ಸುರಪುರ: ತಾಲೂಕು ಆಡಳಿತ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

0
15

ಸುರಪುರ: ನಗರದಾದ್ಯಂತ ವಿವಿಧೆಡೆಗಳಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.ಬುಧವಾರ ಬೆಳಿಗ್ಗೆ ನಗರದ ಡೊಣ್ಣಿಗೇರಾದಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ದೇವಸ್ಥಾನದಲ್ಲಿ ವಾಲ್ಮೀಕಿ ಮೂರ್ತಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಜಯಂತಿ ಆಚರಣೆಗೆ ಚಾಲನೆ ನೀಡಲಾಯಿತು.ನಂತರ ಹಳೆ ಬಸ್ ನಿಲ್ದಾಣದ ಬಳಿಯಲ್ಲಿನ ವಾಲ್ಮೀಕಿ ಮೂರ್ತಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.ನಂತರ ಜಯಂತಿ ಅಂಗವಾಗಿ ತಾಲೂಕು ವಾಲ್ಮೀಕಿ ಮಹರ್ಷಿ ನಾಯಕ ಸಂಘದಿಂದ ಸಂಘಟನೆ ತಾಲೂಕು ಅಧ್ಯಕ್ಷ ರವಿಚಂದ್ರ ದರಬಾರಿ ನೇತೃತ್ವದಲ್ಲಿ ಬೈಕ್ ರ‍್ಯಾಲಿ ನಡೆಸಲಾಯಿತು.

ತಾಲೂಕು ಆಡಳಿತದಿಂದ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಆರಂಭದಲ್ಲಿ ಮಹರ್ಷಿ ವಾಲ್ಮೀಕಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ವಂದಿಸಿದರು.ನಂತರ ನಡೆದ ಸಮಾವೇಶದಲ್ಲಿ ನಗರಸಭೆ ಅಧ್ಯಕ್ಷೆ ಸುಜಾತಾ ವೇಣುಗೋಪಾಲ ಜೇವರ್ಗಿ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.

Contact Your\'s Advertisement; 9902492681

ಉಪನ್ಯಾಸಕರಾಗಿ ಭಾಗವಹಿಸಿದ್ದ ಡಾ: ಉಪೇಂದ್ರ ನಾಯಕ ಸುಬೇದಾರ ಮಾತನಾಡಿ,ಮಹರ್ಷಿ ವಾಲ್ಮೀಕಿಯವರು ಮೂಲದಲ್ಲಿ ರತ್ನಾಕರರಾಗಿದ್ದರು,ಗಂಗಾ ನದಿ ದಡದಲ್ಲಿ ಅಂದಿನ ಕಾಲದಲ್ಲಿ ತುಂಬಾ ಬರಗಾಲವಿದ್ದಕಾರಣ ಬೇರೆಯವರಲ್ಲಿನ ಆಹಾರ ತೆಗೆದುಕೊಂಡು ಸೇವಿಸುತ್ತಿದ್ದರು.ಆದರೆ ಇದೇ ಸಂದರ್ಭದಲ್ಲಿ ಬಂದ ಋಷಿಮುನಿಗಳು ಹೀಗೆಲ್ಲ ಬೇರೆಯವರಲ್ಲಿನ ವಸ್ತುಗಳನ್ನು ಕಿತ್ತಿಕೊಳ್ಳುವುದು ತಪ್ಪು ಎನ್ನುವುದು ಮನವರಿಕೆ ಮಾಡಿ,ಇದರಿಂದ ದೇವರು ಮೆಚ್ಚುವುದಿಲ್ಲ ಎನ್ನುವುದನ್ನು ತಿಳಿಸಿದರು.

ನಂತರ ಋಷಿಮುನಿಗಳು ರಾಮಚಂದ್ರನನ್ನು ಸ್ಮರಿಸುವುದರಿಂದ ಮನುಷ್ಯನು ಬದಲಾಗುತ್ತಾನೆ ಎಂಬ ಮಾತಿನಿಂದ ಪ್ರೇರಣೆಗೊಂಡು ರತ್ನಾಕರನಾಗಿದ್ದ ವಾಲ್ಮೀಕಿಯು ಶ್ರೀರಾಮಚಂದ್ರನನ್ನು ಸ್ಮರಿಸುತ್ತಾ ಜಪ ಮಾಡುವಾಗ ಸುತ್ತಲು ಹುತ್ತ ಬೆಳೆದು ಒಳಗಿನಿಂದ ಶ್ರೀರಾಮ ಎನ್ನುವ ಧ್ವನಿ ಕೇಳಿಸುತ್ತದೆ,ನಂತರ ಒಳಗೆ ರತ್ನಾಕರ ಇರುವುದನ್ನು ಗುರುತಿಸಿ ಅಂದಿನಿಂದ ರತ್ನಾಕರನನ್ನು ವಾಲ್ಮೀಕಿ ಎಂದು ಕರೆಯಲಾಯಿತು.ಅವರೆ ಮುಂದೆ ರಾಮಾಯಣವನ್ನು ಬರೆಯುವ ಮೂಲಕ ಜಗತ್ತಿಗೆ ಚಿರಪರಿಚಿತರಾಗಿದ್ದಾರೆ ಎಂದರು.ಅಲ್ಲದೆ ನಮ್ಮಲ್ಲಿನ ಒಗ್ಗಟ್ಟು ಮತ್ತು ಇಚ್ಛಾಶಕ್ತಿಯ ಕೊರತೆಯಿಂದ ವಾಲ್ಮೀಕಿ ಸಮುದಾಯದ ಮೀಸಲಾತಿ ೭.೫ ಆಗುತ್ತಿಲ್ಲ ಇದಕ್ಕೆ ಎಲ್ಲರು ಧ್ವನಿ ಎತ್ತಬೇಕಿದೆ ಅಂದಾಗ ನಮಗೆ ಸಿಗಬೇಕಾದ ಮೀಸಲಾತಿ ದೊರೆಯಲಿದೆ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಅತಿಥಿಗಳಾಗಿ ವೇದಿಕೆ ಮೇಲಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ.ನಾಯಕ,ಪಿಎಸ್‌ಐ ಕೃಷ್ಣಾ ಸುಬೇದಾರ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿಯವರು ಮಾತನಾಡಿದರು ಅಲ್ಲದೆ ಇದೇ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಸಾಧನೆಗೈದ ಸಾಧಕರಿಗೆ ಮತ್ತು ವಾಲ್ಮೀಕಿ ಸಮುದಾಯದ ಹಿರಿಯರಿಗೆ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆ ಮೇಲೆ ತಾಲೂಕು ಪಂಚಾಯತಿ ಇಒ ಅಂಬ್ರೇಶ ಮೂಡಲದಿನ್ನಿ,ಸಮಾಜ ಕಲ್ಯಾಣಾಧಿಕಾರಿ ಸತ್ಯನಾರಾಯಣ ದರಬಾರಿ,ಕ್ಷೇತ್ರಶಿಕ್ಷಣಾಧಿಕಾರಿ ಮಹಾದೇವರಡ್ಡಿ,ರಾಜಶೇಖರ ದೇಸಾಯಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here