ಕಲಬುರಗಿ ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಪದವಿ ಸಾಮಾನ್ಯ ಪ್ರವೇಶ ಪರೀಕ್ಷೆ ನಾಳೆ ಆರಂಭ

0
95

ಕಲಬುರಗಿ: 2019-20ರ  ಸ್ನಾತಕೋತ್ತರ ಪದವಿ ಸಾಮಾನ್ಯ ಪ್ರವೇಶ ಪರೀಕ್ಷೆ 12 ರಿಂದ 18 ವರಗೆ ನಡೆಯಲಿದೆ ಎಂದು ಕುಲಪತಿ ಪ್ರೊ. ಎಸ್‌. ಪಿ. ಮೇಲಕೇರಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2019-20ರ ಸಾಲಿನ ಶೈಕ್ಷಣಿಕ ವರ್ಷದ ಪ್ರವೇಶಾತಿಗಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಗಳು ವಿಶ್ವ ವಿದ್ಯಾಲಯದ ವಿಭಾಗದ ಆವರಣದ ವಿವಿಧ ವಿಭಾಗದ ಕೇಂದ್ರಗಳಲ್ಲಿ ನಡೆಯಲಿದೆ ಎಂದು ತಿಳಿಸಿದರು.

Contact Your\'s Advertisement; 9902492681

2019ರ ಜುಲೈ 12 ರಿಂದ 18ನೇ ದಿನಾಂಕದವರಗೆ ನಿಗದಿಪಡಿಸಿದೆ. ಒಟ್ಟು 22 ಸ್ನಾತಕೋತ್ತರ ವಿಭಾಗಳ ವಿಷಯಗಳಿಗಾಗಿ ಈ ಪ್ರವೇಶ ಪರೀಕ್ಷೆ ನಡೆಯಲಿದ್ದು, ಪ್ರಸಕ್ತ ಶೈಕ್ಟಣಿಕ ಸಾಲಿನ ಪ್ರವೇಶಾತಿಗಾಗಿ ಒಟ್ಟು 12,107 ಅರ್ಜಿಗಳು ಸ್ವೀಕರಿಸಿದೆ, ಇದರಲ್ಲಿ ಪ್ರವೇಶ ಪರೀಕ್ಷೆ ಹಾಗೂ ಪ್ರವೇಶ ಪರೀಕ್ಷೆ ರಹೀತ ವಿಷಯಗಳಿಗೆ ಒಟ್ಟು 10,261 ವಿದ್ಯಾರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಿದ್ದಾರೆ. 8,939 ವಿದ್ಯಾರ್ಥಿಗಳು 22 ಸ್ನಾತಕೋತ್ತರ ವಿಭಾಗಳ ವಿಷಯಗಳಿಗಾಗಿ ಪ್ರವೇಶ ಪರೀಕ್ಷೆಯಲ್ಲಿ ಭಾಗವಹಿಸುವರು ಎಂದು ಮಾಹಿತಿ ನೀಡಿದರು.

ವಿಶ್ವವಿದ್ಯಾಲಯವು ಈ ನಿಟ್ಟಿನಲ್ಲಿ ಎಲ್ಲ ತರಹದ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಪ್ರವೇಶ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳುವ ಸೂಕ್ತ ಆಸನದ ವ್ಯವಸ್ಥೆಮಾಡಲಾಗಿದೆ. ಪರೀಕೆಗೆ ಹಾಜರಾಗುವ ವಿದ್ಯಾರ್ಥಿಗಳ ಬ್ಲಾಕ್‌ ಹಾಗೂ ಯೂನಿಟ್ವಾರು ಪಟ್ಟಿಯನ್ನು ವಿಶ್ವವಿದ್ಯಾಲಯದ ಜಾಲತಾಣದಲ್ಲಿ ಬಿಡಲಾಗಿದೆ. ವಿದ್ಯಾರ್ಥಿಯು ತನ್ನ ಪರೀಕ್ಬೆಯ ಕೊಠಡಿಯನ್ನು ತಿಳಿದುಕೊಳ್ಳುವ ಸಲುವಾಗಿ ವಿಶ್ವವಿದ್ಯಾಲಯದ ಪ್ರವೇಶಾತಿ ಪೋರ್ಟಲನಲ್ಲಿ ತನ್ನ ನೋಂದಣಿ ಸಂಖ್ಯೆಯನ್ನು ಸಮೂದಿಸಿ ತಿಳಿದುಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಆವರಣದಲ್ಲಿರುವ ಹ್ಯೂಮಾನಿಟಿಸ್‌ ಬಿಲ್ಡಿಂಗ್‌ ಹತ್ತರವಿರುವ ಬಸ್‌ ಸ್ಟಾಪ್‌ ಪಕ್ಕ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ ವಿದ್ಯಾರ್ಥಿಗಳು ಇಲ್ಲಿ ಭೇಟಿ ನೀಡಿ ಮಾಹಿತಿ ಪಡೆಯಬಹುದೆಂದು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here