ಕಲಬುರಗಿ: ನಗರದ ಚೌಕ ಪೊಲೀಸ್ ಠಾಣೆಯಲ್ಲಿ ದುಂಡಪ್ಪ ಜಮಾದಾರ ಎಂಬ ವ್ಯಕ್ತಿಯ ಮೇಲೆ ದೌರ್ಜನ್ಯ ನಡೆಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ಪ್ರದೇಶ ಕೋಲಿ ಕಬ್ಬಲಿಗರ ಸಂಘ ಹಾಗೂ ಜಿಲ್ಲಾ ಕೋಲಿ ಕಬ್ಬಲಿಗ ಸಮನ್ವಯ ಸಮಿತಿಯಿಂದ ನಗರ ಪೊಲೀಸ್ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ, ರಾಜಗೋಪಾಲರೆಡ್ಡಿ,ಬಸವರಾಜ ಬೂದಿಹಾಳ,ಮಹಾಂತೇಶ ಕೌಲಗಿ,ಲಚ್ಚಪ್ಪ ಜಮಾದಾರ, ಶಾಂತಪ್ಪ ಕೂಡಿ,ರಮೇಶ ನಾಟಿಕರ, ಸಾಯಿಬಣ್ಣ ನೀಲಪ್ಪಗೋಳ ಸೇರಿದಂತೆ ಇತರರಿದ್ದರು.