ಕಬುರಗಿ: ಜಿಲ್ಲೆಯ ಆಳಂದ ಸಕ್ಕರೆ ಕಾರ್ಖಾನೆ ಉಳಿಸಿಕೊಂಡಿರುವ ಕಬ್ಬುಬೆಳೆಗಾರರ ಬಾಕಿ ಬಿಲ್ ಬಿಡುಗಡೆ ಮಾಡಬೇಕು ಹಾಗೂ ಪ್ರಸಕ್ತ ಸಾಲಿನಲ್ಲಿ ಪ್ರತಿಟನ್ ಕಬ್ಬಿಗೆ ೩೫೦೦ ರೂ.ಗಳನ್ನು ನಿಗದಿ ಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನಾ ಪ್ರಧರ್ಶನ ಕೈಗೊಳ್ಳಲಾಯಿತು.
ಪುನಿತರಾಜ ಕವಡೆ, ಪೃತ್ವಿರಾಜ ರಾಂಪೂರೆ, ಸಿದ್ದನಗೌಡ ಮಾಲಿಪಾಟೀಲ, ಅಲಿಸಾಬ ಎಂ.ಅಗಸಿಮನಿ, ವಾಸವಿ ಕಡಗಂಚಿ, ಶಿವಾನಂದ ಕೋಗನೂರ, ಕಲ್ಯಾಣಿ ತಳವಾರ, ಸಿದ್ದು ಪೂಜಾರಿ, ಅಶೋಕ ಭೀಮಳ್ಳಿ ಇದ್ದರು.