ವಾಲ್ಮೀಕಿ ಮಹರ್ಷಿಗಳ ಆದರ್ಶಗಳು ನಮಗೆ ದಾರಿದೀಪ ಗ್ರಾ.ಪಂ ಅಧ್ಯಕ್ಷ ಮುನಿಯಪ್ಪ

0
16

ತೊರ‍್ನಹಳ್ಳಿ: ಮಾಲೂರು ತಾಲ್ಲೂಕಿನ ಕಸಬಾ ಹೋಬಳಿ ತೊರ‍್ನಹಳ್ಳಿ ಗ್ರಾಮದಲ್ಲಿ ರಾಮಾಯಣ ಕರ್ತೃ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ವಾಲ್ಮೀಕಿ ಕುಲಭಾಂದವರು ಹಾಗೂ ಊರಿನ ಗ್ರಾಮಸ್ಥರು ಅದ್ದೂರಿಯಾಗಿ ಆಚರಿಸಿದರು. ಶ್ರೀ ಮಹರ್ಷಿ ವಾಲ್ಮೀಕಿ ಬೆಳ್ಳಿ ವಿಗ್ರಹವನ್ನು ಪಲ್ಲಕ್ಕಿಯಲ್ಲಿಟ್ಟು ಊರಿನ ತುಂಬಾ ಮೆರವಣಿಗೆ ಮಾಡಲಾಯಿತು. ಊರಿನಲ್ಲಿ 10 ದೇವರುಗಳ ಬೆಳ್ಳಿ ಪಲ್ಲಕ್ಕಿ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.

ಮಾನವೀಯ ಗುಣಗಳನ್ನು ಮೈಗೂಡಿಸಿಕೊಳ್ಳುವುದು ಸೇರಿದಂತೆ ಉತ್ತಮ ಸಮಾಜ ನಿರ್ಮಾಣದ ಮಹತ್ವದ ಸಂಗತಿಗಳನ್ನು ರಾಮಾಯಣ ಮಹಾಕಾವ್ಯದಿಂದ ನಾವು ಕಲಿಯಬಹುದಾಗಿದೆ ಎಂದು ಶ್ರೀಯುತ ಸುನೀಲ್ ನಂಜೇಗೌಡರು ತಿಳಿಸಿದ್ದಾರೆ.

Contact Your\'s Advertisement; 9902492681

ವಾಲ್ಮೀಕಿ ಜಯಂತಿಯನ್ನು ನಮ್ಮ ಊರಿನಲ್ಲಿ ಅದ್ದೂರಿಯಾಗಿ ಆಚರಿಸುತ್ತಿದ್ದೇವೆ. ವಾಲ್ಮೀಕಿ ಮಹರ್ಷಿಗಳ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಾವು ಉತ್ತಮ ಪ್ರಜೆಗಳಾಗಿ ಬದುಕಬೇಕು ಅವರ ಸಿದ್ದಾಂತಗಳು ನಮಗೆ ಮಾದರಿಯಾಗಿವೆ ಎಂದು ಗ್ರಾ.ಪಂ ಅಧ್ಯಕ್ಷರಾದ ಮುನಿಯಪ್ಪ ಹಾಗೂ ಸದಸ್ಯರಾದ ಸಿ.ವಿ.ವೆಂಕಟರಮಣಪ್ಪರವರು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಲಿಂಗಾಪುರ ಕೃಷ್ಣಪ್ಪ(ಕಿಟ್ಟಿ) ಗ್ರಾ.ಪಂ.ಅಧ್ಯಕ್ಷ ಮುನಿಯಪ್ಪ, ಪಿಡಿಒ ಕೆ.ಎಂ.ವೇಣು, ಉಪಾಧ್ಯಕ್ಷೆ ಸುಮಿತ್ರಲೋಕೇಶ್, ಸದಸ್ಯರಾದ, ಎ.ಮಂಜುನಾಥ್, ಸಿ.ವಿ.ವೆಂಕಟರಮಣಪ್ಪ, ನಾಗರಾಜಪ್ಪ, ಟಿ.ವಿ.ನಾರಾಯಣಸ್ವಾಮಿ, ವಿ.ವೀರಭದ್ರ, ನಾಗರತ್ನಮ್ಮ, ತಿಮ್ಮರಾಯಪ್ಪ, ಶಿಲ್ಪ.ಜಿ.ಎ, ಸುಜಾತ, ಬಿ.ಎಂ.ಎನ್.ನಾಗರಾಜ, ಅಮರಾವತಿ ಸಂತೋಷ್, ಚಂದ್ರಶೇಖರ್, ಗೇರುಪುರ ಸಂತೋಷ್, ಬೆಳ್ಳೂರಪ್ಪ, ವಿ.ಮುರುಳಿ,ಆನಂದ್ ಕುಮಾರ್, ಬಿಲ್ ಕಲೆಕ್ಟರ್ ಎಂ.ನಾಗರಾಜ ಹಾಗೂ ವಾಲ್ಮೀಕಿ ಕುಲಭಾಂದವರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here