ಕೋಲಿ ಸಮಾಜವನ್ನು ಎಸ್‍ಟಿಗೆ ಸೇರ್ಪಡೆ ಖಚಿತ- ಸಚಿವ ಈಶ್ವರಪ್ಪ

0
67

ಶಹಾಬಾದ:ಕೋಲಿ ಸಮಾಜವನ್ನು ಎಸ್‍ಟಿಗೆ ಸೇರ್ಪಡೆ ಮಾಡುವುದು ಖಚಿತ ಎಂದು ಪಂಚಾಯತ್‍ರಾಜ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಅವರು ಮಂಗಳವಾರ ತಾಲೂಕಿನ ತೊನಸನಹಳ್ಳಿ(ಎಸ್) ಗ್ರಾಮದ ಅಲ್ಲಮ ಪ್ರಭು ಸಂಸ್ಥಾನ ಮಠದಲ್ಲಿ ಆಯೋಜಿಸಲಾದ ಮಲ್ಲಣ್ಣಪ್ಪ ಮಹಾಸ್ವಾಮಿಗಳ 60ನೇ ಹುಟ್ಟು ಹಬ್ಬದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಕೋಲಿ ಸಮಾಜವನ್ನು ಎಸ್‍ಟಿಗೆ ಸೇರಿಸಲು ಎಲ್ಲಾ ಪ್ರಯತ್ನಗಳು ನಡೆದಿದ್ದು, ಎಸ್‍ಟಿಗೆ ಸೇರ್ಪಡೆಯಾಗುವುದು ಮಾತ್ರ ಖಚಿತ. ಇದು ರಾಜಕಾರಣಕ್ಕಾಗಿ ಹೇಳುವ ಮಾತಲ್ಲ.ಈ ಹಿಂದೆಯೇ ಕೋಲಿ ಸಮಾಜವನ್ನು ನ್ಯಾಯಬದ್ಧವಾಗಿ ಎಸ್‍ಟಿಗೆ ಸೇರಿಸಬೇಕಾಗಿತ್ತು ಎಂದರು.ಭಾರತೀಯ ಸಂಸ್ಕøತಿಯಲ್ಲಿ ಸಾದು, ಸಂತರನ್ನು ಗೌರವಿಸುತ್ತದೆ.

ಕಾರಣ ಅವರು ತಮ್ಮ ಜೀವನಪರ್ಯಂತ ವಿಶ್ವಕ್ಕೆ ಒಳ್ಳೆಯದಾಗಲಿ ಸಂಕಲ್ಪ ತೊಡುತ್ತಾರೆ ಮತ್ತು ಆ ಕಾರ್ಯದಲ್ಲೇ ತೊಡಗುತ್ತಾರೆ.ಸಮಾಜದ ಸೇವೆ ಬಯಸುವ ಅವರ ಈ ನಡುವಳಿಕೆಯಿಂದ ಅವರನ್ನು ಗೌರವಿಸುತ್ತೆವೆ.ಮಲ್ಲಣ್ಣಪ್ಪ ಸ್ವಾಮಿಗಳ 60ನೇ ಹುಟ್ಟುಹಬ್ಬದಲ್ಲಿ ಭಾಗಿಯಾದ ನಾನೇ ಭಾಗ್ಯಶಾಲಿ.ಮುಂದೆ ಇದ್ದರೇ ಮತ್ತೇ 75ನೇ ಹುಟ್ಟುಹಬ್ಬಕ್ಕೆ ಬಂದು ಆಶೀರ್ವಾದ ಪಡೆಯುವೆ ಎಂದು ಹೇಳಿದರು.

ಶಾಸಕ ಬಸವರಾಜ ಮತ್ತಿಮಡು ಮಾತನಾಡಿ, ತೊನಸನಹಳ್ಳಿ ಗ್ರಾಮಕ್ಕೆ ಹೆಣ್ಣು ಕೊಡಲು ಜನರು ಮುಂದಾಗುತ್ತಿಲ್ಲ.ಕಾರಣ ನೀರಿನ ಸಮಸ್ಯೆ ದಶಕಗಳಿಂದ ಕಾಡುತ್ತಿದೆ.ನೀರಿನ ಸಮಸ್ಯೆಯನ್ನು ಬಗೆಹರಿಸಿ ಎಂದು ಮಲ್ಲಣ್ಣಪ್ಪ ಸ್ವಾಮಿಗಳು ನಾನು ಆಶೀರ್ವಾದ ಪಡೆಯಲು ಮಠಕ್ಕೆ ಬಂದಾಗ ಹೇಳಿದ್ದರು.ಅದರಂತೆ ಕೆಕೆಆರ್‍ಡಿಬಿಯ ಅನುದಾನದಲ್ಲಿ ಸುಮಾರು 3ಕೋಟಿ ಅನುದಾನದಲ್ಲಿ ಕಾಗಿಣಾ ನದಿಯಿಂದ ಪೈಪ್‍ಲೈನ್ ಕಾಮಗಾರಿ ಕೈಗೊಳ್ಳಲಾಗುತ್ತಿದೆ.

ಈಗಾಗಲೇ ಗ್ರಾಮಕ್ಕೆ ಐದುವರೆ ಕೋಟಿ ಅನುದಾನ ಒದಗಿಸಿದ್ದೆನೆ.ಅಲ್ಲದೇ ಅಲ್ಲಮಪ್ರಭು ಪೀಠಕ್ಕೆ ಶಾಸಕನಾದ ಮೇಲೆ ಯಾವುದೇ ಅನುದಾನ ಒದಗಿಸಿಲ್ಲ.ಆದ್ದರಿಂದ ಸಚಿವರಾದ ಈಶ್ವರಪ್ಪನವರು ಹಾಗೂ ನಾನು ಕೂಡಿಕೊಂಡು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅನುದಾನ ಒದಗಿಸುವ ಕೆಲಸ ಮಾಡುತ್ತೆವೆ ಎಂದು ಭರವಸೆ ನೀಡಿದರು.

ಬ್ರಹ್ಮಾಂಡ ಗುರೂಜಿಗಳಾದ ನರೇಂದ್ರಬಾಬು ಶರ್ಮಾಜಿ ಮಾತನಾಡಿ, ಶ್ರದ್ಧಾ ಭಕ್ತಿಯ ಕೇಂದ್ರವಾದ ಅಲ್ಲಮಪ್ರಭು ಪೀಠ ಸೌಹಾರ್ದತೆಯ ಸಂಕೇತವಾಗಿದೆ. ಮನುಷ್ಯ ಪರೋಪಕಾರ ಮಾಡುವ ಗುಣವನ್ನು ಬೆಳೆಸಿಕೊಂಡಾಗ ಮಾತ್ರ ಸಮಾಜ ಅವನನ್ನು ಗುರುತಿಸುತ್ತದೆ.ಅದಕ್ಕಾಗಿ ನಾನು ಚೆನ್ನಾಗಿದ್ದೆನೆ, ನೀನು ಚೆನ್ನಾಗಿರು. ನಾನು ಚೆನ್ನಾಗಿಲ್ಲ, ನೀನು ಚೆನ್ನಾಗಿರಬೇಡ. ನಾ ಮಾತ್ರ ಚೆನ್ನಾಗಿರಬೇಕು, ಬೇರೆಯವರು ಹಾಳಾದ್ರೂ ಪರವಾಗಿಲ್ಲ ಎಂಬ ಮನೋಭಾವನೆಯನ್ನು ಬಿಟ್ಟು ನಾನು ಚೆನ್ನಾಗಿರದಿದ್ದರೂ ಪರವಾಗಿಲ್ಲ , ನೀನು ಅಥವಾ ಎಲ್ಲರೂ ಚೆನ್ನಾಗಿರಬೇಕು ಭಾವ ಬೆಳೆಸಿಕೊಂಡಾಗ ಮಾತ್ರ ಜಗತ್ತು ಕಲ್ಯಾಣವಾಗಲು ಸಾಧ್ಯ ಎಂದು ಹೇಳಿದರು.

ಮಹಾರಾಷ್ಟ್ರದ ವಿಧಾನ ಪರಿಷತ್ ಸದಸ್ಯ ಮತ್ತು ರಾಷ್ಟ್ರೀಯ ಕೋಲಿ ಮಹಾಸಂಘದ ಅಧ್ಯಕ್ಷ ರಮೇಶ ದಾದಾ ಪಾಟೀಲ, ಮಾಜಿ ಲೋಕಸಭಾ ಸದಸ್ಯ ಕೆ.ವಿರೂಪಾಕ್ಷಪ್ಪ, ಅಹಿಂದ ಸಂಸ್ಥಾಪಕ ಕೆ. ಮುಕುಡಪ್ಪ, ವಿಧಾನಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್,ಸುನೀಲ ವಲ್ಯಾಪೂರೆ, ಮಾಜಿ ಜಿಪಂ ಸದಸ್ಯ ಬಸವರಾಜ ಪಾಟೀಲ ನರಿಬೋಳ,ಶಿವಾನಂದ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೆವಾಡಗಿ, ಧರ್ಮಣ್ಣ ದೊಡ್ಡಮನಿ, ಕೃಷ್ಣ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ,ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ತಿಪ್ಪಣ್ಣ ರೆಡ್ಡಿ, ನಿಂಗಣ್ಣ ಹುಳಗೋಳಕರ್, ಸೇರಿದಂತೆ ಅನೇಕರು ಇದ್ದರು.

ಭಗವಂತರಾಯ ನಿರೂಪಿಸಿದರು, ಬಸವರಾಜ ಹೇರೂರ ಸ್ವಾಗತಿಸಿದರು, ಅಶೋಕ ನಾಟೀಕಾರ ವಂದಿಸಿದರು.

ನಮ್ಮ ಮಠಕ್ಕೆ ಹಣ,-ದುಡ್ಡು, ಅನುದಾನ ಬೇಕಿಲ್ಲ. ಸಚಿವರಾದ ಈಶ್ವರಪ್ಪನವರು ಹಾಗೂ ಶಾಸಕ ಬಸವರಾಜ ಮತ್ತಿಮಡು ಅವರು ಸೇರಿಕೊಂಡು ರಾಷ್ಟ್ರಪತಿ ರಮಾನಾಥ ಕೋವಿಂದ ಅವರನ್ನು ಒಮ್ಮೇ ನಮ್ಮ ಮಠಕ್ಕೆ ಕರೆತರಬೇಕೆಂದು ಮನವಿ ಮಾಡಿದರಲ್ಲದೇ, ಸಚಿವ ಕೆ.ಎಸ್.ಈಶ್ವರಪ್ಪನವರ ಮನೆಬಾಗಿಲಿಗೆ ಮುಖ್ಯಮಂತ್ರಿ ಸ್ಥಾನ ಒಲಿದು ಬರಲಿದೆ ಎಂದು ಭವಿಷ್ಯ ನುಡಿದರು. – ಮಲ್ಲಣ್ಣಪ್ಪ ಮಹಾಸ್ವಾಮಿಗಳು ಅಲ್ಲಮಪ್ರಭು ಪೀಠ ತೊನಸನಹಳ್ಳಿ(ಎಸ್).

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here