ಕಲಬುರಗಿ: ಈಗಾಗಲೇ ಅಂಗವೈಕಲ್ಯತೆಯ ಗುರುತಿನ ಚೀಟಿ ಪಡೆದವರು ಹಾಗೂ ಪಡೆಯದೇ ಇರುವ ಕಲಬುರಗಿ ಜಿಲ್ಲೆಯ ಎಲ್ಲ ವಿಕಲಚೇತನರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ವಿಶಿಷ್ಟ ಗುರುತಿನ ಚೀಟಿ (ಯು.ಡಿ.ಐ.ಡಿ. ಕಾರ್ಡ್) ಪಡೆಯಬಹುದಾಗಿದೆ ಎಂದು ಕಲಬುರಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ವಿಕಲಚೇತನರು ಯು.ಡಿ.ಐ.ಡಿ. ಕಾರ್ಡ್ ಕುರಿತು ಹೆಚ್ಚಿನ ಮಾಹಿತಿಗಾಗಿ ಆಯಾ ಗ್ರಾಮ ಪಂಚಾಯಿತಿಯ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು(ವಿ.ಆರ್.ಡಬ್ಲ್ಯೂ), ತಾಲೂಕು ಪಂಚಾಯಿತಿಯ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರನ್ನು (ಎಂ.ಆರ್.ಡಬ್ಲ್ಯೂ.) ಹಾಗೂ ನಗರ ಪ್ರದೇಶಗಳಲ್ಲಿನ ನಗರ ಪುನರ್ವಸತಿ ಕಾರ್ಯಕರ್ತರನ್ನು (ಯು.ಆರ್.ಡಬ್ಲ್ಯೂ.) ಸಂಪರ್ಕಿಸಿ ಪಡೆಯಬೇಕು. ಇದಲ್ಲದೇ ಕಲಬುರಗಿ ಸರ್ಕಾರಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರ ಮೊಬೈಲ್ ಸಂಖ್ಯೆ9448281615, ಸಿದ್ದಣ್ಣ ಪಟ್ಟೇದಾರ್ ಮೊಬೈಲ್ ಸಂಖ್ಯೆ 9986115178 ಅವರನ್ನು ಸಂಪರ್ಕಿಸಬೇಕು.
ಕಲಬುರಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-235222, ಅಂಗವಿಕಲರ ಮಾಹಿತಿ ಸಲಹೆಗಾರ ಪ್ರಕಾಶ ಜಾಧವ ಇವರನ್ನು ಮೊಬೈಲ್ ಸಂಖ್ಯೆ 9972563646ಗೆ ಸಂಪರ್ಕಿಸಬೇಕು. ಜಿಲ್ಲಾಧಿಕಾರಿಗಳ ಆದೇಶದಂತೆ ಕಲಬುರಗಿ ಜಿಲ್ಲೆಯ ಎಲ್ಲ ವಿ.ಆರ್.ಡಬ್ಲ್ಯೂ., ಎಂ.ಆರ್.ಡಬ್ಲ್ಯೂ ಹಾಗೂ ಯು.ಆರ್.ಡಬ್ಲ್ಯೂಗಳು ಹೆಚ್ಚಿನ ಕಾಳಜಿವಹಿಸಿ ವಿಕಲಚೇತನರ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿಶಿಷ್ಟ ಗುರುತಿನ ಚೀಟಿ (ಯು.ಡಿ.ಐ.ಡಿ. ಕಾರ್ಡ್) ಪಡೆಯಲು ಸಹಕರಿಸಬೇಕೆಂದು ಅವರು ತಿಳಿಸಿದ್ದಾರೆ.