ಶಹಾಬಾದ: ನಿನ್ನ ಮನೆಗೆ ಬಂದು ಊಟ ಮಾಡಿಕೊಂಡು ಹೋಗುತ್ತೆನೆ ಎಂದು ಹೇಳಿದ್ದ ಸಚಿವ ಕೆ.ಎಸ್. ಈಶ್ವರಪ್ಪನವರು ಸಮಯದ ಅಭಾವದ ನಡುವೆಯೂ ಕೊನೆಗೂ ಬಿಜೆಪಿ ಕಾರ್ಯಕರ್ತನ ಮನೆಗೆ ತೆರಳಿ ಸಿಹಿಯಾದ ಹುಗ್ಗಿ ಸೇವಿಸಿ, ಕಾರ್ಯಕರ್ತನ ಕುಟುಂಬದವರ ಜತೆ ಭಾವಚಿತ್ರ ತೆಗೆದುಕೊಂಡು, ನುಡಿದಂತೆ ನಡೆದರು.
ತಾಲೂಕಿನ ತೊನಸನಹಳ್ಳಿ(ಎಸ್) ಗ್ರಾಮದ ಅಲ್ಲಮಪ್ರಭು ಸಂಸ್ಥಾನ ಮಠದ ಮಲ್ಲಣ್ಣಪ್ಪ ಸ್ವಾಮಿಗಳ ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಮಂಗಳವಾರದಂದು ಆಗಮಿಸುತ್ತಿದ್ದೆನೆ. ಕಾರ್ಯಕ್ರಮ ಮುಗಿದ ನಂತರ ನಿಮ್ಮ ಮನೆಯಲ್ಲಿ (ಬಸವರಾಜ ಮದ್ರಕಿ) ಊಟ ಮಾಡುತ್ತೆನೆ ಎಂದು ಸಚಿವ ಕೆ.ಎಸ್.ಈಶ್ವರಪ್ಪನವರು ಬಿಜೆಪಿ ಕಾರ್ಯಕರ್ತನಿಗೆ ಸೋಮವಾರದಂದು ಫೋನಿನಲ್ಲಿ ಮಾತು ಕೊಟ್ಟಿದ್ದರು. ಅದರಂತೆ ಮಂಗಳವಾರ ಮಧ್ಯಾನ 12:30 ಗಂಟೆಗೆ ತೊನಸನಹಳ್ಳಿ(ಎಸ್) ಗ್ರಾಮದ ಅಲ್ಲಮಪ್ರಭು ಸಂಸ್ಥಾನ ಮಠದ ಮಲ್ಲಣ್ಣಪ್ಪ ಸ್ವಾಮಿಗಳ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಸಮಯ ಬಹಳ ಆಗಿದ್ದರಿಂದ ಹಾಗೂ ಕಲಬುರಗಿ ವಿಮಾನ ನಿಲ್ದಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗಮಿಸುತ್ತಿರುವುದರಿಂದ ಅಲ್ಲಿಗೆ ತಕ್ಷಣವೇ ಹೋಗಬೇಕಾದ ಸಂದರ್ಭ ಎದುರಾಗಿತ್ತು.ಆದರೂ ಕಾರ್ಯಕರ್ತನಿಗೆ ಕೊಟ್ಟ ಮಾತು ತಪ್ಪಬಾರದು ಮತ್ತು ಅವರ ಮನಸ್ಸಿಗೆ ನೋವಾಗಬಾರದೆಂಬ ಉದ್ದೇಶದಿಂದ ಬಸವರಾಜ ಮದ್ರಕಿ ಅವರ ಮನೆಗೆ ತೆರಳಿ ಸಿಹಿಯಾದ ಹುಗ್ಗಿಯನ್ನು ಸೇವಿಸಿ, ಅವರ ಕುಟುಂಬ ಸದಸ್ಯರ ಜತೆ ಭಾವಚಿತ್ರವನ್ನು ತೆಗೆಸಿಕೊಂಡರು.ಬಸವರಾಜ ಮದ್ರಕಿ ಅವರ ಮಗುವನ್ನು ಎತ್ತಿಕೊಂಡು ಆಟವಾಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಧರ್ಮಣ್ಣ ದೊಡ್ಡಮನಿ, ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ನಾಗರಾಜ ಮೇಲಗಿರಿ ಅಣ್ಣಪ್ಪ ದಸ್ತಾಪೂರ,ಡಿ.ಸಿ.ಹೊಸಮನಿ, ಮಂಜುನಾಥ ಪೂಜಾರಿ, ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಈರಣ್ಣ ಕೆಂಭಾವಿ,ಸಂಗಮೇಶ ರಾಮಶೆಟ್ಟಿ,ಕುರುಬ ಸಮಾಜದ ತಾಲೂಕಾಧ್ಯಕ್ಷ ಮಲ್ಕಣ್ಣ ಮುದ್ದಾ, ಮರಲಿಂಗ ಕಮರಡಗಿ, ಸಾಯಿಬಣ್ಣ ಕೊಲ್ಲೂರ್, ವಿಜಯಕುಮಾರ ಕಂಠಿಕರ್, ಸಿದ್ರಾಮ ಕುಸಾಳೆ, ಬೆಳ್ಳಪ್ಪ ಖಣದಾಳ,ರಾಜಶೇಖರ ಮಾಲಿಪಾಟೀಲ, ಸಂಗು ಇಂಗಿನ, ಪ್ರಕಾಶರೆಡ್ಡಿ, ಸಿದ್ದುಗೌಡ ಭಮಶೆಟ್ಟಿ ಇತರರು ಇದ್ದರು.