ಕಲಬುರಗಿ: ಮುಂಬರುವ ಜಿಲ್ಲಾ ಪಂಚಾಯಿತ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಆ ನಿಟ್ಟಿನಲ್ಲಿ ಪಕ್ಷ ಸಂಘಟನೆ ಬಲವರ್ಧನೆಗೆ ಶ್ರಮಿಸಬೇಕು ಎಂದು ರಾಷ್ಟ್ರೀಯ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ದೇವಿಂದ್ರ ಚಿಗರಹಳ್ಳಿ ಹೇಳಿದರು.
ನಗರದಲ್ಲಿ ನಡೆದ ರಾಷ್ಟ್ರೀಯ ಸಮಾಜ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ವೀರ ತಾನಾಜಿ ಮಾಲ್ಸೂರೆ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು. ಈ ದಿಸೆಯಲ್ಲಿ ವಿವಿಧೆಡೆ ಪಕ್ಷ ಸಂಘಟನೆಗೆ ಒತ್ತು ಕೊಡಲಾಗಿದ್ದು, ಜಿಲ್ಲೆಯಲ್ಲಿ ಪಂಚಾಯತಿ ಚುನಾವಣೆಯಲ್ಲಿ ಖಾತೆ ತೆರೆಯುವ ಗುರಿ ಇಟ್ಟುಕೊಳ್ಳಲಾಗಿದೆ ಎಂದ ಅವರು ರಾಷ್ಟ್ರದಲ್ಲಿರುವ ಎಲ್ಲಾ ಸಮುದಾಯಗಳನ್ನು ಒಂದುಗೂಡಿಸಿ ರಾಷ್ಟ್ರೀಯತೆ ಬೆಳೆಸುವುದೇ ಒಂದು ಮುಖ್ಯ ಉದ್ದೇಶ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಶಿವಲಿಂಗಪ್ಪ ಕಿನ್ನೂರ್ ಅವರು ಮಾತನಾಡಿ ರಾಷ್ಟ್ರೀಯ ಸಮಾಜ ಪಕ್ಷವು ೧೬ ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದು ಶಾಸಕರಾದ ಮಹಾದೇವ ಜಾಂಕರ್ ಅವರು ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ ಅವರ ನಿರಂತರ ಶ್ರಮದಿಂದ ಭಾರತದ ವಿವಿಧ ರಾಜ್ಯಗಳಲ್ಲಿ ಆದ ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ ,ಉತ್ತರ ಪ್ರದೇಶ, ಮಧ್ಯಪ್ರದೇಶ, ಕೇರಳದಲ್ಲಿ ಅನೇಕ ಜನಪ್ರತಿನಿಧಿಗಳನು ಹಾಗೂ ಶಾಸಕರನ್ನು ಚುನಾಯಿತರಾಗಿದ್ದಾರೆ ಅದೇರೀತಿ ಹಿಂದುಳಿದ ಸಮುದಾಯಗಳ ಸಣ್ಣ ಸಣ್ಣ ಜಾತಿಗಳನ್ನು ಒಂದುಗೂಡಿಸಿ ಅವರ ಸಮಸ್ಯೆಗಳನ್ನು ಬಗ್ಗೆ ಪರಿಹರಿಸಿದರೆ ಉತ್ತರ ಕರ್ನಾಟಕದಲ್ಲಿ ನೂರಾರು ಜನಪ್ರತಿನಿಗಳು ಆರಿಸಿ ತರಬಹುದು ಎಂದರು.
ಈ ಸಂದರ್ಭದಲ್ಲಿ ಅರ್ಜುನ ಜಮಾದಾರ, ಚಂದ್ರಕಾಂತ ಗವಾರ, ಸಿದ್ದರಾಮ ಬಿದನೂರ, ರಮೇಶ ಜಮಾದಾರ, ಎಲ್ಲಪ್ಪ ಕೊಲಕರ, ಪ್ರೇಮ ಕೋಳಿ, ಮಲ್ಲೇಶಪ್ಪ ಜಮಾದಾರ, ಸಂತೋಷ ಖಾನಾಪುರ, ಬಸವರಾಜ ನಾಯ್ಕೋಡಿ, ರಾಜೇಂದ್ರ ರಾಜವಾಳ ಇದ್ದರು. ಪ್ರಸ್ತಾವಿಕವಾಗಿ ಅಯ್ಯಪ್ಪ ಸಿಂದಗಿ ಅವರು ಮಾತನಾಡಿದರು. ಚಂದ್ರಕಾಂತ ಫಿರೋಜಾಬಾದ ವಂದಿಸಿದರು.