂ ವಿಠ್ಠಲನ ನೆನೆಯುವುದರಿಂದ ಹೃದಯಾಘಾತ ನಿಲ್ಲಿಸಬಹುದೆಂದು ಹೇಳಿಲ್ಲ.

ವಿಠ್ಠಲ ಪದದಲ್ಲಿ ಇರುವ ‘ಠ್ಠ’ ಎಂಬ ಅಕ್ಷರ ಗಟ್ಟಿಯಾಗಿ ಅನ್ನುವುದರಿಂದ ಹೃದಯಾಘಾತ ನಿಲ್ಲಿಸಬಹುದೆಂಬುದು ವೇದ ವಿಜ್ಞಾನಿಗಳ ನಿಲುವು.‌ ಇದನ್ನು ಅಧಿಕೃತ ಎಂದು ಹೇಳಬೇಕಾದವರು ವಿಜ್ಞಾನವನ್ನು ಓದಿರುವ ಡಾಕ್ಟರ್ ಗಳೆ ಹೊರತು ಅನ್ಯರಲ್ಲ.

ಆದರೆ ವಿಜ್ಞಾನಕ್ಕಿಂತ ಇಂದು ಅಜ್ಞಾನಿಗಳ ಹೇಳಿಕೆಗಳೆ ಬಹಳ ಮಹತ್ವ ಪಡೆಯುತ್ತಿರುವುದು ದುರಂತದ ಸಂಗತಿ. ವೇದ ಶಾಸ್ತ್ರ ಆಗಮಗಳು ಓದಿನ ಮಾತುಗಳು, ಸಂತೆಯ ಸುದ್ದಿಗಳು ಎಂದು ಬಸವಾದಿ ಶರಣರು ತಿಳಿಸಿ ಆಗಿದೆ.

ಕೆಂಚ ಕರಿಕನ ನೆನೆದಡೆ ಕರಿಕನಾಗಬಲ್ಲನೆ
ಕರಿಕ ಕೆಂಚನ ನೆನೆದಡೆ ಕೆಂಚನಾಗಬಲ್ಲನೆ
ದರಿದ್ರನು ಸಿರಿವಂತನ ನೆನೆದಡೆ ಸಿರಿವಂತನಾಗಬಲ್ಲನೆ ಸಿರಿವಂತ ದರಿದ್ರನ ನೆನೆದಡೆ ದರಿದ್ರನಾಗಬಲ್ಲನೆ ! ಮುನ್ನಿನ ಪುರಾತರ ನೆನೆದು ಧನ್ಯನಾದೆಹೆನೆಂಬ ಮಾತಿನ ರಂಜಕರನೇನೆಂಬೆ
ಕೂಡಲಸಂಗಮದೇವಾ.

ಯಾರನ್ನೋ ನೆನೆಯುವ ಮೂಲಕ ಅವರಂತೆ ಆಗುತ್ತೇವೆ ಎಂಬುದು ಮರೀಚಿಕೆ. ನಾನು ಯಾರಂತೆಯೋ ಆಗಬೇಕಾದರೆ ಮೊದಲು ನಾನು ಆ ಪಥದತ್ತ ಮುಖ ಮಾಡಬೇಕು. ನಂತರವಷ್ಟೆ ಅವರ ವಿಚಾರಗಳತ್ತ ನಾನು ಆಕರ್ಷಿತನಾಗಬಹುದು. ಈ ಸೆಳೆತ ಬಲವಾದಾಗ, ನಮ್ಮ ಮನಸ್ಸು ಆ ವ್ಯಕ್ತಿಯ ವ್ಯಕ್ತಿತ್ವದಿಂದ ಪ್ರಭಾವಗೊಂಡಾಗ ನಾವು ಗಟ್ಟಿಗೊಳ್ಳಬಹುದು. ಸದೃಢವಾಗಬಹುದು. ಆದರೆ ಯಾರನ್ನೋ ನೆ‌ನೆದರೆ, ಅವರ ಹೆಸರು ಪಠಿಸಿದರೆ ರೋಗ ಹೋಗುತ್ತದೆ ಎಂಬುದಕ್ಕೆ ಯಾವುದೆ ಆಧಾರಗಳಿಲ್ಲ.

ಶಿವನ ನೆನೆದಡೆ ಭವ ಹಿಂಗೂದೆಂಬ
ವಿವರಗೇಡಿಗಳ ಮಾತ ಕೇಳಲಾಗದು.
ಹೇಳದಿರಯ್ಯಾ,
ಜ್ಯೋತಿಯ ನೆನೆದಡೆ ಕತ್ತಲೆ ಕೆಡುವುದೆ?
ಇಷ್ಟಾನ್ನವ ನೆನೆದಡೆ ಹೊಟ್ಟೆ ತುಂಬುವುದೆ?
ರಂಭೆಯ ನೆನೆದಡೆ ಕಾಮದ ಕಳವಳವಡಗುವುದೆ ಅಯ್ಯಾ? ನೆನೆದರಾಗದು,
ನಿಜದಲ್ಲಿ ನಿರ್ಧರಿಸಿ ತಾನು ತಾನಾಗದನ್ನಕ್ಕರ,
ಸದ್ಗುರು ಸಿದ್ಧಸೋಮನಾಥಲಿಂಗನ
ನೆನೆಯಬಾರದು.

ಎಂಬ ಅಮ್ಮಿಗೆಯ ದೇವಯ್ಯಗಳ ವಚನ ನಮ್ಮ ಕಣ್ಣುಗಳನ್ನು ತೆರೆಸುತ್ತದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here