ಮಾಲಗತ್ತಿ:ಪದವಿ ಪೂರ್ವ ಕಾಲೇಜ್ ಸ್ಥಳಾಂತರ ವಿರೋಧಿಸಿ ಪ್ರತಿಭಟನೆ

0
19

ಸುರಪುರ: ತಾಲೂಕಿನ ಮಾಲಗತ್ತಿ ಗ್ರಾಮಕ್ಕೆ ಮಂಜೂರಾಗಿರುವ ಪದವಿ ಪೂರ್ವ ಕಾಲೇಜ್‌ನ್ನು ಸ್ಥಳಾಂತರಗೊಳಿಸುತ್ತಿದ್ದಾರೆ,ಇದಕ್ಕೆ ಅವಕಾಶ ನೀಡುವುದಿಲ್ಲವೆಂದು ವಿರೋಧಿಸಿ ಮಾಲಗತ್ತಿ ಗ್ರಾಮಸ್ಥರು ಸುರಪುರ ಹುನಗುಂದ ರಾಜ್ಯ ಹೆದ್ದಾರಿ ತಡೆದು ಟೈರ್‌ಗೆ ಬೆಂಕಿ ಹಚ್ಚಿ ಬೃಹತ್ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ,ನಮ್ಮ ಗ್ರಾಮಕ್ಕೆ ೨೦೧೭-೧೮ ರಲ್ಲಿ ಪದವಿ ಪೂರ್ವ ಕಾಲೇಜು ಮಂಜೂರಾಗಿದೆ,ಆದರೆ ಇಲ್ಲಿಯವರೆಗೂ ಕಾಲೇಜಿನ ಕಟ್ಟಡ ನಿರ್ಮಾಣಗೊಂಡಿಲ್ಲ ಇದಕ್ಕಿಂತ ಮುಂಚೆಯೆ ಕಾಲೇಜು ಬೇರೆಡೆಗೆ ಸ್ಥಳಾಂತರಗೊಳಿಸಲಾಗುತ್ತಿದೆ ಎನ್ನುವುದು ನಮ್ಮ ಗ್ರಾಮಕ್ಕೆ ಮಾಡುತ್ತಿರುವ ಅನ್ಯಾಯವಾಗಿದೆ.ಇದಕ್ಕೆ ನಾವು ಅವಕಾಶ ನೀಡುವುದಿಲ್ಲ,ಕೂಡಲೇ ಸ್ಥಳಾಂತರ ಕೈಬಿಟ್ಟು ಕಾಲೇಜು ಕಟ್ಟಡ ನಿರ್ಮಿಸಬೇಕು ಇಲ್ಲವಾದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

Contact Your\'s Advertisement; 9902492681

ಪ್ರತಿಭಟನಾ ಸ್ಥಳಕ್ಕೆ ಪದವಿ ಪೂರ್ವ ಶಿಕ್ಷಣ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಚಂದ್ರಕಾಂತ ಹಿಳ್ಳಿ ಆಗಮಿಸಿ ಮಾತನಾಡಿ,೨೦೧೭-೧೮ ರಲ್ಲಿ ಇಲ್ಲಿಗೆ ಮಂಜೂರಾಗಿರುವ ಪದವಿ ಪೂರ್ವ ಕಾಲೇಜು ಸ್ಥಳಾಂತರ ಎಂಬುದಿಲ್ಲ,ಆದರೆ ಇಲ್ಲಿ ತರಗತಿಗಳಿಗೆ ವಿದ್ಯಾರ್ಥಿಗಳ ಕೊರತೆ ಇರುವುದರಿಂದ ಬೇರೆ ಕಾಲೇಜಿನೊಂದಿಗೆ ವಿಲೀನದ ಕುರಿತು ಚಿಂತನೆ ನಡೆದಿದೆ.ಆದರೆ ಯಾವುದೇ ಕಾರಣಕ್ಕೂ ಕಾಲೇಜು ಸ್ಥಳಾಂತರವಾಗುವುದಿಲ್ಲ ಎಂದು ಭರವಸೆ ನೀಡಿದರು.

ನಂತರ ಉಪ ನಿರ್ದೇಶಕರಿಗೆ ಮನವಿಯನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಯಲ್ಲಮ್ಮ ಗೌಡಗೇರಿ,ಉಪಾಧ್ಯಕ್ಷ ನಿಂಗಣ್ಣ ಸಾಹುಕಾರ, ಎಸ್ಡಿಎಮ್‌ಸಿ ಅಧ್ಯಕ್ಷ ಸಣ್ಣಕೆಪ್ಪ ಸಾಹುಕಾರ,ವಿಎಸ್‌ಎಸ್‌ಎನ್ ಅಧ್ಯಕ್ಷ ಭೀಮಣ್ಣ ದೊರೆ,ಭೀಮರಾಯಗೌಡ ಮಾಲಿ ಪಾಟೀಲ್,ಮಹಾರಾಯ ಸಾಹುಕಾರ್,ಭೀಮಣ್ಣ ದೊರೆ,ನಿಂಗಣ್ಣ ಸಾಹುಕಾರ್,ಜೆಟ್ಟೆಪ್ಪ ಗುಂಡಾಪುರ,ದೇವಿಂದ್ರಪ್ಪಗೌಡ ಪೊಲೀಸ್ ಪಾಟೀಲ್,ವೆಂಕೋಬ ದೊರೆ,ರೂಪಾ ಮಹಾಂತೇಶ,ಆರ್.ಎಸ್.ಮಾಲಗತ್ತಿ,ಲಕ್ಷ್ಮೀಬಾಯಿ ನಿಂಗಣ್ಣ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here