ಶಹಾಬಾದ: ಒಬ್ಬ ವ್ಯಕ್ತಿ ತನ್ನ ಕರ್ತವ್ಯವನ್ನು ನಿ? ಹಾಗೂ ದಕ್ಷತೆಯಿಂದ ಸೇವೆ ಸಲ್ಲಿಸಿದಾಗ ಸಮಾಜವೇ ಅವರನ್ನು ಗುರುತಿಸುತ್ತದೆ ಮತ್ತು ಗೌರವಿಸುತ್ತದೆ ಎಂಬುದಕ್ಕೆ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಶರಣಪ್ಪ ಬನ್ನಿಕಟ್ಟಿ ಅವರೇ ಸಾಕ್ಷಿ ಎಂದು ಅನುದಾನಿತ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಚನ್ನಬಸಪ್ಪ ಕೊಲ್ಲೂರ್ ಹೇಳಿದರು.
ಅವರು ಚಿತ್ತಾಪೂರ ತಾಲೂಕಿನ ಮಡಬೂಳ ಗ್ರಾಮದ ಜ್ಞಾನ ಗಂಗಾ ಶಿಕ್ಷಣ ಸಂಸ್ಥೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ನಿವೃತ್ತರಾದ ಶಿವಶರಣಪ್ಪ ಬನ್ನಿಕಟ್ಟಿ ಅವರಿಗೆ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದಿಂದ ಆಯೋಜಿಸಲಾದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಚಿತ್ತಾಪೂರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಂದರ್ಭದಲ್ಲಿ ಎಲ್ಲರನ್ನೂ ತಮ್ಮ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮುಖೇನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಹಾಗಾಗಿ ಅವರು ನಿವೃತ್ತರಾದರೂ ಅವರನ್ನು ವಿವಿಧ ಸಂಘಗಳು ಅವರ ಸೇವೆಯನ್ನು ಪರಿಗಣಿಸಿ ಗೌರವಿಸುತ್ತಿದೆ. ಇದು ಅಭಿನಂದನೀಯವೆಂದರು.
ಅನುದಾನಿತ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಮೇಶ ಬೇಟೆಗೇರಿ ಮಾತನಾಡಿ, ಕ್ಷೇತ್ರ ಶಿಕ್ಷಣಾಧಿಕಾರಿಯಾದ ಸಂದರ್ಭದಲ್ಲಿ ಶಿವಶರಣಪ್ಪ ಬನ್ನಿಕಟ್ಟಿ ಅವರು ತಮ್ಮ ಸೇವಾವಧಿಯಲ್ಲಿ ಶಿಕ್ಷಕರೊಂದಿಗೆ ಒಳ್ಳೆಯ ಒಡನಾಟ ಹೊಂದಿದ್ದರು. ಎಲ್ಲರೊಂದಿಗೆ ನಯ,ವಿನಯದಿಂದ ನಡೆದುಕೊಳ್ಳುತ್ತಿದ್ದರು.ಇದೇ ಅವರಲ್ಲಿ ಕಂಡಂತಹ ಅಪರೂಪದ ಗುಣ ಎಂದು ಬಣ್ಣಿಸಿದರಲ್ಲದೇ, ಸರ್ಕಾರಿ ಸೇವಾವಧಿಯ ನಂತರದ ನಿವೃತ್ತಿ ಜೀವನ ನಿಮ್ಮ ನೆಮ್ಮದಿಯ ಸುಖ, ಸಂತೋ?ದ ಕ್ಷಣಗಳನ್ನು ತರುವಂತಾಗಲಿ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿಕೊಂಡು ಮಾತನಾಡಿದ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಶರಣಪ್ಪ ಬನ್ನಿಕಟ್ಟಿ, ಪ್ರತಿಯೊಬ್ಬ ಸರಕಾರಿ ನೌಕರರಿಗೆ ನಿವೃತ್ತಿ ಎಂಬುದು ಅನಿವಾರ್ಯ. ಆದರೆ ನಮ್ಮ ಸೇವಾವಧಿಯಲ್ಲಿ ಪ್ರಾಮಾಣಕತೆಯಿಂದ ಜನರ ಹಾಗೂ ಶಿಕ್ಷಕರ ಸೇವೆ ಮಾಡಬೇಕು. ಅದು ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುವಂತಾಗಬೇಕು. ಅಲ್ಲದೇ ಚಿತ್ತಾಪೂರಕ್ಕೆ ಬರಬೇಕಾದರೆ ಅಧಿಕಾರಿಗಳು ಕ್ಷಣಕಾಲ ಯೋಚಿಸುತ್ತಾರೆ. ಆದರೆ ಇಲ್ಲಿ ಸಲ್ಲಿಸಿದ ಕರ್ತವ್ಯ ಮತ್ತು ಶಿಕ್ಷಕರ ಹಾಗೂ ಜನರ ಸಹಕಾರ ತಮಗೆ ತೃಪ್ತಿ ತಂದಿದೆ ಎಂದರು.
ಜ್ಞಾನ ಗಂಗಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಹಂಚಿನಾಳ ಅಧ್ಯಕ್ಷತೆ ವಹಿಸಿದ್ದರು. ಸಂತೋಷ ಶಿರನಾಳ, ವಿಜಯಕುಮಾರ ಹಂಚಿನಾಳ, ಪ್ರಾ.ಶಾ.ಶಿ.ಸಂ ಅಧ್ಯಕ್ಷ ಶರಣಬಸಪ್ಪ ಬಮ್ಮನಳ್ಳಿ, ಪ್ರಶಾಂತ ಪಾಟೀಲ,ಶಿವಯೋಗಿ ಕಟ್ಟಿ, ಪ್ರವೀಣ ಹೆರೂರ್,ಮಹೇಂದ್ರ ದೊಡ್ಡಮನಿ,ಚಿದಾನಂದ ಮಠಪತಿ,ಪ್ರಕಾಶ ಪಾಟೀಲ, ಮಸ್ತಾನ ಪಟೇಲ್ ಇತರರು ಇದ್ದರು.