ಕಲಬುರಗಿ: ದಸರಾ ದರ್ಬಾರ ಅಂಗವಾಗಿ ಸುಕ್ಷೇತ್ರ ಶ್ರೀನಿವಾಸ ಸರಡಗಿಯ ಮಹಾಲಕ್ಷ್ಮಿ ಶಕ್ತಿಪೀಠಕ್ಕೆ ರಾಜ್ಯದ ವಸತಿ ಖಾತೆ ಸಚಿವರಾದ ವಿ ಸೋಮಣ್ಣ ಅವರು ತೆರಳಿ ಶಕ್ತಿಪೀಠದ ಪೀಠಾಧಿಪತಿಗಳಾದ ಡಾ.ಅಪ್ಪಾರಾವ ದೇವಿ ಮುತ್ಯಾ ಅವರ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಗ್ರಾಮೀಣ ಶಾಸಕ ಬಸವರಾಜ ಬಿ ಮತ್ತಿಮೂಡ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಪಾಲಿಕೆ ಮಾಜಿ ಸದಸ್ಯ ಆರ್.ಎಸ್.ಪಾಟೀಲ, ಶಕ್ತಿಪೀಠದ ಕಾರ್ಯದರ್ಶಿ ವಿಶ್ವನಾಥ ಪಾಟೀಲ ಹಾಗೂ ಭಕ್ತಾಧಿಗಳು ಇದ್ದರು.