ಮಹಾದಾಸೋಹ ಸೂತ್ರದ ಕುರಿತು ಡಾ. ನೀಲಾ ರಚಿಸಿದ ವರ್ಣಚಿತ್ರ ಅಂತಾರಾಷ್ಟ್ರೀಯ ಆನ್‌ಲೈನ್ ಪ್ರದರ್ಶನಕ್ಕೆ ಆಯ್ಕೆ

0
37

ಕಲಬುರಗಿ; ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅವರು ಬರೆದ ಮಹಾದಾಸೋಹ ಸೂತ್ರದ ಮೇಲೆ ಖ್ಯಾತ ಕಲಾವಿದ ಡಾ.ಸುಬ್ಬಯ್ಯ ಎಂ ನೀಲಾ ಅವರ ಗಮನ ಸೆಳೆಯುವ ಚಿತ್ರಕಲೆ ೪ ನೇ ಅಂತಾರಾಷ್ಟ್ರೀಯ ಆನ್‌ಲೈನ್ ಕಲಾ ಪ್ರದರ್ಶನದಲ್ಲಿ ಆಯ್ಕೆಯಾಗಿದೆ. ಚಂಡಿಗಢ ಮೂಲದ ನಿರಂತರ ಕಲಾ ಬಳಗದ ವತಿಯಿಂದ ಆಯೋಜಿಸಿದ “ನಿರಂತರ ೨೦೨೧” ಪ್ರದರ್ಶನದಲ್ಲಿ ಆಯ್ಕೆಯಾಗುವ ಮೂಲಕ ಡಾ. ನೀಲಾ ಭಾರತವನ್ನು ಪ್ರತಿನಿಧಿಸಿದ್ದಾರೆ.

ದೇಶದ ವಿವಿಧ ಭಾಗಗಳ ೪೦ ಕ್ಕೂ ಹೆಚ್ಚು ಪ್ರಖ್ಯಾತ ಚಿತ್ರಕಾರರಲ್ಲಿ ಡಾ. ನೀಲಾ ಅವರು ತಮ್ಮ ವರ್ಣಚಿತ್ರಗಳನ್ನು ಆಯ್ಕೆಗಾಗಿ ಸಲ್ಲಿಸಿದ್ದರು ಮತ್ತು ತಜ್ಞರ ತಂಡವು ಮಹಾದಾಸೋಹ ಸೂತ್ರದಲ್ಲಿ ಡಾ. ನೀಲಾ ಅವರ ವರ್ಣಚಿತ್ರವನ್ನು ನಾಲ್ಕನೇ ಅಂತರರಾಷ್ಟ್ರೀಯ ಆನ್‌ಲೈನ್ ಪ್ರದರ್ಶನದಲ್ಲಿ ಪ್ರದರ್ಶಿಸಲು ಆಯ್ಕೆ ಮಾಡಿತು. ಈ ಕಲಾ ಪ್ರದರ್ಶನವು ಸೆಪ್ಟೆಂಬರ್ ೩೦ ರಿಂದ ಆರಂಭಗೊಂಡಿದ್ದು ಅಕ್ಟೋಬರ್ ೩೦ ಕ್ಕೆ ಮುಕ್ತಾಯವಾಗಲಿದೆ.

Contact Your\'s Advertisement; 9902492681

ಯುಎಸ್‌ಎ, ಜಪಾನ್, ರ?, ಪಾಕಿಸ್ತಾನ, ಶ್ರೀಲಂಕಾ, ದಕ್ಷಿಣ ಕೊರಿಯಾ, ಸೌದಿ ಅರೇಬಿಯಾ, ಬಾಂಗ್ಲಾದೇಶ, ನೇಪಾಳ ಮತ್ತು ಇತರ ದೇಶಗಳ ೩೮ ರಾ?ಗಳ ಅಂತರಾಷ್ಟ್ರೀಯ ಖ್ಯಾತಿಯ ಚಿತ್ರಕಲಾವಿದರು ಈ ಕಲಾ ಪ್ರದರ್ಶನದಲ್ಲಿ ಭಾಗವಹಿಸಿರುವರು, ಡಾ. ನೀಲಾ ಅವರ ಪ್ರಕಾರ, ಪ್ರದರ್ಶನದ ಆಯೋಜಕರು ಭಾಗವಹಿಸುವ ಪ್ರತಿಯೊಂದು ದೇಶದಿಂದ ಒಂದೊಂದು ವರ್ಣಚಿತ್ರಗಳನ್ನು ಆಯ್ಕೆ ಮಾಡಿ ಅಂತಾರಾಷ್ಟ್ರೀಯ ಕಲಾ ಪ್ರದರ್ಶನದಲ್ಲಿ ಪ್ರದರ್ಶಿಸಿದ್ದಾರೆ.

ವಿವಾಹದ ಮೇಲೆ ಡಾ ಅಪ್ಪಾಜಿಯವರು ರಚಿಸಿದ ಮಹಾದಾಸೋಹ ಸೂತ್ರದ “ಮದುವೆ ಮಧುರ ಸುಮಧುರ …” ಎಂಬ ವಿಷಯದ ಮೇಲೆ ಡಾ. ನೀಲಾ ಕಲಾಕೃತಿಯನ್ನು ರಚಿಸಿದ್ದಾರೆ, ಆಕ್ರಿಲಿಕ್ ಬಳಸಿ ರಚಿಸಿದ ಈ ಕಲಾಕೃತಿ ನಮ್ಮ ಧಾರ್ಮಿಕ ಲಿಪಿಗಳು ಮತ್ತು ವೇದಗಳಲ್ಲಿ ಬರುವ ಸಿದ್ಧಾಂತಗಳ ಪ್ರಕಾರ ಸದ್ಗುಣ ಮತ್ತು ಧಾರ್ಮಿಕ ಜೀವನವನ್ನು ನಡೆಸಲು ಎರಡು ಮನಸ್ಸುಗಳ ಸಂಗಮವಾಗಿದೆ. ಕ್ಯಾನ್ವಾಸ್‌ನಲ್ಲಿ ಇದನ್ನು ವೀಕ್ಷಿಸಲು ಸಂತೋ?ವೆನಿಸುತ್ತದೆ. ಸೃಜನಶೀಲ ಸಾಂಪ್ರದಾಯಿಕ ಮತ್ತು ಅಲಂಕಾರಿಕ ಶೈಲಿಯಲ್ಲಿ ಮಾಡಿದ ಚಿತ್ರಕಲೆ ವಧು ಮತ್ತು ವರನ ಮದುವೆಗೆ ಮುಂಚೆ ಅವರ ಕಣ್ಣುಗಳಲ್ಲಿ ಕನಸುಗಳನ್ನು ಬಿತ್ತುತ್ತದೆ ಮತ್ತು ಕಲಾವಿದರು ಆಯ್ಕೆ ಮಾಡಿದ ಕಾಲ್ಪನಿಕ ಬಣ್ಣಗಳು ಚಿತ್ರಕಲೆಗೆ ಹೆಚ್ಚು ಜೀವ ತುಂಬುತ್ತವೆ.

ಶರಣಬಸವ ವಿಶ್ವವಿದ್ಯಾಲಯದ ಸ್ನಾತಕೋತ್ತರ ದೃಶ್ಯ ಕಲಾ ವಿಭಾಗದ ಮುಖ್ಯಸ್ಥರಾಗಿರುವ ಡಾ. ಸುಬ್ಬಯ್ಯ ಎಮ್ ನೀಲಾ ತಮ್ಮ ಸೃಜನಶೀಲ ಕೆಲಸಗಳಿಗಾಗಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಮತ್ತು ಶ್ರೀಲಂಕಾ, ಬಾಂಗ್ಲಾದೇಶದ ಖಾಸಗಿ ಸಂಗ್ರಹಕಾರರ ಗೋಡೆಗಳನ್ನು ಅಲಂಕರಿಸಿದ್ದಾರೆ ಮತ್ತು ದೇಶಾದ್ಯಂತದ ಪ್ರಸಿದ್ಧ ವಸ್ತುಸಂಗ್ರಹಾಲಯಗಳು ಮತ್ತು ದೇಶದ ವಿವಿಧ ಭಾಗಗಳಲ್ಲಿರುವ ವ್ಯಕ್ತಿಗಳ ಖಾಸಗಿ ಸಂಗ್ರಹಗಳಲ್ಲಿ ಡಾ. ನೀಲಾ ರವರ ಕಲಾಕೃತಿಗಳು ವಿಜ್ರಂಭಿಸುತ್ತಿವೆ.

ಡಾ.ನೀಲಾ ಅವರು ತಮ್ಮ ಈ ಸಾಧನೆಗೆ ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಮತ್ತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸ್‌ನ್ ಮಾತೋಶ್ರಿ ಡಾ. ದಾಕ್ಷಾಯಿಣಿ ಅವ್ವಾಜಿ ಹಾಗೂ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ ಅವರ ಪ್ರೋತ್ಸಾಹ ಮತ್ತು ಆಶೀರ್ವಾದ ಕಾರಣ ಎಂದು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here