ಕಲಬುರಗಿ: ಜಿಲ್ಲೆಯ ಕಾಳಗಿ ತಾಲ್ಲೂಕಿನ ರೇವಗ್ಗಿ ಸರ್ಕಾರಿ ಪದವಿಪೂರ್ವ ಕಾಲೇಜಿನ ರಾಷ್ಟೀಯ ಸೇವಾ ಯೋಜನೆಯ ಘಟಕದ ವತಿಯಿಂದ ಬುಧವಾರ ಕಾಲೇಜಿನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಶ್ರೀದೇವಿ ಹಾಗೂ ನಾಗೇಶ್ವರ ವಾಲ್ಮೀಕಿ ಮಹರ್ಷಿ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಚಂದ್ರಶೇಖರ ದೊಡ್ಡಮನಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಮಹಾಕಾವ್ಯ ರಚಿಸಿದಂತೆ ವಿದ್ಯಾರ್ಥಿಗಳು ಸಹ ನಿರಂತರ ಅಧ್ಯಯನ ಮಾಡಿ ಕಥೆ, ಕಾವ್ಯ, ವಿಮರ್ಶೆ ಮುಂತಾದವುಗಳನ್ನು ಬರೆಯುವ ಹವ್ಯಾಸ ರೂಢಿಸಿಕೊಳ್ಳಬೇಕೆಂದು ಹೇಳಿದರು.
ಉಪನ್ಯಾಸಕರಾದ ಲೀಲಾವತಿ ಆರ್.ಪಿ, ಲಕ್ಷ್ಮೀ ವೇಲುಸ್ವಾಮಿ, ಗುರುನಂಜೇಶ್ವರ ಹಾಗೂ ಶರಣಬಸವ ಹೆಗ್ಗಡೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ರೇಣುಕಾ ನಿರೂಪಿಸಿದರು. ಅಫ್ಸಾನಾ ವಂದಿಸಿದರು.