ಕಲಬುರಗಿ: ಮಹಾನಗರ ಪಾಲಿಕೆ ಮಹಾತ್ಮಗಾಂಧಿನಗರ ವಿಕಾಸ ಯೋಜನೆ ಅಡಿಯಲ್ಲಿ ೧.ಕೋಟಿ ರೂ ವೆಚ್ಚದ ವಾರ್ಡ್ ೪೬ರ ಪ್ರಶಾಂತ ನಗರ ಎ ಸರ್ಕಾರಿ ಶಾಲೆಯ ಸುತ್ತಮುಲಿನ ಅಂತರಿಕೆ ರಸ್ತೆ ನಿರ್ಮಾಣಕ್ಕೆ ಕೆಕೆಆರ್ಡಿಬಿ ಅಧ್ಯಕ್ಷ ಹಾಗೂ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ಭೂಮಿ ಪೂಜೆ ನೆರವೇರಿಸಿದರು.
ಪಾಲಿಕೆ ಸದಸ್ಯರಾದ ವೀರಣ್ಣ ಹೊನ್ನಳ್ಳಿ, ಹೋನ್ನಮ್ಮ, ವಿಶಾಲ ದರ್ಗಿ, ಪ್ರಭು ಹಾದಿಮನಿ, ಎಪಿಎಂಸಿ ಮಾಜಿ ಅಧ್ಯಕ್ಷ ಅಪ್ಪು ಕಣಕಿ, ಸಿದ್ರಾಮ ಮಹಾಂತಗೋಳ, ಶಿವಣ್ಣಗೌಡ ಹಾಗೂ ಬಡಾವಣೆಯ ಮುಖಂಡರು ಇದ್ದರು.