ಜೇವರ್ಗಿ: ಜನಸಾಮಾನ್ಯರಿಗೆ ಕಾನೂನಿನ ಅರಿವನ್ನು ಉಚಿತ ಸಲಹೆ ಮತ್ತು ಸೂಚನೆಗಳನ್ನು ನೀಡುವುದು ಲೋಕಾದಾಲತ ಗುರಿಯಾಗಿದೆ. ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸುವುದು ಜಿಲ್ಲಾ ಮತ್ತು ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಗಳ ಉದ್ದೇಶವಾಗಿದೆ .ಎಂದು ವಕೀಲರಾದ ಅಪ್ಪಸಾಹೇಬ್ ಮಡಿವಾಳ ತಿಳಿಸಿದರು.
ಕೋಳೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಜೇವರ್ಗಿ ಇವರ ಸಂಯುಕ್ತ ಆಶ್ರಯದಲ್ಲಿ ಸಾಕ್ಷರತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪ್ರಥಮ ಮಾಹಿತಿ ವರದಿ ಎಫ್ಐಆರ್ ಹಾಗೂ ಮೋಟಾರ್ ವಾಹನ ಕಾಯ್ದೆ ಕುರಿತು ತಿಳಿಸಲಾಯಿತು. ವಕೀಲರಾದ ರಾಮನಾಥ ಭಂಡಾರಿ ಕಾನೂನು ಅಧಿಕಾರದ ಉದ್ದೇಶ ಮತ್ತು ಕಾನೂನು ಸೇವಾ ಕೇಂದ್ರಗಳ ಕುರಿತು ಮಾಹಿತಿ ನೀಡಿದರು.
ಕರಪತ್ರ ವಿತರಣೆ : ಗ್ರಾಮದ ಮನೆಮನೆಯಲ್ಲಿ ಕರಪತ್ರಗಳನ್ನು ಹಂಚಿ ಕಾನೂನು ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಗುಂಡೇರಾಯ ಬೈರಮಾಡಗಿ, ಮಲ್ಲಯ್ಯ ಸ್ವಾಮಿ ನಂದರುಮಠ, ಶರಣಪ್ಪ ನೆಂಗಾ, ಸಿದ್ದಣ್ಣ ಹಡಪದ್, ಮಲ್ಲಿಕಾರ್ಜುನ ಗುತ್ತಾ, ನಿಂಗಣ್ಣ ಆಡಿನ್, ಮಲ್ಲಣ್ಣ ಕೊನಣಿನ, ನಿಂಗಪ್ಪ ಪರಸಗೊಂಡ, ಬಾಬುಗೌಡ ಹೊಸ್ಮನಿ, ಅಂಬರೀಷ್ ಮೇಳಕುಂದ, ಶರಣಪ್ಪ ಹೊನಕೇರಿ, ಪೊಲೀಸ್ ಸಿಬ್ಬಂದಿಗಳಾದ ಭಗಣ್ಣ ಸೇರಿದಂತೆ ಸಮಿತಿಯ ದೇವಿಂದ್ರಪ್ಪಗೌಡ ಮುಂತಾದವರು ಭಾಗವಹಿಸಿದ್ದರು.