ಕಲಬುರಗಿ: ಸ್ವಚ್ಛ ಭಾರತ ಸ್ವಚ್ಛ ಕಲಬುರಗಿ ಅಭಿಯಾನದ ಅಂಗವಾಗಿ ಬೃಹತ ಮ್ಯಾರಾಥಾನ್, ರಂಗೋಲಿ ಹಾಗೂ ಚಿತ್ರಕಲಾ ಸ್ಪರ್ಧೆ ೨೦೨೧ ರ ಕಲಬುರಗಿ ಮಹಾನಗರ ಪಾಲಿಕೆಯ ವತಿಯಿಂದ ಇದ್ದಕ್ಕೆ ಬ್ಯಾಂಡಿಂಗ್ ಪಾಲುದಾರರಾಗಿ ಮನೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಇಂದು ಆಯೋಜಿಸಿದ ಮ್ಯಾರಥಾನ್ ಓಟಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಅವರು ಚಾಲನೆ ನೀಡಿದರು.
ವಿಧಾನ ಪರಿಷತ ಸದಸ್ಯ ಶಶೀಲ ನಮೋಶಿ, ಜಿಪಂ ಸಿಇಒ ಡಾ.ದಿಲೀಷ ಶಶಿ, ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಡಿಸಿಪಿ ಶ್ರೀನಿವಾಸ ಅಡ್ಡೂರ, ಮನೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ಡಾ.ಫಾರೂಕ್ ಮಣೂರ್, ಮುಬೀನ್ ಅಹ್ಮದ್, ಪ್ರವೀಣ ಪುಣೆ ಹಾಗೂ ಸೇರಿದಂತೆ ಇತರರು ಇದ್ದರು.