ಸುರಪುರ: ನಗರದ ದೀವಳಗುಡ್ಡದ ಬಳಿಯಲ್ಲಿ ಶ್ರೀ ಸ್ವಾಮಿ ವಿವೇಕಾನಂದ ನಗರ ಅಭಿವೃಧ್ಧಿ ಮಂಡಳಿ ವತಿಯಿಂದ ನೂರನವಾಗಿ ನಿರ್ಮಿಸಲಾದ ಶ್ರೀ ಸ್ವಾಮಿ ವಿವೇಕಾನಂದ ನಗರ ಉದ್ಘಾಟನಾ ಕಾರ್ಯಕ್ರಮ ಜರುಗಿತು.
ಸ್ವಾಮಿ ವಿವೇಕಾನಂದ ನಗರ ಉದ್ಘಾಟಿಸಿದ ನಗರಸಭೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಮಾತನಾಡಿ,ಇಲ್ಲಿಯ ಜನರಿಗೆ ಬೇಕಾದ ವ್ಯವಸ್ಥೆಯನ್ನು ಕಲ್ಪಿಸುವುದಾಗಿ ಭರಸವೆ ನೀಡಿದರು.ನೂತನ ನಗರ ನಿರ್ಮಾಣ ಮಾಡಿರುವಿರಿ ತಾವೆಲ್ಲರು ಮನವಿ ಸಲ್ಲಿಸಿದಂತೆ ಇಲ್ಲಿ ಅಗತ್ಯವಿರುವ ವಿದ್ಯುತ್ ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ನಮ್ಮ ಶಾಸಕರಾದ ನರಸಿಂಹ ನಾಯಕ (ರಾಜುಗೌಡ) ಅವರ ಗಮನಕ್ಕೆ ತಂದು ಬೇಕಾದ ವ್ಯವಸ್ಥೆಯನ್ನು ಕಲ್ಪಿಸಲು ಪ್ರಯತ್ನಿಸುವುದಾಗಿ ಜನರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಜಾತಾ ವೇಣುಗೋಪಾಲ ಜೇವರ್ಗಿ,ಉಪಾಧ್ಯಕ್ಷ ಮಹೇಶ ಪಾಟೀಲ್ ಹಾಗು ಮುಖ್ಯ ಅತಿಥಿಗಳಾಗಿ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸೂಗುರೇಶ ವಾರದ್,ನಗರಸಭೆ ಸದಸ್ಯರಾದ ಪಾರ್ವತಿ ಗಾಳೆಪ್ಪ ಹಾದಿಮನಿ,ಸುವರ್ಣ ಸಿದ್ರಾಮ ಎಲಿಗಾರ ಹಾಗು ಚನ್ನಮ್ಮ ಮಹಾದೇವಪ್ಪ ಮಡಿವಾಳ ವೇದಿಕೆ ಮೇಲಿದ್ದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಕಲ್ಯಾಣಯ್ಯ ಸ್ವಾಮಿ,ಮುರಳಿ ಅಂಬುರೆ,ಮಲ್ಲು ಗುಳಗಿ,ಶಿವು ಖಾದಿ,ಸತೀಶ ನಾಯಕ,ಶಿವರಾಜ ಸಗರ,ಶರಣು ನಾಯಕ ದೀವಳಗುಡ್ಡ,ಮಲ್ಲು ಬಡಿಗೇರ್,ಅಮರೇಶ ತಂಬಾಕಿ,ಮಲ್ಲಿಕಾರ್ಜುನ,ಸಿದ್ರಾಮ ಎಲಿಗಾರ,ವೆಂಕಟಪ್ಪ ನಾಯಕ ಸೇರಿದಂತೆ ಅನೇಕರಿದ್ದರು.