ಕನ್ನಡ ನೆಲ ಜನ ಸಂರಕ್ಷಣೆಗೆ ಶ್ರಮಿಸಲು ಮಾದನಹಿಪ್ಪರಗಾ ಶ್ರೀ ಕರೆ

0
17

ಆಳಂದ: ಕನ್ನಡ ನಾಡು ನುಡಿ ರಕ್ಷಣೆಗಾಗಿ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಮಾದನಹಿಪ್ಪರಗಿ ಶ್ರೀ ಶಿವಲಿಂಗೇಶ್ವರ ವಿರಕ್ತ ಮಠದ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳು ಕರೆ ನೀಡಿದರು.

ತಾಲೂಕಿನ ನಿಂಗದಳ್ಳಿ ಗ್ರಾಮದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳ ಆಶ್ರಯದಲ್ಲಿ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಆಳಂದ ತಾಲೂಕು ಮಹಾರಾಷ್ಟರದ ಗಡಿ ಭಾಗವಾಗಿದೆ ಇಲ್ಲಿ ಹೆಚ್ಚಾಗಿ ಮರಾಠಿ ಪ್ರಭಾವ ಇದ್ದರು ಇಲ್ಲಿನ ಜನ ಕನ್ನಡ ಪ್ರೇಮ ಉಳ್ಳವರಾಗಿದ್ದಾರೆ ನಮ್ಮ ನಾಡು ನಮ್ಮ ಹೆಮ್ಮೆ ಕನ್ನಡದ ಉಳಿವಿಗಾಗಿ ಪ್ರತಿಯೊಬ್ಬರು ಕಂಕಣ ಬದ್ದರಾಗಿ ಕೆಲಸ ಮಾಡಬೇಕು ಅಂದಾಗ ಮಾತ್ರ ರಾಜ್ಯೋತ್ಸವ ಆಚರಣೆ ಮಾಡಿದ್ದಕ್ಕೂ ಸಾರ್ಥವಾಗುತ್ತದೆ ಎಂದರು.

ಸಾನಿದ್ಯ ವಹಿಸಿದ ರಾಜಶೇಖರ ಮಹಾಸ್ವಾಮಿಜಿ ಮಾತನಾಡಿ, ಕನ್ನಡ ನಮ್ಮ ಉಸಿರಿನ ಕಣ ಕಣದಲ್ಲೂ ತುಂಬಿಕೊಳ್ಳಬೇಕು ಕನ್ನಡ ಅಭಿಮಾನಿಗಳಾಗಿ ಕನ್ನಡವನ್ನು ಉಳಿಸಿಬೆಳಸಬೆಕು ಎಂದರು.

ಶಿವುಕುಮಾರ ಕಲಶೆಟ್ಟಿ ಮಾತನಾಡಿದರು. ಇದೆ ಸಂದರ್ಭದಲ್ಲಿ ಗ್ರಾಮದ ಸಂತೋಷ ಜಕಾಪುರೆ ಗಣಿತ ವಿಷಯದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಕ್ಕಾಗಿ ಸನ್ಮಾನಿಸಲಾಯಿತು. ಅಲ್ಲದೆ, ಕೊರೊನಾ ವಾರಿಯರ‍್ಸಗಳಾದ ಪೋಲಿಸ್ ಕಂದಾಯ ಪಶು ವೈದ್ಯರು ಆರೋಗ್ಯ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು.

ಇದೆ ಸಮಯದಲ್ಲಿ ಕಲಬುರಗಿ ಪೋಲಿಸ್ ಮಹಾಸಂಘದ ಅಧ್ಯಕ್ಷ ರವಿ ದೇಗಾಂವ, ಕರವೇ ಜಿಲ್ಲಾ ಸಂಚಾಲಕ ಮಹಾಂತೇಶ ಸಣಮನಿ, ಕವಿಸೇ ತಾಲೂಕು ಅಧ್ಯಕ್ಷ ಗುರು ಬಂಗರಗಿ, ಗ್ರಾಮದ ಮುಖಂಡರಾದ ಅಪ್ಪಾರಾವ ಸಗುಮಳೆ ಬಸವರಾಜ ನಿಂಬಾಳೆ ಅಮೃತ ಟೊಣ್ಣೆ, ರಾಜು ಸಿಂಗೆ ಸುರೇಶ ನಾಗಣಸೂರೆ, ಸೂರ್ಯಕಾಂತ ರಾಂಪುರೆ, ಬಸವರಾಜ ರಾಂಪುರೆ, ಶಿವರಾಯ ಪಾಟೀಲ, ಶಿವಾನಂದ ಪಾಟೀಲ ಇತರರು ವೇದಿಕೆಯಲ್ಲಿ ಇದ್ದರು.

ರಾಜಶೇಖರ ಮುಂದಿನಕೇರಿ ಸ್ವಾಗತಿಸಿದರು ಗುರಯ್ಯ ಸ್ವಾಮಿ ಸ್ವಾಗತಿಸಿದರು. ಶಿವಶರಣಯ್ಯ ಸ್ವಾಮಿ ಪ್ರಾರ್ಥನೆ ಹಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here