ಚಿತ್ತಾಪುರ: ತಾಲೂಕಿನ ಹಡಪದ ಸಮಾಜದ ಸಭೆ ನಡೆಯಿತು.
ಪಟ್ಟಣದ ಹಡಪದ ಸಮಾಜದ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಮೇಶ ಕೊಲ್ಲೂರ್ ಅವರು ಹಡಪದ ಸಮಾಜದ ಅಭಿವೃದ್ಧಿ,ಸಾಮಾಜಿಕ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಸಮಾಜ ಹಾಗೂ ಸಮಾಜದ ಜನರು ಸದೃಢರಾಗಬೇಕು.ಸಮಾಜದ ಕಸುಬಾದ ಕ್ಷೌರಿಕ ವೃತ್ತಿ ಮಾಡುವರಿಗೆ ಸರ್ಕಾರದಿಂದ ಇರುವ ಸೌಲಭ್ಯಗಳು ಮತ್ತು ಅಸಂಘಟಿತ ವಲಯದ ಕಾರ್ಮಿಕ ಇಲಾಖೆಯಿಂದ ಕ್ಷೌರಿಕ ಕಾರ್ಡ ಗಳನ್ನು ಮಾಡಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಕಲ್ಯಾಣಿ ಗುಂಡಗುರ್ತಿ,ಶೇಖಣ್ಣ ದಂಡಗುಂಡ,ಅಶೋಕ್ ವಾಡಿ,ಶಿವು ನಾಲವಾರ,ಅಶೋಕ್ ಚಿತ್ತಾಪುರ, ಮಹಾದೇವ ವಡಿಗೇರಿ,ಸಿದ್ದು ವಾಡಿ,ಗುರು,ಮಲ್ಲು ಲಾಡ್ಲಾಪುರ್,ಮಹದೇವ ರಾವೂರ್ ಸೇರಿದಂತೆ ಸಮಾಜ ಹಲವಾರು ಸಭೆಯಲ್ಲಿ ಇದ್ದರು.