ಆತ್ಮತೃಪ್ತಿ ನೀಡಬಲ್ಲ ಶಕ್ತಿ ಸಂಗೀತಕ್ಕಿದೆ: ಬಡದಾಳ ಶ್ರೀ

0
16

ಕಲಬುರಗಿ: ನೋಂದು, ಬೆಂದು, ಬಸವಳಿದ ಮನಸ್ಸುಗಳಿಗೆ ಮತ್ತು ದೇಹಿಗಳಿಗೆ, ತೃಪ್ತಿ ನೀಡುವ ಶಕ್ತಿ ಸಂಗೀತಕ್ಕಿದೆ ಪ್ರತಿಯೋಬ್ಬರು ಸಂಗೀತ ಕೇಳುವುದರಿಂದ ನೃತ್ಯ ನೋಡುವುದರಿಂದ, ಪ್ರತಿಯೋಬ್ಬರ ಮೈ ಮನಗಳು ಅರಳುತ್ತವೆ ಎಂದು ಥೇರಿನಮಠ ಬಡದಾಳ ಹಾಗೂ ಕುಲಾಲಿ ಶ್ರೀ ಷ್.ಬ್ರ. ಡಾ||ಚೆನ್ನಮಲ್ಲ ಶಿವಯೋಗಿ ಶಿವಾಚಾರ್ಯರು ಹೇಳಿದರು.

ಅವರು ಬುಧವಾರ ಅಫಜಲಪೂರ ತಾಲ್ಲೂಕಿನ ಕುಲಾಲಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಹಾಗೂ ವಿಶ್ವಚೇತನ ಕಲಾ ಅಭಿವೃದ್ಧಿ ಸಂಸ್ಧೆ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ೭೫ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ವರ್ಷಾಚರಣೆ ಅಂಗವಾಗಿ ಸಂಗೀತ ವೈಭವ ಸಾಂಸ್ಕೃತಿಕ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಾ. ಸಂಗೀತ ಮನಸ್ಸನ್ನು ಸಂತೃಪ್ತಿಗೊಳಿಸುತ್ತದೆ. ಎಲ್ಲಾ ದುಕ್ಕ ಮತ್ತು ದುಃಖಗಳನ್ನು ಮರೆಸುತ್ತದೆ. ಸಂಗೀತ ಚಿಕೆತ್ಸೆಯಿಂದ ಮನೋರೋಗಿಗಳನ್ನು ಗುಣಪಡಿಸಲಾಗಿದೆ. ಸಂಗೀತದಿಂದ ಮಾನಸಿಕ ನೆಮ್ಮದಿ ಲಭಿಸುತ್ತದೆ ಎಂದರು.

Contact Your\'s Advertisement; 9902492681

ಚಿಂಚೋಳಿ ಶ್ರೀ ಷ್.ಬ್ರ. ಗದ್ದಿಗೇಶ್ವರ ಮಲ್ಲಿಕಾರ್ಜುನ ಶಿವಾಚಾರ್ಯರು ಪಾವನ ಸಾನಿಧ್ಯ ವಹಿಸಿದರು. ಅಫಜಲಪೂರ ಕೊರಬು ಫೌಂಡೇಷನ್ ಸಂಸ್ಧಾಪಕ ಜೆ.ಎಮ್.ಕೊರಬು ಅವರು ಕಾರ್ಯಕ್ರಮ ಉದ್ಘಾಟಿಸಿದರು.

ಕಲಬುರಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಉದ್ದಿಮೇದಾರ ಅಶೋಕ ಗುತ್ತೇದಾರ ಬಡದಾಳ, ಪತ್ರಕರ್ತ ಸಾ.ಸಿ.ಬೆನಕನಹಳ್ಳಿ, ಪ್ರಥಮ ದರ್ಜೆ ಗುತ್ತಿಗೆದಾರ ಶಿವರೆಡ್ಡಿ ಶ್ರೀಶೈಲಗೌಡ ಐನಾಪೂರ, ಅಫಜಲಪೂರ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಚಂದ್ರಶೇಖರ ಜಿ.ಕರಜಗಿ, ಅಫಜಲಪೂರ ಗಾಣಿಗ ಸಮಾಜದ ಅಧ್ಯಕ್ಷ ಶಂಕರಗೌಡ ಸಾಯಬಣ್ಣಗೌಡ ಪಾಟೀಲ ಭೋಸಗಾ ಮತ್ತು ಯುವ ಮುಖಂಡ ಮಲ್ಲಿಕಾರ್ಜುನ ಕೋಡ್ಲಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಈ ಕಾರ್ಯಕ್ರಮದಲ್ಲಿ ಹಿಂದುಸ್ಥಾನಿ ಗಾಯನ, ಜಾನಪದ ಗೀತೆ, ತತ್ವಪದ, ಕೊಳಲು ವಾದನ, ಸುಗಮ ಸಂಗೀತ, ಇತ್ಯಾದಿ ಕಾರ್ಯಕ್ರಮಗಳು ನಡೆಯಿಸಿಕೊಟ್ಟರು. ಗದಗ ಜಿಲ್ಲೆಯ ಕೊಣ್ಣೂರ ಕಿಸಾನ ಕಲಾ ತಂಡದವರು ಜೋಗತಿ ನೃತ್ಯ, ದೀಪ ನೃತ್ಯ, ಮೈಲಾರಲಿಂಗನ ನೃತ್ಯ, ವಣಿಕೆ ನೃತ್ಯಗಳು ನಡೆಯಿಸಿಕೊಟ್ಟರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ಮತ್ತು ಕಲಾವಿದರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು. ವಿಶ್ವಚೇತನ ಕಲಾ ಅಭಿವೃದ್ಧಿ ಸಂಸ್ಧೆಯ ಅಧ್ಯಕ್ಷರಾದ ಶ್ರೀಮತಿ ಕಸ್ತೂರಿ ಡಿ. ಘಟ್ಟಿಕಾರ, ದತ್ತರಾಜ ಕಲಶೆಟ್ಟಿ ಬಂದರವಾಡ ಉಪಸ್ಥಿತರಿದ್ದರು.

ಮಹಾಂತಜ್ಯೋತಿ ಪ್ರತಿಷ್ಠಾನ ಅಧ್ಯಕ್ಷ ಪ್ರೋಫೆಸರ ಶಿವರಾಜ ಪಾಟೀಲ್ ಅವರು ಸ್ವಾಗತಿಸಿದರು. ನವಲಿಂಗ ಪಾಟೀಲ್ ನಿರೂಪಿಸಿದರು. ದತ್ತು ಘಟ್ಟಿಕಾರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here