ಕಲಬುರಗಿ: ಜಿಲ್ಲೆಯ ಎಲ್ಲಾ ತಾಲ್ಲೂಕಿಗಳ ಬೆಳೆ ಅತಿವೃಷ್ಟಿ-ಅನಾವೃಷ್ಟಿ ಹಾನಿಯಾದ ಹಿನ್ನೆಲೆಯಲ್ಲಿ ರೈತರಿಗೆ ಕೂಡಲೇ ಸರಕಾರ ಪರಿಹಾರ ನೀಡಬೇಕು ಎಂದು ಎಐಎಂಐಎಂ ಪಕ್ಷ ಸರಕಾರಕ್ಕೆ ಒತ್ತಾಯಿಸಿದೆ.
ಮುಂಗಾರು ಬೆಳೆಗಳಾದ ತೊಗರಿ, ಸೊಯಾಬಿನ್ ಬೆಳೆಗಳು ರೈತರು ಸಾಲ ಮಾಡಿಕೊಂಡು ಕಾತ ಬೀಜ ತಂದು ಬಿತ್ತಿದ್ದಾರೆ. ಆದರೆ ಮಳೆ ಹೆಚ್ಚಾಗಿದ್ದರಿಂದ ಜಮೀನಿನಲ್ಲಿ ಸಂಪೂರ್ಣ ನೀರು ನಿಂತು ಬೆಳೆಹಾನಿಯಾಗಿದೆ. ಜಮೀನಿನ ಅರಣಿಗಳು ಒಡೆದುಹೋಗಿ ಮಣ್ಣು ಕೊಚ್ಚಿಕೊಂಡು ಹೋಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಸರಕಾರ ಕೂಡಲೇ ಬೆಳೆ ಪರಿಹಾರ ಸಮೀಕ್ಷೆ ನಡೆಸಿ ಪರಿಹಾರ ಘೋಷಣೆಗೆ ಮುಂದಾಗಬೇಕೆಂದು ಉತ್ತರ ಮತಕ್ಷೇತ್ರದ ಶಾಬಜಾರ್ ಬ್ಲಾಕ್ ಅಧ್ಯಕ್ಷರಾದ ಮೋದಿನ ಪಟೇಲ್ ಅಣಬಿ ಆಗ್ರಹಿಸಿದ್ದಾರೆ.
ಪರಿಹಾರ ಘೋಷಣೆಯಲ್ಲಿ ಸರಕಾರ ಹಿಂದೇಟ್ಟು ಹಾಕಿದರೆ ಪಕ್ಷದ ಮುಖಂಡರಾದ ಇಲಿಯಾಸ್ ಸೇಠ್ ಬಾಗಬಾನ್, ಜಿಲ್ಲಾಧ್ಯಕ್ಷರಾದ ಇಕ್ಬಾಲ್ ಅಹಮದ್ ಶಿನ್ನಿಫರೋಶ್ ಮತ್ತು ಪಕ್ಷದ ಮುಖಂಡರ ನೇತೃತ್ವದಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ಪತ್ರಿಕಾ ಪ್ರಕಟಣೆ ನೀಡುವ ಮೂಲಕ ಎಚ್ಚರಿಕೆ ನೀಡಿ ಒತ್ತಾಯಿಸಿದ್ದಾರೆ.