ಆಳಂದ: ತಾಲೂಕಿನ ಖಜೂರಿ ವಲಯದ ಬಬಲೇಶ್ವರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೨೦೨೦-೨೧ನೇ ಸಾಲಿನ ಎಸ್‌ಡಿಎಂಸಿ ಹಾಗೂ ಪಾಲಕ-ಪೋಷಕರ ಸಭೆ ನಡೆಯಿತು.
ಸಭೆಯಲ್ಲಿ ಗ್ರಾಪಂ ಸದಸ್ಯ ಮಹಾದೇವ ಕಾಂಬಳೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲಾ ಸುಧಾರಣೆಗೆ ಸಂಬಂಧಿತ ವಿಷಯಗಳನ್ನು ಪ್ರಸ್ತಾಪಿಸಿದರು. ಸರ್ಕಾರದಿಂದ ಹಾಗೂ ಗ್ರಾಪಂನಿಂದ ಶಾಲೆಗೆ ಬರುವ ಸೌಲಭ್ಯಗಳನ್ನು ಶಾಲೆಯವರು ಪಡೆದು ಮಕ್ಕಳಿಗೆ ವಿತರಿಸಬೇಕು. ಉತ್ತಮವಾಗಿ ಬಿಸಿಯೂಟವನ್ನು ನಿರ್ವಹಿಸಬೇಕು. ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಹೇಳಿದರು.
ಪ್ರಮುಖ ಬಾಬುರಾವ್ ಸುರವಾಸೆ, ಸಿದ್ಧಪ್ಪ ಸುರವಾಸೆ, ನೀಲಪ್ಪಗೌಡ ಪಾಟೀಲ, ಶ್ರೀಶೈಲ ಗೋಧೆ, ಬಸವರಾಜ ಗೋಧೆ, ಸೋಮಯ್ಯ ಸ್ವಾಮಿ ಮತ್ತು ನಿಜಲಿಂಗಪ್ಪ ಕಾಂಬಳೆ, ಗುಂಡಪ್ಪ ಖಂಡಡಾಳೆ ಮತ್ತು ಶಾಲೆಯ ಮುಖ್ಯ ಶಿಕ್ಷಕ ದತ್ತು ಪೂಜಾರಿ, ಎಸ್‌ಡಿಎಂಸಿ ಉಪಾಧ್ಯಕ್ಷ ಮಹಾನಂದ ಕಾಂಬಳೆ, ಸದಸ್ಯ ನಿಜಲಿಂಗಪ್ಪ ಗೋಧೆ, ಶಾಂತಯ್ಯ ಸ್ವಾಮಿ, ನೀಲಪ್ಪ ಕಾಂಬಳೆ ಹಾಗೂ ವಿದ್ಯಾರ್ಥಿಗಳ ಪಾಲಕ, ಪೋಷಕರು ಶಾಲೆಯ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.
ಶಿಕ್ಷಕ ಶಿವರಾಜ ಸ್ವಾಗತಿಸಿದರು. ಶಿಕ್ಷಕ ಶ್ರೀಶೈಲ ನಿರೂಪಿಸಿದರು. ಗ್ರಾಪಂ ಸದಸ್ಯ ರಿಜ್ವಾನ ಶೇಖ ವಂದಿಸಿದರು.