ಕಲಬುರಗಿಯ: ಭೂಕಂಪ ಪೀಡಿತ ಪ್ರದೇಶಗಳ ವಿಕ್ಷಣೆಗೆ ಕಂದಾಯ ಸಚಿವರಾದ ಆರ್.ಅಶೋಕ ಭೇಟಿ ನೀಡಲು ತೆರಳುತ್ತಿದ ವೇಳೆಯಲ್ಲಿ ಭಾರತ ಮುಕ್ತಿ ಮೋರ್ಚಾ ಸಂಘಟನೆ ವಾಹನ ತಡೆದು ವಿವಿಧ ಬೇಡಿಕೆಗಳು ಈಡೇರಿಸಬೇಕೆಂದು ಆಗ್ರಹಿಸಿದರು.
ಚಿಂಚೋಳಿ ತಾಲೂಕಿನ ತೆಗಲತಿಪ್ಪಿ ಕ್ರಾಸ್ ಬಳಿ ಸಚಿವರ ಕಾರನ್ನು ತಡೆದು ಹೂಬಳಿ ಮಟ್ಟಕ್ಕೊಂದಿರುವ ರೈತ ಸಂಪರ್ಕ ಕೇಂದ್ರಗಳು ಗ್ರಾಮ ಪಂಚಾಯತಕ್ಕೊಂದು ತೆರೆದರೆ ರೈತರ ಸಮಯ ಮತ್ತು ಶ್ರಮ ಉಳಿತಾಯವಾಗುತ್ತದೆ, ಅದೇ ರೀತಿಯಲ್ಲಿ ಐನಾಪೂರ ರೈತ ಸಂಪರ್ಕ ಕೇಂದ್ರಕ್ಕೆ ಬರುವ ಗಾರಂಪಳ್ಳಿ ಗ್ರಾಮವು ಗಾರಂಪಳ್ಳಿಯಿಂದ 8 ಕಿ.ಮಿ ಅಂತರದಲ್ಲಿರುವ ಚಿಂಚೋಳಿ ರೈತ ಸಂಪರ್ಕ ಕೇಂದ್ರಕ್ಕೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು.
ಮಳೆ ಜಾಸ್ತಿಯಾಗಿ ನೀರು ವ್ಯರ್ಥ ಹರಿದು ಹೋಗುವ ಜಾಗಗಳಲ್ಲಿ ಒಂದೆಕಡೆ ನೀರು ನಿಲ್ಲುವಂತೆ ಬ್ರಹತ್ ಪ್ರಮಾಣದ ಗೊಕಟ್ಟುಗಳು ನಿರ್ಮಾಣ ಮಾಡಬೇಕು, ಅತಿವೃಷ್ಠಿಯಿಂದ ರೈತರ ಬೆಳೆ ಹಾಳಾಗಿ ಕಂಗಾಲಾಗಿರುವುದರಿಂದ ಪ್ರದೇಶಗಳನ್ನು ಬರಪೀಡಿತ ಘೋಷಿಸಿ, ಪ್ರತಿ ಎಕರೆಗೆ ರೈತರಿಗೆ 30 ಸಾವಿರ ಪರಿಹಾರ ಘೋಷಿಸಬೇಕು, ರೈತರ ಮಕ್ಕಳಿಗೆ ಉದ್ಯೋಗದಲ್ಲಿ ಹಾಗೂ ಶೈಕ್ಷಣಿಕ ಎಲ್ಲಾ ವಿಭಾಗಗಳಲ್ಲಿ ಸ್ಥಾನ ಮೀಸಲಾತಿ ನಿಗದಿಪಡಿಸಬೇಕೆಂದರು. ವಯೋವೃದ್ಧರು ಮತ್ತು ಅಂಗವಿಕಲರಿಗೆ, ಬಾಣಂತಿಯರಿಗೆ ಗಂಜಿ ಕೇಂದ್ರಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ವ್ಯಯಕ್ತಿಕ ಪುಡ್ ಕಿಟ್ ನೀಡಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದರು.
ಮಾರುತಿ ಗಂಜಗಿರಿ, ಗೋಪಾಲ್ ಗಾರಂಪಳ್ಳಿ, ಸತೀಶ್ ನಾವದಗಿ, ಹಾಫೀಜ್ ಸರ್ದಾರ್, ಮೌನೇಶ್ ಗಾರಂಪಳ್ಳಿ, ಮಾರುತಿ ಜಾದವ್, ಸುಭಾಷ್ ತಾಡಪಳ್ಳಿ, ವಿಜಯಕುಮಾರ ತಾಡಪಳ್ಳಿ, ಸುನಿಲಕುಮಾರ ತಾಡಪಳ್ಳಿ, ಹರ್ಷವರ್ಧನ ಶಾಮರಾವ್, ದೇಗಲ್ಮಡಿ ಮುಂತಾದವರು ಉಪಸ್ಥಿತರಿದ್ದರು.