ಸುರಪುರ : ಅನುದಾನಿತ ನೌಕರರ ಪಿಂಚಣಿ ಹೋರಾಟದ ಜಾಗೃತಿ ಅಭಿಯಾನ

0
14

ಸುರಪುರ: ರಾಜ್ಯದ ಅನುದಾನಿತ ಶಾಲಾ-ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಮತ್ತು ಶಿಕ್ಷಕೇತರ ಸಾವಿರಾರು ನೌಕರರ ಪಿಂಚಣಿ ಬೇಡಿಕೆ ಈಡೇರಿಕೆಗಾಗಿ ಸರಕಾರದ ಗಮನ ಸೆಳೆಯಲು ವಿವಿಧ ಹಂತಗಳಲ್ಲಿ ಅನೇಕ ಹೋರಾಟಗಳನ್ನು ಮಾಡಿದ್ದು ಇಲ್ಲಿಯವರೆಗೂ ಪಿಂಚಣಿ ಬೇಡಿಕೆಯನ್ನು ಈಡೇರಿಸದ ಹಿನ್ನೆಲೆಯಲ್ಲಿ ಮುಂಬರುವ ಚಳಿಗಾಲದ ಅಧಿವೇಶನ ಮುಗಿಯುದರ ಒಳಗಾಗಿ ಪಿಂಚಣಿ ಸೌಲಭ್ಯ ನೀಡದಿದ್ದಲ್ಲಿ ಸಾವಿರಾರು ನೌಕರರು ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವದು ಎಂದು ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ರಾಜ್ಯಾಧ್ಯಕ್ಷ ಜಿ.ಹನುಮಂತಪ್ಪ ಎಚ್ಚರಿಕೆ ನೀಡಿದ್ದಾರೆ.

ತಾಲೂಕಿನ ರುಕ್ಮಾಪುರ ಗ್ರಾಮದ ವಾಲ್ಮೀಕಿ ಪ್ರೌಢಶಾಲೆಯಲ್ಲಿ ಮಂಗಳವಾರದಂದು ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪಿಂಚಣಿ ಹೋರಾಟದ ಜಾಗೃತಿ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿ ೧ನೇ ಏಪ್ರೀಲ್ ೨೦೦೬ರ ಪೂರ್ವದಲ್ಲಿ ನೇಮಕವಾಗಿ ನಂತರ ಅನುದಾನಕ್ಕೊಳಪಟ್ಟ ಮತ್ತು ೧ನೇ ಏಪ್ರೀಲ್ ೨೦೦೬ರ ನಂತರ ನೇಮಕವಾಗಿ ವೇತನ ಪಡೆಯುತ್ತಿರುವ ಅನುದಾನಿತ ಶಾಲಾ-ಕಾಲೇಜುಗಳ ನೌಕರರಿಗೆ ಹಳೆ ಪಿಂಚಣಿ ಸೌಲಭ್ಯವಾಗಲೀ ಹೊಸ ಪಿಂಚಣಿ ಸೌಲಭ್ಯವಾಗಲೀ ಯಾವುದೇ ರೀತಿಯ ಪಿಂಚಣಿ ಸೌಲಭ್ಯ ಇರುವದಿಲ್ಲ ಎಂದು ಹೇಳಿದರು.

Contact Your\'s Advertisement; 9902492681

೨೦೦೬ಕ್ಕಿಂತ ಮೊದಲು ಪಿಂಚಣಿ ವಿಚಾರದಲ್ಲಿ ಅನುದಾನಿತ ಮತ್ತು ಸರಕಾರಿ ನೌಕರರ ಮಧ್ಯೆ ಯಾವುದೇ ತಾರತಮ್ಯ ಇರಲಿಲ್ಲ, ಬೇರೆ ರಾಜ್ಯಗಳಲ್ಲಿ ಈಗಲೂ ಸಹ ವೇತನದ ಜೊತೆಗೆ ಪಿಂಚಣಿ ಸೌಲಭ್ಯವನ್ನು ಆಯಾ ಸರಕಾರಗಳು ನೀಡುತ್ತಿದ್ದು ಆದರೆ ನಮ್ಮ ರಾಜ್ಯದಲ್ಲಿ ತಾರತಮ್ಯ ಧೋರಣೆ ಅನುಸರಿಸಲಾಗುತ್ತಿರುವುದು ಖೇದಕರ ಸಂಗತಿ ಎಂದು ಅವರು ತಮ್ಮ ಅಸಮಧಾನ ವ್ಯಕ್ತಪಡಿಸಿದರು,ಅಲ್ಲದೆ ಸರ್ವೋಚ್ಛ ನ್ಯಾಯಾಲಯ ಹಾಗೂ ರಾಜ್ಯದ ಉಚ್ಛ ನ್ಯಾಯಾಲಯಗಳು ಅನುದಾನಿತ ನೌಕರರ ಅನುದಾನರಹಿತ ಸೇವೆ ಪರಿಗಣಿಸಿ ಪಿಂಚಣಿ ನೀಡುವಂತೆ ಆದೇಶ ಮಾಡಿದ್ದು ಮತ್ತು ಮತ್ತು ೬ನೇ ವೇತನ ಆಯೋಗವು ಪಿಂಚಣಿ ನೀಡುವಂತೆ ಸರಕಾರಕ್ಕೆ ಶಿಫಾರಸ್ಸು ಕೂಡಾ ಮಾಡಿದೆ ಆದರೂ ಕೂಡ ಸರಕಾರ ಅನುದಾನಿತ ನೌಕರರ ಹಿತವನ್ನು ಕಾಪಾಡುವಲ್ಲಿ ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಅನ್ಯಾಯವೆಸಗುತ್ತಿದೆ ಎಂದು ಹೇಳಿದರು.

ಈಗಾಗಲೇ ಅನುದಾನಿತ ನೌಕರರು ಪಿಂಚಣಿ ಸೌಲಭ್ಯವಿಲ್ಲದೇ ತಮ್ಮ ಕೊನೆಯ ತಿಂಗಳ ಸಂಬಳ ಮಾತ್ರ ಪಡೆದು ಬರಿಗೈಯಲ್ಲಿ ನಿವೃತ್ತಿಗೊಂಡಿದ್ದು ಹಾಗೂ ಕೆಲವರು ಅಕಾಲಿಕ ಮರಣವನ್ನೂ ಹೊಂದಿದ್ದಾರೆ ಈಗಲಾದರೂ ರಾಜ್ಯ ಸರಕಾರ ಬರಿಗೈಯಲ್ಲಿ ನಿವೃತ್ತರಾದ ಮತ್ತು ನಿವೃತ್ತರಾಗಲಿರುವ ನೌಕರರ ಸಂಕ? ವನ್ನು ಅರಿತುಕೊಂಡು ನೇ ಏಪ್ರೀಲ್ ೨೦೦೬ರ ಪೂರ್ವದಲ್ಲಿ ನೇಮಕವಾಗಿ ನಂತರ ಅನುದಾನಕ್ಕೊಳಪಟ್ಟ ನೌಕರರ ಅನುದಾನಕ್ಕೂ ಪೂರ್ವದಲ್ಲಿ ಸೇವೆಯನ್ನು ಪರಿಗಣಿಸಿ ಹಳೆಯ ನಿಶ್ವಿತ ಪಿಂಚಣಿ ಸೌಲಭ್ಯ ಹಾಗೂ ೧ನೇ ಏಪ್ರೀಲ್ ೨೦೦೬ರ ನಂತರ ನೇಮಕವಾಗಿ ವೇತನ ಪಡೆಯುತ್ತಿರುವ ನೌಕರರಿಗೆ ವಂತಿಗೆ ಆಧಾರಿತ ನೂತನ ಪಿಂಚಣಿ ಸೌಲಭ್ಯವನ್ನು ಸರಕಾರಿ ನೌಕರರಿಗೆ ನೀಡುತ್ತಿರುವಂತೆ ಯಥಾವತ್ತಾಗಿ ನೀಡಬೇಕೆಂದು ಆಗ್ರಹಿಸಿದರು.

ಕೂಡಲೇ ಸರಕಾರ ಮುಂಬರುವ ಚಳಿಗಾಲದ ಅಧಿವೇಶನ ಮುಗಿಯುವದರೊಳಗಾಗಿ ಅನುದಾನಿತ ನೌಕರರ ಪಿಂಚಣಿ ಸೌಲಭ್ಯ ಬೇಡಿಕೆಯನ್ನು ಈಡೇರಿಸಬೇಕು ಇಲ್ಲವಾದಲ್ಲಿ ಶಾಲಾ-ಕಾಲೇಜು ಬಂದ್‌ಗೊಳಿಸುವ ಮೂಲಕ ಉಪವಾಸ ಸತ್ಯಾಗ್ರಹ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮುತ್ತುರಾಜ ಮತ್ತಿಕೊಪ್ಪ,ಕೋಶಾಧ್ಯಕ್ಷ ಬಿ.ಜಿ.ಕೊರಗ,ಸಂಚಾಲಕರಾದ ವಿರುಪಾಕ್ಷಪ್ಪ ಮಂತ್ರೋಡಿ, ಮಂಜುನಾಥ ಬತ್ತದ, ಯಾದಗಿರಿ ಜಿಲ್ಲಾಧ್ಯಕ್ಷ ಚಂದಪ್ಪ ಯಾದವ್,ಅಂಬೇಡ್ಕರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗಂಗಾಧರ ರುಮಾಲ,ಶಹಾಪುರ ತಾಲೂಕು ಅಧ್ಯಕ್ಷ ಪಂಚಾಕ್ಷರಿ ಹಿರೇಮಠ,ಮುಖ್ಯೋಪಾಧ್ಯಾಯ ಮಹೇಶ ಕುಂಟೋಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು,ಸಾಹೇಬರೆಡ್ಡಿ ಇಟಗಿ ನಿರೂಪಿಸಿದರು. ಮಲ್ಲಿಕಾರ್ಜುನ ಕಟ್ಟಿಮನಿ ಸ್ವಾಗತಿಸಿದರು ದೇವಿಂದ್ರಪ್ಪ ವಂದಿಸಿದರು. ಸಭೆಯಲ್ಲಿ ನಗರದ ಹಾಗೂ ಸುರಪುರ ಮತ್ತು ಶಹಾಪುರ ತಾಲೂಕು ವಿವಿಧ ಅನುದಾನಿತ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here