ಕಲಬುರಗಿ: ಮಹಾದಾಸೋಹಿ ಶ್ರೀಶರಣಬಸವೇಶ್ವರ ಸಂಸ್ಥಾನದ ಪೂಜ್ಯ ಚಿರಂಜಿವಿ ದೊಡ್ಡಪ್ಪ ಅಪ್ಪಾಜಿ ಅವರ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಕಲಬುರಗಿ ಜಿಲ್ಲಾ ವೀರಶೈವ ಸಮಾಜ ನಿರ್ಧರಿಸಿದೆ. ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷರಾದ ಡಾ.ಅರುಣಕುಮಾರ ಎಸ್.ಪಾಟೀಲ ಕೊಡಲಹಂಗರಗಾ ಅವರ ನೇತೃತ್ವದಲ್ಲಿ ನಗರದ ವೀರಶೈವ ಕಲ್ಯಾಣ ಮಂಟಪ ಆವರಣದಲ್ಲಿ ಸೇರಿದ ಸಮಾಜದ ಪ್ರಮುಖ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಇದೇ ನವೆಂಬರ್ ೧ರಂದು ನಗರದ ಪೂಜ್ಯಶ್ರೀ ಬಸವರಾಜಪ್ಪ ಅಪ್ಪಾ ಸಭಾಂಗಣದಲ್ಲಿ ಜರುಗಲಿರುವ ಪೂಜ್ಯ ಚಿರಂಜಿವಿ ದೊಡ್ಡಪ್ಪ ಅಪ್ಪಾಜಿ ಅವರ ಜನ್ಮದಿನ ಕಾರ್ಯಕ್ರಮಕ್ಕೆ ಗ್ರಾಮೀಣ ಪ್ರದೇಶದಿಂದ ಬರುವ ಭಕ್ತರನ್ನು ಕರೆತರುವ ಜವಾಬ್ದಾರಿಯನ್ನು ಸಮಾಜದ ತಾಲೂಕು, ಹೊಬಳಿ ಮಟ್ಟದ ಪದಾಧಿಕಾರಿಗಳಿಗೆ ವಹಿಸಲಾಯಿತು.
ಸಭೆಯಲ್ಲಿ ಜಿಲ್ಲಾ ವೀರಶೈವ ಸಮಾಜದ ಪ್ರಮುಖರಾದ ಕಲ್ಯಾಣರಾವ ಪಾಟೀಲ ಮೂಲಗೆ, ಕಲ್ಯಾಣಪ್ಪ ಪಾಟೀಲ ಮಲಖೇಡ, ಸುಭಾಷ ವಿಜಾಪುರೆ, ಚಂದ್ರಶೇಖರ ತಳ್ಳಳ್ಳಿ, ಸಿದ್ರಾಮ ಪಾಟೀಲ ಧಣ್ಣೂರ, ಶಿವಪುತ್ರಪ್ಪ ಬೆಂಕಿ, ವಿಜಯಕುಮಾರ ತಾತನೂರಕರ, ಕಲ್ಯಾಣಪ್ಪ ಗೋಧಿ, ಸಾತಪ್ಪ ಪಟ್ಟಣಕರ, ನಾಗಣ್ಣ ಕಲಶೆಟ್ಟಿ, ಶರಣು ಪಪ್ಪಾ ಮತ್ತು ಶ್ರೀಶೈಲ ಗೂಳಿ, ಜಗನ್ನಾಥ ಪಟ್ಟಣಶೇಟ್ಟಿ ಸೇರಿದಂತೆ ಕಲಬುರಗಿ ಜಿಲ್ಲಾ ವೀರಶೈವ ಸಮಾಜದ ತಾಲೂಕು, ಹೊಬಳಿ ಘಟಕಗಳ ಪದಾಧಿಕಾರಿಗಳು ಇದ್ದರು.