ಕಲಬುರಗಿ: ನಗರದ ದರ್ಗಾ ರಸ್ತೆಯಲ್ಲಿರುವ ವಿಜಯ ಆಟೋಮೋಟಿವ್ಸ್ ಟಿವಿಎಸ್ ಶೋರೂಂನಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಅಡಿಯಲ್ಲಿ ಶೋರೂಂನ ಮಾಲೀಕ ರಾಹುಲ ಬಿಲಗುಂದಿ ಅವರ ಜನ್ಮದಿನದ ನಿಮಿತ್ತ ಸೇವಾ ಕೇಂದ್ರದಲ್ಲಿ ಸೇವೆ ಮಾಡುವ ೨೦ ಜನ ಶಿಕ್ಷಕಿಯರಿಗೆ ಒಂದು ತಿಂಗಳ ಸೇವಾ ಭತ್ಯೆ ಶ್ಯಾಲರಿ ವಿತರಿಸಿ ನಂತರ ಜ್ಯುಪಿಟರ್-೧೨೫ ಸಿಸಿ ದ್ವಿಚಕ್ರ ವಾಹನವನ್ನು ಪ್ರಮುಖರಾದ ಕೃಷ್ಣಾಜಿ ಜೋಶಿ ಅವರು ಬಿಡುಗಡೆಗೋಳಿಸಿದರು.
ಈ ಸಂದರ್ಭದಲ್ಲಿ ರಮೇಶ ಪಾಟೀಲ, ಶಾಂತಕುಮಾರ ಬಿಲಗುಂದಿ, ರಮೇಶ ಬಂದು, ಮನಮೋಹನ ಅಗರವಾಲ, ಭೀಮಾಶಂಕರ ಪಾಟೀಲ, ಗುರು ಜೋಶಿ, ಚಂದ್ರಶೇಖರ ತಳ್ಳಳ್ಳಿ, ಅಣವೀರಪ್ಪ ಕಾಳಗಿ, ಚಂದ್ರಕಾಂತ ಕಾಳಗಿ, ಶರಣು ಬಿರಾದಾರ, ರಿತೀಶ ಪಾಟೀಲ, ಪ್ರಶಾಂತ, ಚಂದ್ರಶೇಖರ ಬೂನಿ, ಮ್ಯಾಡಿ, ಮಹೇಶ ಗೋಬ್ಬೂರ, ಸಂಗು ನಂದ್ಯಾಳ, ಸಚಿನ ನಂದ್ಯಾಳ, ಶಿವಂ ಉದನೂರ, ವಿಜಯ ನಂದ್ಯಾಳ ಇದ್ದರು.