ಸಾಮಾನ್ಯ ಜನರ ಹಕ್ಕುಗಳ ಸಂರಕ್ಷಣೆಗೆ ಕಾನೂನು ಪ್ರಾಧಿಕಾರ ಬದ್ಧವಾಗಿದೆ

0
32

ಜೇವರ್ಗಿ: ಜನ ಸಾಮಾನ್ಯರಿಗೆ ಕಾನೂನಿನ ಬಗ್ಗೆ ಅರಿವನ್ನು ಉಂಟುಮಾಡಿ ಉಚಿತ ಕಾನೂನು ನೆರವು ಮತ್ತು ಸಲಹೆಗಳನ್ನು ನೀಡುವುದು ಲೋಕಅದಾಲತ್ ಮೂಲ ಉದ್ದೇಶವಾಗಿದೆ .ಈ ಮೂಲಕ ನ್ಯಾಯಾಲಯಗಳಲ್ಲಿ ಅಥವಾ ಇತರೆ ಕಚೇರಿಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಮುಕ್ತಾಯ ಗೊಳಿಸುವುದು ಎಲ್ಲ ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಉದ್ದೇಶವಾಗಿದೆ ನ್ಯಾಯವಾದಿಗಳಾದ ಸಿದ್ದು ಯಂಕಂಚಿ ತಿಳಿಸಿದರು.

ಜೇವರ್ಗಿ ತಾಲೂಕಿನ ಕೆಲ್ಲೂರು ಗ್ರಾಮ ಪಂಚಾಯತಿಯಲ್ಲಿ ನಡೆದ ಲೋಕ ಅದಾಲತ್ ಬಗ್ಗೆ ಹಾಗೂ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಉಚಿತ ಕಾನೂನು ನೆರವು ಕುರಿತು ಸಲಹೆ ಸೂಚನೆಗಳನ್ನು ನೀಡುವ ಕಾನೂನು ಸಾಕ್ಷರತಾ ಕಾರ್ಯಕ್ರಮ ಇಲ್ಲಿನ ಕೆಲ್ಲೂರಿನಲ್ಲಿ ಗ್ರಾಮ ಪಂಚಾಯತ್ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಲ್ಲನಗೌಡ ವಹಿಸಿದ್ದರು, ಅತಿಥಿಗಳಾಗಿ ನಿವೃತ್ತ ಶಿಕ್ಷಕರಾದ ಕರೀಂ ಸರ್ ಹಾಗೂ ಭಗವಂತರಾಯ ದೇಸಾಯಿ ಸೇರಿದಂತೆ ರೈತ ಮುಖಂಡರಾದ ಮಲ್ಲಿಕಾರ್ಜುನ ದೊಡ್ಡಮನಿ ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ವಕೀಲರಾದ ಕೆಂಚಪ್ಪಗೌಡ ಬಿರಾದಾರ್, ಭಾಷಾ ಪಟೇಲ ಯಾಳವಾರ್, ರಾಜು ಮುದ್ದಡಗಿ, ಅಪ್ಪಸಾಬ್ ಮಡಿವಾಳ ,ರಾಮನಾಥ ಭಂಡಾರಿ , ಗ್ರಾಮ ಪಂಚಾಯಿತಿ ಮಲ್ಕಣ್ಣ ಸುಬೇದಾರ್ ಕರವಸೂಲಿಗಾರರು ಸೇರಿದಂತೆ ಕೆಲ್ಲೂರು ಗ್ರಾಮದ ಮುಖಂಡರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here