ಜೇವರ್ಗಿ: ಮಾತೋಶ್ರೀ ಶ್ರೀಮತಿ ಪಾರ್ವತಿ ವಿ ಮುದ್ದಡಗಿ ಸೇವಾ ಟ್ರಸ್ಟ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಜೇವರ್ಗಿ ಸೇರಿದಂತೆ ಗ್ರಾಮ ಪಂಚಾಯತ್ ಕಲ್ಲೂರು( ಕೆ )ಇವರ ಸಂಯುಕ್ತಾಶ್ರಯದಲ್ಲಿ ಅಸ್ಪೃಶ್ಯತೆ ನಿವಾರಣೆ ಅರಿವು ಮೂಡಿಸುವ ವಿಚಾರಗೋಷ್ಟಿ ಕಾರ್ಯಕ್ರಮವನ್ನು ಜೇವರ್ಗಿ ತಾಲೂಕಿನ ಕಲ್ಲೂರ್ ಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೂಡಲಗಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಅಸ್ಪೃಶ್ಯತೆ ಆಚರಣೆ ಅತ್ಯಂತ ಅಮಾನವೀಯ ಇದರ ನಿವಾರಣೆ ಮಾಡಬೇಕಾದದ್ದು ನಾಗರಿಕ ಸಮಾಜದ ಹೊಣೆಗಾರಿಕೆಯಾಗಿದೆ ಎಂದು ನ್ಯಾಯವಾದಿಗಳಾದ ರಾಜು ಮುದ್ದಡಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹದೇವ ಹರನಾಥ್ ಅಧ್ಯಕ್ಷತೆ ವಹಿಸಿಕೊಂಡಿದ್ದರು. ವೇದಿಕೆ ಮೇಲೆ ವೇದಮೂರ್ತಿ ಅಣವೀರಯ್ಯಾ ಸ್ವಾಮಿ ಹಿರೇಮಠ ,ದಶರತ್ ನಾಯ್ಕೋಡಿ, ಅಣ್ಣಾರಾಯ ಬದ್ರಿ, ಅರ್ಜುನ್ ಹೊಸ್ಮನಿ, ಹಸನ ಪೇಟೆಲ ಪೊಲೀಸ್ ಪಾಟೀಲ್ ,ಶಿವಪ್ಪ ನಾಯ್ಕೋಡಿ, ಬಾಗಪ್ಪ ಸಂಗಪ್ಪ ಮಾಂಗ, ಜೇನುಲಾಲ್ ನದಾಫ್, ರೇವಣಸಿದ್ದಪ್ಪ ,ರಾಮು ಹೂಗಾರ್ ,ಸಂಗು ಹೊಸಮನಿ ಸೋಮಣ್ಣ, ಉಪಸ್ಥಿತರಿದ್ದರು.
ಸಂಗೀತ ಸೇವೆಯನ್ನು ಸಿದ್ದಲಿಂಗ ಮಾಹುರ ಶಿಕ್ಷಕರು ಹಂಸವಾಹಿನಿ ಸಂಗೀತ ಶಾಲೆ ಜೇವರ್ಗಿ ನಿರ್ವಹಿಸಿದರು.