ಕಲಬುರಗಿ; ನಗರದ ಹೊರ ವಲಯದ ಸೈಯದ್ ಚಿಂಚೋಳಿಯಲ್ಲಿರುವ ದರ್ಗಾ ಹಜರತ್ ಸಾತೋ ಶಹೀದ್ (ರಪ) ಅವರ ಮೂರು ದಿನಗಳ ಉರುಸ್ ಸರ್ಕಾರದ ನಿಯಮಾವಳಿಗನುಸಾರವಾಗಿ ಸರಳವಾಗಿ ಆಚರಣೆಯಾಗಿ ಯಶಸ್ವಿಯಾಗಿ ಜರುಗಿತು.
ಅಕ್ಟೋಬರ್ ೨೨, ೨೩ ಹಾಗೂ ೨೪ ರಂದು ನಡೆದಿರುವ ವಾರ್ಷಿಕ ಸಂದಲ್ ಷರೀಫ್ (ಗಂಧ), ಚಿರಾಗ್ (ದೀಪ) ಹಾಗೂ ಜಿಯಾರತ್ ಕಾರ್ಯಕ್ರಮಗಳು ರಾಜ್ಯ ವಕ್ಫ ಇಲಾಖೆಯ ನಿರ್ದೇಶನದಂತೆ ನಡೆದವು. ಉರುಸ್ ಸಂದರ್ಭದಲ್ಲಿ ದರ್ಗಾದ ಧಾರ್ಮಿಕ ವಂಶ ಪಾರಂಪರೆಯಿಂದ ಬಂದಂತಹ ಆಚರಣೆ ಪ್ರಕಾರ ದರ್ಗಾದ ಮುತವಲ್ಲಿ ಹಾಗೂ ಸಜ್ಜಾದ ನಶೀನ್ ಅಶ್ವಕ್ ಅಹ್ಮದ್ ಸಿದ್ದಖಿ ಅವರು ಸಂದಲ್ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸರಳ ಉರುಸ್ ಆಚರಣೆಯಲ್ಲಿ ಜೆಡಿಎಸ್ ಮುಖಂಡ ಕೃಷ್ಣಾ ರೆಡ್ಡಿ, ಈರಣ್ಣಾ ಅವರಾದಿ, ಅನೀಲಕುಮಾರ ಡಾಂಗೆ, ಸೈಯದ್ ಪಟೇಲ್, ನಜೀರ್ ಖಾನ್, ಶರಣು ಸಂಗೋಳಗಿ, ಮುತ್ತವಲ್ಲಿ ವಂಶಜರಾದ ಎಂ.ಎ ಸಮದ್ ಸಿದ್ದಿಕಿ, ಎಫೀಕ್ ಸಿದ್ದಿಕಿ, ಅಬ್ದುಲ್ ಮಜೀದ್ ಸಿದ್ದಿಕಿ, ಸತ್ತಾರ ಸಿದ್ದಿಕಿ, ಗೌಸ ಸಿದ್ದಿಕಿ, ಜಬ್ಬಾರ ಸಿದ್ದಿಕಿ, ಮುಸ್ತಾಕ್ ಸಿದ್ದಿಕಿ, ಅಬ್ದುಲ್ ಖಾದರ್, ಶಹಬಾಜ್ ಅಹ್ಮದ್ ಸೇರಿದಂತೆ ಗ್ರಾಮಸ್ಥರು ವಾಲ್ಗೊಂಡಿದ್ದರು. ಸರಳ ಜಾತ್ರಾ ಯಶಸ್ವಿಯಲ್ಲಿ ಪಿಡಿಓ ಪ್ರೀತಿ ಕುಚಮೆ, ಪೊಲೀಸ ಅಧಿಕಾರಿಗಳಾದ ಬಾಸು ಚವ್ಹಾಣ, ಕವಿತಾ ಚವ್ಹಾಣ ಮತ್ತಿತರ ಅಧಿಕಾರಿಗಳು ಸಹಕರಿಸಿದರು ಎಂದು ದರ್ಗಾದ ಮುತವಲ್ಲಿ ಅಶ್ಫಕ್ ಸಿದ್ದಿಖಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.